Asianet Suvarna News Asianet Suvarna News

Organ Donation: ಸಾವಿನಲ್ಲೂ 6 ಜನಕ್ಕೆ ಜೀವದಾನ ಮಾಡಿದ ಯುವಕ

*   ರಸ್ತೆ ಅಪಘಾತದಲ್ಲಿ 26 ವರ್ಷದ ಯುವಕನ ಮೆದುಳು ನಿಷ್ಕ್ರೀಯ
*   ಮಣಿಪಾಲ್‌ ಆಸ್ಪತ್ರೆ ವೈದ್ಯರಿಂದ ಅಂಗಾಂಗ ದಾನ ಪಡೆದು ಕಸಿ
*   ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬೆಂಗಳೂರು ಮೂಲದ 26 ವರ್ಷದ ಯುವಕ
 

Brain Dead Young Man Gives Life to 6 Multiple Organ Failure Patients in Bengaluru grg
Author
Bengaluru, First Published Jan 29, 2022, 9:13 AM IST

ಬೆಂಗಳೂರು(ಜ.29):  ನಗರದಲ್ಲಿ ಅಪಘಾತಕ್ಕೀಡಾಗಿ(Accident) ಮೆದುಳು ನಿಷ್ಕ್ರೀಯಗೊಂಡಿದ್ದ(Brain Dead) ಯುವಕನೊಬ್ಬ ಬಹು ಅಂಗಾಂಗ ದಾನ(Multiple Organ Donation) ಮಾಡುವ ಮೂಲಕ ಆರು ಜನರರಿಗೆ ಜೀವದಾನ ನೀಡಿದ್ದಾನೆ.

ಕಳೆದ ಎರಡು ವಾರಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬೆಂಗಳೂರು(Bengaluru) ಮೂಲದ 26 ವರ್ಷದ ಯುವಕ ತುರ್ತು ಚಿಕಿತ್ಸೆಗಾಗಿ(Treatment) ವರ್ತೂರು ರಸ್ತೆಯ ಮಣಿಪಾಲ್‌ ಆಸ್ಪತ್ರೆಗೆ(Manipal Hospital) ದಾಖಲಿಸಲಾಗಿತ್ತು. ಹಲವಾರು ಪರೀಕ್ಷೆಗಳು ಮತ್ತು ಚಿಕಿತ್ಸೆಗಳ ನಂತರವೂ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಚೇತರಿಕೆ ಕಂಡುಬರಲಿಲ್ಲ. ಹೀಗಾಗಿ ಆ ವ್ಯಕ್ತಿಯ ಮೆದುಳು ನಿಷ್ಕ್ರೀಯವಾಗಿದೆ ಎಂದು ವೈದ್ಯರು(Doctors) ಘೋಷಿಸಿದ್ದರು. ಬಳಿಕ ಅಂಗಾಂಗ ದಾನಕ್ಕೆ ಯುವಕನ ಕುಟುಂಬದ ಸದಸ್ಯರ ಮನವೊಲಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದರು.

Organ Donation; ಎಲ್ಲ ಅಂಗಾಂಗ ದಾನ, ಸಾವಲ್ಲೂ ಸಾರ್ಥಕತೆ ಮೆರೆದ ಮಂಡ್ಯದ ರೈತ ಹೇಮಂತ್

‘ಮೃತ ಯುವಕನ ದೇಹದಿಂದ ಆರು ಅಂಗಗಳನ್ನು ತೆಗೆದುಕೊಳ್ಳಲಾಗಿದ್ದು, ಅಂಗಾಂಗ ವೈಫಲ್ಯದಿಂದಾಗಿ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದವರಿಗೆ ಕಸಿ ಮಾಡಲಾಗಿದೆ. ವ್ಯಕ್ತಿಯ ಹೃದಯವನ್ನು(Heart) ಹಳೇ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್‌ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 38 ವರ್ಷದ ಪುರುಷನಿಗೆ, ಯಕೃತ್‌(Liver) ಅನ್ನು 66 ವರ್ಷದ ಹಿರಿಯ ನಾಗರಿಕರೊಬ್ಬರಿಗೆ, ಒಂದು ಮೂತ್ರ ಪಿಂಡವನ್ನು(Kidney) ವರ್ತೂರು ರಸ್ತೆಯ ಮಣಿಪಾಲ್‌ ಹಾಸ್ಪಿಟಲ್‌ಗೆ ದಾಖಲಾಗಿದ್ದ 61 ವರ್ಷದ ರೋಗಿಗೆ(Patient), ಮತ್ತೊಂದು ಮೂತ್ರಪಿಂಡವನ್ನು 48 ವರ್ಷದ ಪುರುಷರೊಬ್ಬರಿಗೆ ಅಳವಡಿಸಲಾಗಿದೆ. ಕಾರ್ನಿಯಾಗಳನ್ನು ಶಂಕರ ನೇತ್ರಾಲಯಕ್ಕೆ ಕಳುಸಿಕೊಡಲಾಗಿದ್ದು, ಇಬ್ಬರು ಅಂಧರಿಗೆ ನೀಡಬಹುದು’ ಎಂದು ಮಣಿಪಾಲ್‌ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ದೇಹದ ಎಲ್ಲ ಅಂಗಾಂಗ ದಾನ ಮಾಡಿದ ಡಾ. ಧೀರಜ್‌

ಧಾರವಾಡ: ಭಾರತೀಯ ರೆಡ್‌ ಕ್ರಾಸ್‌(Indian Red Cross) ಸಂಸ್ಥೆಯ ಸದಸ್ಯ ಡಾ. ಧೀರಜ ವೀರನಗೌಡ(Dr Dheeraj Veeranagouda) ಅವರು ಜ. 26ರ ಗಣರಾಜ್ಯೋತ್ಸವದ ದಿನವೇ ಜನಿಸಿದ್ದು, ಈ ನಿಮಿತ್ತ ವಿಶೇಷ ಕಾರ್ಯಗಳನ್ನು ಮಾಡಿದ್ದಾರೆ.

ಬುಧವಾರ 46ನೇ ಬಾರಿಗೆ ರಕ್ತದಾನ(Blood ಧonation) ಮಾಡಿದ್ದಲ್ಲದೇ ನವನಗರದ ಕ್ಯಾನ್ಸರ್‌ ಆಸ್ಪತ್ರೆಯ ಬಳಿಯ ರಸ್ತೆಯ ಸ್ವಚ್ಛತಾ ಕಾರ್ಯ ಮಾಡಿದರು. ಇದಕ್ಕಿಂತ ಹೆಚ್ಚಾಗಿ ತಮ್ಮ ದೇಹದ ಎಲ್ಲ ಅಂಗಾಂಗಗಳನ್ನು ಎಸ್‌ಡಿಎಂ ಆಸ್ಪತ್ರೆಗೆ(SDM Hospital) ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ರಕ್ತದಾನ ಮಹಾದಾನ ಎನ್ನುತ್ತಾರೆ. ಹೀಗಾಗಿ ನಿರಂತರವಾಗಿ ರಕ್ತದಾನ ಮಾಡುತ್ತೇನೆ. ಜನ್ಮದಿನ ನಿಮಿತ್ತ ಪ್ರತಿ ವರ್ಷ ಸ್ವಚ್ಛತಾ ಕಾರ‍್ಯ ಮಾಡುತ್ತಿದ್ದು, ಈ ಬಾರಿ ಇಡೀ ದೇಹವನ್ನು ದಾನ ಮಾಡಿದ್ದೇನೆ. ಈ ಕಾರ‍್ಯ ಮತ್ತೊಬ್ಬರಿಗೆ ಪ್ರೇರಣೆ ಆಗಲಿ ಎಂಬುದು ಉದ್ದೇಶ ಎಂದು ಡಾ.ಧೀರಜ ವೀರನಗೌಡ ಹೇಳಿದರು.

7 ಜನರಿಗೆ ಬದುಕು ಕೊಟ್ಟು ಉಸಿರು ನಿಲ್ಲಿಸಿದ ಸಂಚಾರಿ ವಿಜಯ್!

ಡಾ. ಧೀರಜ ಅವರು ರೆಡ್‌ಕ್ರಾಸ್‌ನಲ್ಲಿ ಸಕ್ರಿಯ ಸದಸ್ಯರು. ಪ್ರತಿ ಕಾರ್ಯಕ್ರಮಕ್ಕೂ ಹಾಜರಾಗಿದ್ದು ಸಮಾರಂಭಗಳನ್ನು ಯಶಸ್ವಿ ಮಾಡುತ್ತಾರೆ. ಈಗಾಗಲೇ ಅವರು ಸ್ಮಶಾನ, ರಸ್ತೆಗಳನ್ನು ಸ್ವಚ್ಛತಾ ಅಭಿಯಾನದ ಮೂಲಕ ಸ್ವಚ್ಛಗೊಳಿಸಿದ್ದು ಈಗ ಜನ್ಮದಿನ ನಿಮಿತ್ತ ಮಾಡಿದ ಎಲ್ಲ ಕಾರ‍್ಯಗಳು ಶ್ಲಾಘನೀಯ ಎಂದು ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಡಾ. ಕವನ ದೇಶಪಾಂಡೆ, ಡಾ. ಉಮೇಶ ಹಳ್ಳಿಕೇರಿ, ಮಹಾವೀರ ಉಪಾದ್ಯಾಯ ಹಾಗೂ ಮಾರ್ತಾಂಡಪ್ಪ ಕತ್ತಿ ಹೇಳುತ್ತಾರೆ.

ತಾಯಿಯ ಮೆದುಳು ನಿಷ್ಕ್ರೀಯ, ಅಂಗಾಂಗ ದಾನ

ಮಳವಳ್ಳಿ: ಅನಾರೋಗ್ಯದಿಂದ ಮಿದುಳು ನಿಷ್ಕ್ರೀಯಗೊಂಡಿದ್ದ ತಾಯಿಯ ಅಂಗಾಂಗಗಳನ್ನು ದಾನ ಮಾಡಿದ ಪುತ್ರ ಐವರಿಗೆ ಹೊಸ ಜೀವನ ನೀಡಿ ಸಾರ್ಥಕತೆ ಮೆರೆದಿರುವ ಘಟನೆ ಜ.15 ರಂದು ತಾಲೂಕಿನ ಕೋರೇಗಾಲ ಗ್ರಾಮದಲ್ಲಿ ನಡೆದಿತ್ತು. ಗ್ರಾಮದ ಪುಟ್ಟರಾಮೇಗೌಡರ ಪತ್ನಿ ನಾಗಮ್ಮ(45) ಇವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪುತ್ರ ಚರಣ್‌ ಹಾಗೂ ಕುಟುಂಬಸ್ಥರು ಮಾದರಿಯಾಗಿ ಐವರು ಕುಟುಂಬಗಳ ಬಾಳಿಗೆ ಬೆಳಕು ನೀಡಿ ಮಾನವೀಯತೆ ಮರೆದಿದ್ದರು.
 

Follow Us:
Download App:
  • android
  • ios