ಹಿಂದೂ ಧರ್ಮ ಉಳಿವಿಗೆ ಬ್ರಾಹ್ಮಣರ ಕೊಡುಗೆ ಅಪಾರ: ಸಚಿವ ಸುಧಾಕರ್‌

ವಿಪ್ರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನಿಸಿದ ಸಚಿವ ಡಾ.ಕೆ.ಸುಧಾಕರ್‌ ಅಭಿಮತ

Brahmins Have contributed a lot to the survival of Hinduism says Dr K Sudhakar mnj

ಚಿಕ್ಕಬಳ್ಳಾಪುರ (ಫೆ. 28):  ನಂಬಿಕೆ, ಪ್ರೀತಿ, ವಿಶ್ವಾಸಕ್ಕೆ ಪಾತ್ರವಾದ ಬ್ರಾಹ್ಮಣರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಭಾರತದ ಸಂಸ್ಕೃತಿ, ಹಿಂದು ಧರ್ಮ ಉಳಿಯುವಲ್ಲಿ ಈ ಸಮುದಾಯದ ಕೊಡುಗೆ ಅಪಾರ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಭಾನುವಾರ ಬ್ರಾಹ್ಮಣರ ಸಂಘ ತಾಲೂಕು ಘಟಕ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷದಿಂದ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುತ್ತಿರುವ ಬ್ರಾಹ್ಮಣ ಸಮುದಾಯ ವಿಶೇಷ ಗೌರವ ಹೊಂದಿದೆ ಎಂದರು.

ಬ್ರಾಹ್ಮಣರು ಮೀಸಲು ಸೌಲಭ್ಯ ಪಡೆಯಬೇಕು: ಭಾರತಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಅಂದಿನಿಂದಲೂ ಬ್ರಾಹ್ಮಣರು ತಮ್ಮದೇ ಆದ ಗೌರವ ಹೊಂದಿದ್ದಾರೆ. ಮೀಸಲಾತಿ ಕೇವಲ ಜಾತಿ, ಧರ್ಮಕ್ಕೆ ಸೀಮಿತವಾಗಿತ್ತು. ಆದರೆ, ಮೇಲ್ಜಾತಿಯಲ್ಲೂ ಹಿಂದುಳಿದರುವುದನ್ನು ಮನಗಂಡ ಕೇಂದ್ರ ಸರ್ಕಾರ, ಶೇ.10 ಮೀಸಲಾತಿ ನೀಡಿದೆ. ‌

ಇದನ್ನೂ ಓದಿ: Hijab Row 'ಹಿಜಾಬ್‌ಗೆ ಅವಕಾಶ ಕೊಡಿ, ನಾನೊಬ್ಬ ಸಾಂಪ್ರದಾಯಿಕ ಬ್ರಾಹ್ಮಣನಾಗಿ ಮನವಿ ಮಾಡ್ತೇನೆ'

ಬ್ರಾಹ್ಮಣರು ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಬೌದ್ಧ ಧರ್ಮದ ಸುಳಿಗೆ ಸಿಲುಕಿದ ವಿಶ್ವದ ನಾನಾ ದೇಶಗಳು ಆ ಧರ್ಮಕ್ಕೆ ಮತಾಂತರ ಆದವು. ಆದರೆ, ಅದನ್ನು ತಡೆದು ಭಾರತೀಯರ ಹಿಂದು ಧರ್ಮವನ್ನು ಉಳಿಸಿದ ಕೀರ್ತಿ ಆದಿ ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂತು ತಿಳಿಸಿದ ಅವರು, ಭಾರತೀಯ ಸಂಸ್ಕೃತಿ, ಆಚಾರ ವಿಚಾರ ವಿಶ್ವಮಾನ್ಯವಾಗಲು ಬ್ರಾಹ್ಮಣ ಸಮುದಾಯ ಕಾರಣ ಎಂದು ಹೇಳಿದರು.

ವಿಪ್ರರಲ್ಲಿ ವಿಶೇಷ ಶಕ್ತಿ: ಜ್ಯೋತಿಷಿ ಶ್ರೀ ವೆಲ್ಲಾಲ ಸತ್ಯನಾರಾಯಣಶಸ್ತಿ ಮಾತನಾಡಿ, ವಿಪ್ರರಲ್ಲಿ ವಿಶೇಷ ಶಕ್ತಿ ಇದೆ. ಒಂದಾದರೆ, ಏನುಬೇಕಾದರೂ ಮಾಡಬಹುದಾಗಿದೆ. ದೃಢ ಸಂಕಲ್ಪ ಇದ್ದರೆ ಸಾಧನೆ ಹಾದಿ ಸುಗಮವಾಗಲಿದೆ ಎಂದು ಹೇಳಿದ ಅವರು, ಮಕ್ಕಳು ದೇಶದ ಆಧಾರದ ಸ್ತಂಭ. ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಬೇಕು. ವಿದ್ಯಾವಂತರಾದರೆ ವಿನಯವಂತರಾಗಬಹುದು ಎಂದು ತಿಳಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಶ್ರೀ ಮಹಾಲಕ್ಷ್ಮೇ ಕಮಲಮ್ಮ ಸೇವಾ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಅಶೋಕ್‌ ಹಾರನಹಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಬ್ರಾಹ್ಮಣರ ಸಂಘ ಜಿಲ್ಲಾಧ್ಯಕ್ಷ ಕೆ.ಎಸ್. ವೆಂಕಟೇಶಯ್ಯ, ಬ್ರಾಹ್ಮಣ ಮಹಾಸಭಾ ಹಿರಿಯ ಉಪಾಧ್ಯಕ್ಷ ಹಿರಣ್ಣಯ್ಯ, ಕಾರ್ಯದರ್ಶಿ ಮುರಳಿ, ಸದಸ್ಯ ಎಸ್‌ .ಎನ್. ರಮೇಶ್, ಬ್ರಾಹ್ಮಣರ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಕೆ.ಆರ್‍. ವೆಂಕಟೇಶಮೂರ್ತಿ, ಮಾಜಿ ಅಧ್ಯಕ್ಷ ಎಚ್‌. ಎಸ್. ಶೇಷಭಟ್ಟ, ಗೌರವಾಧ್ಯಕ್ಷ ಎಂ.ವೇಣುಗೋಪಾಲ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ವೈ.ಎಲ್. ಹನುಮಂತರಾವ್, ಗೊರವನಹಳ್ಳಿಯ ಪ್ರಸನ್ನ, ಬ್ರಾಹ್ಮಣ ನೌಕರರ ಸಂಘ ತಾಲ್ಲೂಕು ಅಧ್ಯಕ್ಷ ಜೆ.ಎನ್. ರಾಘವೇಂದ್ರ ಇದ್ದರು.

ಇದನ್ನೂ ಓದಿ: Tamil Nadu: 40,000 ಬ್ರಾಹ್ಮಣರಿಗೆ ವಧುವಿನ ಕೊರತೆ : ಉತ್ತರಪ್ರದೇಶ, ಬಿಹಾರದಲ್ಲಿ ಹುಡುಕಾಟ!

ಬ್ರಾಹ್ಮಣ ಎಂಬುವುದು ಜಾತಿಯಲ್ಲ: ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಮತ್ತು ಹಿರಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ದಿನೇಶ್ ಶರ್ಮಾ ಅವರು ಬ್ರಾಹ್ಮಣ ಎಂಬುವುದು ಒಂದು ಜಾತಿಯಲ್ಲ, ಆದರೆ ಜೀವನ ಸಾಗಿಸುವ ಉತ್ತಮ ವಿಧಾನ ಎಂದು ಭಾನುವಾರ ಹೇಳಿದ್ದಾರೆ. ಪಕ್ಷ ಭೇದವಿಲ್ಲದೆ ಎಲ್ಲರಿಗಾಗಿ ದುಡಿಯುತ್ತಿರುವುದನ್ನು ಉಲ್ಲೇಖಿಸಿ ಅವರು ಈ ರೀತಿ ಹೇಳಿದ್ದಾರೆ. ಗೌತಮ್ ಬುದ್ ನಗರ ಜಿಲ್ಲೆಯ ಜೇವಾರ್ ನಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶರ್ಮಾ, ವಿರೋಧ ಪಕ್ಷಗಳು "ಜಾತಿವಾದಿಗಳು" ಎಂದು ಟೀಕಿಸಿದರು.

ಜೇವರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಧೀರೇಂದ್ರ ಸಿಂಗ್ ಪರ ಪ್ರಚಾರ ನಡೆಸುತ್ತಿರುವ ಶರ್ಮಾ ಅವರು ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದಾದ್ಯಂತ ಸಂಚರಿಸುತ್ತಿದ್ದು, ಬ್ರಾಹ್ಮಣವಾದದ ಬಗ್ಗೆ ಮತ್ತು ಜಾತೀಯತೆಯ ಬಗ್ಗೆ ಪಕ್ಷದ ನಿಲುವಿನ ಬಗ್ಗೆ ಆಗಾಗ್ಗೆ ಕೇಳಲಾಗುತ್ತದೆ ಎಂದು ಹೇಳಿದರು. ಯಾರೋ ಬ್ರಾಹ್ಮಣರ ಬಗ್ಗೆ ನನ್ನ ದೃಷ್ಟಿಕೋನವನ್ನು ತಿಳಿದುಕೊಳ್ಳಲು ಬಯಸಿದ್ದರು, ನಾನು ಬಿಜೆಪಿಗೆ 'ಸಬ್ಕಾ ಸಾಥ್ ಸಬ್ಕಾ ವಿಕಾಸ್' ಬೇಕು ಎಂದು ಹೇಳಿದೆ. 

ಪ್ರತಿಯೊಂದು ಜಾತಿಗೂ ತನ್ನದೇ ಆದ ಪ್ರಾಮುಖ್ಯತೆ ಇದೆ ಅದಕ್ಕಾಗಿಯೇ ನಮಗೆ ಎಲ್ಲಾ ಜಾತಿಗಳ ಬೆಂಬಲವಿದೆ. ಆದರೆ ನಾನು ಬ್ರಾಹ್ಮಣತ್ವದೊಂದಿಗೆ ಸಂಬಂಧ ಹೊಂದಿದ್ದಾಗ ನಾನು ಹೌದು ಎಂದು ಹೇಳುತ್ತೇನೆ, ನಾನು ಬ್ರಾಹ್ಮಣ ಮತ್ತು ನಾನು ಅದರ ಬಗ್ಗೆ ಹೆಮ್ಮೆಪಡುತ್ತೇನೆ. ನಾನು ಅದನ್ನು ಯಾವುದೇ ಅಗೌರವವಾಗಿ ನೋಡುವುದಿಲ್ಲ.

Latest Videos
Follow Us:
Download App:
  • android
  • ios