ಧಾರ​ವಾಡ ಜಿಲ್ಲೆ​ಯಲ್ಲಿ 1650 ಕ್ಕೂ ಹೆಚ್ಚು ಬಿಪಿ​ಎಲ್‌ ಕಾರ್ಡ್‌​ಗಳು ಸರ್ಕಾ​ರ​ಕ್ಕೆ ವಾಪಸ್‌

ಸರ್ಕಾರಿ ನೌಕ​ರರು ಸೇರಿ​ದಂತೆ ಧಾರ​ವಾಡ ಜಿಲ್ಲೆ​ಯಲ್ಲಿ 1650 ಬಿಪಿ​ಎಲ್‌ ಪಡಿ​ತರ ಚೀಟಿ​ಗಳು ವಾಪ​ಸ್‌| ತಪ್ಪು ಮಾಹಿತಿ ನೀಡಿ ಬಿಪಿ​ಎಲ್‌ ಪಡೆ​ದು​ಕೊಂಡ​ವರಿಗೆ ಜಾಲ ಬೀಸಿ​ರುವ ಆಹಾರ ಇಲಾಖೆ ಅಧಿ​ಕಾ​ರಿ​ಗ​ಳು| ಅಕ್ರ​ಮ​ವಾಗಿ ಪಡೆದ ಬಿಪಿ​ಎಲ್‌ ಸರಂಡರ್‌ ಮಾಡದೇ ಇದ್ದರೆ ಕ್ರಿಮಿ​ನಲ್‌ ಮೊಕ​ದ್ದಮೆ ಎಚ್ಚ​ರಿ​ಕೆ|
 

BPL Cards Return to Government in Dharwad District

ಬಸ​ವ​ರಾಜ ಹಿರೇ​ಮ​ಠ

ಧಾರ​ವಾ​ಡ[ಡಿ.14]:  ಕಡು ಬಡ​ವ​ರಿಗೆ ಸರ್ಕಾರ ನೀಡುತ್ತಿ​ರುವ ಬಿಪಿ​ಎಲ್‌ ಕಾರ್ಡ್‌ ಪಡೆದು, ಪಡಿ​ತರ ಪಡೆ​ಯು​ತ್ತಿದ್ದ ನೂರಾರು ಅಕ್ರಮ ಫಲಾ​ನು​ಭ​ವಿ​ಗಳು ಇದೀಗ ಬೆಚ್ಚಿ ಬೀಳುವಂತಾಗಿದೆ. ಸರ್ಕಾ​ರದ ಖಡಕ್‌ ಎಚ್ಚ​ರಿ​ಕೆಗೆ ಬೆದ​ರಿ ಅನಿ​ವಾ​ರ್ಯ​ವಾಗಿ ಸರ್ಕಾ​ರಕ್ಕೆ ಪಡಿ​ತರ ಚೀಟಿ​ಗ​ಳನ್ನು ವಾಪಸ್‌ ಮಾಡು​ತ್ತಿ​ದ್ದಾರೆ.

ಸರ್ಕಾ​ರಕ್ಕೆ ತಪ್ಪು ಮಾಹಿತಿ ಒದ​ಗಿ​ಸುವ ಮೂಲಕ ಪಡೆದ ಬಿಪಿ​ಎಲ್‌ ಪಡಿ​ತರ ಚೀಟಿಗಳನ್ನು ಸ್ವಯಂಪ್ರೇರ​ಣೆ​ಯಿಂದ ಸರ್ಕಾ​ರಕ್ಕೆ ಮರ​ಳಿ​ಸಿ​ದರೆ ಉತ್ತಮ, ಇಲ್ಲದೇ ಹೋದಲ್ಲಿ ತಾವು ಪಡಿ​ತರ ಚೀಟಿ ಪಡೆದ ದಿನ​ದಿಂದ ಇಲ್ಲಿಯ ವರೆಗೂ ಪಡೆದ ಪಡಿ​ತರವನ್ನು ಹಣದ ರೂಪ​ದ​ಲ್ಲಿ ಮರ​ಳಿ​ಸು​ವು​ದ​ಲ್ಲದೇ ಕ್ರಿಮಿ​ನಲ್‌ ಪ್ರಕ​ರಣ ದಾಖ​ಲಿ​ಸಲಾ​ಗು​ವುದು ಎಂದು ಕಳೆದ ಸೆಪ್ಟೆಂಬ​ರ್‌ ​ತಿಂಗ​ಳಲ್ಲಿ ರಾಜ್ಯ ಸರ್ಕಾ​ರ ಆಹಾರ ಇಲಾಖೆ ಮೂಲಕ ಎಚ್ಚ​ರಿ​ಸಿತ್ತು.

ಈ ಹಿನ್ನೆ​ಲೆ​ಯಲ್ಲಿ ಕಳೆದ ಮೂರು ತಿಂಗ​ಳಲ್ಲಿ ಧಾರ​ವಾಡ ಜಿಲ್ಲೆಯ 121 ಸರ್ಕಾರಿ ನೌಕ​ರರು, ಕಾರ್ಪೊ​ರೇಟ್‌ ವಲ​ಯ​ದಿಂದ 85, ಮಿತಿ​ಗಿಂತ ಹೆಚ್ಚಿನ ಭೂ ಹಿಡು​ವಳಿ ಹೊಂದಿ​ರು​ವ​ವರು 864, ನಾಲ್ಕು ಚಕ್ರ ವಾಹನ ಮಾಲೀ​ಕರು 45 ಹಾಗೂ ಇತರ ಕಾರ​ಣ​ಗ​ಳಿಂದ 535 ಸೇರಿ​ದಂತೆ ಒಟ್ಟು 1650 ಅಕ್ರಮ ಫಲಾ​ನು​ಭ​ವಿ​ಗಳು ತಮ್ಮ ಪಡಿ​ತರ ಚೀಟಿ​ಯನ್ನು ಸ್ವಯಂ ಪ್ರೇರ​ಣೆ​ಯಿಂದ ವಾಪಸ್‌ ಮಾಡಿ​ದ್ದಾರೆ. ಈ ಎಲ್ಲ​ರಿಗೂ ಪ್ರತಿ ತಿಂಗಳು . 12.96 ಲಕ್ಷ ಮೌಲ್ಯದ 462 ಕ್ವಿಂಟಲ್‌ ಪಡಿ​ತರ ಹಂಚಿ​ಕೆ​ಯಾ​ಗು​ತ್ತಿತ್ತು ಎನ್ನು​ವುದು ಗಮ​ನಾರ್ಹ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

1650 ಜನರು ಸ್ವಯಂಪ್ರೇರ​ಣೆ​ಯಿಂದ ಪಡಿ​ತರ ಚೀಟಿ​ಗ​ಳನ್ನು ವಾಪಸ್‌ ಮಾಡಿ​ದ್ದಾರೆ. ಆದರೆ, ಇನ್ನೂ ಸಾಕಷ್ಟುಜನರ ಬಳಿ ಅಕ್ರ​ಮ​ವಾಗಿ ಪಡೆ​ದಿ​ರುವ ಬಿಪಿ​ಎಲ್‌ ಕಾರ್ಡ್‌​ಗ​ಳಿವೆ. ಆದ​ರೆ, ಅವು ಇನ್ನೂ ವಾಪ​ಸಾಗಿಲ್ಲ. ಈ ಹಿನ್ನೆ​ಲೆ​ಯಲ್ಲಿ ಆಹಾರ ಇಲಾಖೆ ಸಹ ಸುಮ್ಮನೆ ಕುಳಿ​ತಿಲ್ಲ. ಡಿಸೆಂಬರ್‌ ತಿಂಗ​ಳೊ​ಳಗೆ ಸ್ವಯಂಪ್ರೇರ​ಣೆ​ಯಿಂದ ವಾಪಸ್‌ ಮಾಡದೇ ಹೋದಲ್ಲಿ ಅವರ ವಿರುದ್ಧ ಕಾರ್ಯಾ​ಚ​ರಣೆ ನಡೆ​ಸಲು ಇಲಾ​ಖೆ ಸಿದ್ಧ​ವಾ​ಗಿದೆ.

ಈಗಾ​ಗಲೇ ಆರ್‌​ಟಿಒ ಕಚೇ​ರಿ​ಯಲ್ಲಿ ನಾಲ್ಕು ಚಕ್ರ ವಾಹನ ಹೊಂದಿ​ರುವ ಬಿಪಿ​ಎಲ್‌ ಕಾರ್ಡ್‌ ಫಲಾ​ನು​ಭ​ವಿ​ಗಳ ಪಟ್ಟಿಸಿದ್ಧ​ಪ​ಡಿ​ಸಿ​ದ್ದಾ​ರೆ. ನಗ​ರ​ದಲ್ಲಿ 1 ಸಾವಿರ ಚದರ ಅಡಿ ಸ್ವಂತ ಮನೆ ಹೊಂದಿ​ದ​ವ​ರಿಗೂ ಬಿಪಿ​ಎಲ್‌ ಕಾರ್ಡ್‌ ಪಡೆ​ಯು​ವಂತಿಲ್ಲ. ಹೀಗಾಗಿ ಪಾಲಿ​ಕೆ​ಯಿಂದ ಈ ಮಾಹಿತಿ ಸಹ ತರಿ​ಸಿ​ಕೊ​ಳ್ಳ​ಲಾ​ಗಿದೆ. ಜತೆಗೆ ತಹ​ಸೀಲ್ದಾರ್‌ ಕಚೇ​ರಿ​ಯಿಂದ ಫಲಾ​ನು​ಭವಿ ಭೂಮಿ ಹೊಂದಿ​ರುವ ಮಾಹಿತಿ ಮತ್ತು ಕುಟುಂಬದ ವಾರ್ಷಿಕ . 1.20 ಲಕ್ಷ​ಕ್ಕಿಂತಲೂ ಹೆಚ್ಚು ಆದಾಯ ಹೊಂದಿ​ರುವ ಕುಟುಂಬ​ಗಳ ಮಾಹಿತಿ ಸಹ ಪಡೆ​ದಿದ್ದು, ಇನ್ನೇನು ಕಾರ್ಯಾ​ಚ​ರಣೆ ಮಾತ್ರ ಬಾಕಿ ಇದೆ.

ಇದ​ರೊಂದಿಗೆ ಇ-ಕೆ​ವೈಸಿ ಮೂಲಕ ಬಿಪಿ​ಎಲ್‌ ಕುಟುಂಬದ ಪ್ರತಿ​ಯೊಬ್ಬರ ಬಯೋ ಅಥೆಂಟಿ​ಕೇ​ಶನ್‌ ಮಾಡಲಾ​ಗು​ತ್ತಿದ್ದು, ಈ ಮೂಲ​ಕವೂ ತೀರಿ​ಹೋ​ದ​ವರ, ವಲಸೆ ಹೋದ​ವರ ಹಾಗೂ ಅಕ್ರ​ಮ​ ಫಲಾ​ನು​ಭ​ವಿ​ಗಳ ಸಂಖ್ಯೆ ಕಡಿ​ಮೆ​ಯಾ​ಗ​ಲಿದೆ. ಸದ್ಯಕ್ಕೆ 12.19 ಲಕ್ಷ ಜನರ ಪೈಕಿ 5.95 ಲಕ್ಷ ಇ-ಕೆವೈಸಿ ಪ್ರಕ್ರಿಯೆ ಅಂದರೆ ಶೇ. 46.43ರಷ್ಟುಮುಕ್ತಾ​ಯ​ವಾ​ಗಿದೆ. ಆದಷ್ಟುಶೀಘ್ರ ಪೂರ್ಣ​ಗೊ​ಳ್ಳ​ಲಿ​ದೆ. ಪ್ರಸ್ತುತ ಜಿಲ್ಲೆ​ಯಲ್ಲಿ ಒಟ್ಟು 3,59,879 ಬಿಪಿ​ಎಲ್‌ ಹಾಗೂ 21,530 ಅಂತ್ಯೋ​ದಯ ಕುಟುಂಬ​ಗಳು ಪಡಿ​ತರ ಚೀಟಿ ಹೊಂದಿವೆ ಎಂದು ಆಹಾರ ಇಲಾಖೆ ಅಧಿ​ಕಾ​ರಿ​ಗಳು ಮಾಹಿತಿ ನೀಡು​ತ್ತಾ​ರೆ.

ಈ ಬಗ್ಗೆ ಮಾತನಾಡಿದ ಆಹಾರ ಇಲಾಖೆ ಹಿರಿಯ ಉಪ ನಿರ್ದೇ​ಶ​ಕ  ಸದಾ​ಶಿವ ಮಿರ್ಜಿ ಅವರು, ಸರ್ಕಾ​ರಕ್ಕೆ ತಪ್ಪು ಮಾಹಿತಿ ನೀಡಿ ಬಿಪಿ​ಎಲ್‌ ಕಾರ್ಡ್‌ ಮಾಡಿ​ಸಿ​ಕೊಂಡ ಫಲಾ​ನು​ಭ​ವಿ​ಗಳು ಆದಷ್ಟು ಬೇಗ ನ್ಯಾಯ​ಬೆಲೆ ಅಂಗ​ಡಿ​ಗಳ ಮೂಲಕ ಸರ್ಕಾ​ರಕ್ಕೆ ವಾಪಸು ಮಾಡ​ಬೇಕು. ಇಲ್ಲದೇ ಹೋದಲ್ಲಿ ಅಂಥ​ವರ ಪಟ್ಟಿ ತಮ್ಮ​ಲ್ಲಿದ್ದು ಕಾನೂ​ನಿನ ಕ್ರಮ ಕೈಗೊ​ಳ್ಳ​ಬೇ​ಕಾ​ಗು​ತ್ತದೆ. 2016ರಲ್ಲಿ ಇದೇ ರೀತಿ ಕಾರ್ಯಾ​ಚ​ರಣೆ ನಡೆ​ಸಿ​ದ್ದರ ಫಲ​ವಾಗಿ 356 ಸರ್ಕಾರಿ ನೌಕ​ರ​ರಿಂದ 43.42 ಲಕ್ಷ ದಂಡ ಪಡೆ​ದಿ​ರುವು​ದನ್ನು ಸ್ಮರಿ​ಸ​ಬ​ಹು​ದು ಎಂದು ತಿಳಿಸಿದ್ದಾರೆ.

ಅಕ್ರ​ಮ​ವಾಗಿ ಬಿಪಿ​ಎಲ್‌ ಕಾರ್ಡ್‌ ಪಡೆ​ದ​ವರ ಪಟ್ಟಿ

ತಾಲೂ​ಕು ​ ಒಪ್ಪಿ​ಸಿದ ಕಾರ್ಡ್‌ ಸಂಖ್ಯೆ

ಧಾರ​ವಾ​ಡ ಶಹ​ರ 262

ಧಾರ​ವಾಡ ಗ್ರಾಮೀಣ 183

ಹುಬ್ಬ​ಳ್ಳಿ ಶಹ​ರ 208

ಹುಬ್ಬಳ್ಳಿ ಗ್ರಾಮೀ​ಣ 66

ಕಲ​ಘ​ಟ​ಗಿ 50

ಕುಂದ​ಗೋ​ಳ 375

ನವ​ಲ​ಗುಂದ 506

ಒಟ್ಟು 1650

Latest Videos
Follow Us:
Download App:
  • android
  • ios