ಬೆಳಗಾವಿ: ಜಮೀನು ವಿವಾದ, ಯೋಧನ ಕುಟುಂಬಕ್ಕೆ ಬಹಿಷ್ಕಾರ

* ಯೋಧನ ಕುಟುಂಬದವರನ್ನು ಮಾತನಾಡಿಸಿದರೆ 1 ಸಾವಿರ ರು. ದಂಡ 
* ಜಮೀನು ಸಂಬಂಧ ಅಗತ್ಯ ದಾಖಲೆ ನಮ್ಮ ಬಳಿ ಇದೆ ಎಂಬುದು ಗ್ರಾಮಸ್ಥರ ವಾದ 
* ಬೆಳಗಾವಿ ತಾಲೂಕಿನ ಗೌಂಡವಾಡದ ಗ್ರಾಮದಲ್ಲಿ ನಡೆದ ಘಟನೆ
 

Boycott the Soldier Family for Land Dispute in Belagavi grg

ಬೆಳಗಾವಿ(ಜೂ.17):  ಜಮೀನು ವಿವಾದ ಸಂಬಂಧ ಗ್ರಾಮಸ್ಥರು ತಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದು, ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಬೆಳಗಾವಿ ತಾಲೂಕಿನ ಗೌಂಡವಾಡದ ಯೋಧರೊಬ್ಬರು ಬುಧವಾರ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿ ದೂರು ಸಲ್ಲಿಸಿದ್ದಾರೆ. 

ತಮ್ಮ ಜಮೀನಿಗೆ ಯಾರೂ ಕೆಲಸಕ್ಕೆ ಬರುತ್ತಿಲ್ಲ. ಕುಟುಂಬದವರನ್ನು ಮಾತನಾಡಿಸಿದರೆ 1 ಸಾವಿರ ರು. ದಂಡ ವಿಧಿಸಲಾಗುತ್ತಿದೆ ಎಂದು ಯೋಧ ದೀಪಕ ಪಾಟೀಲ ಜಿಲ್ಲಾಧಿಕಾರಿ ಗಮನ ಸೆಳೆದಿದ್ದಾರೆ. 

ಬೆಳಗಾವಿ: ಪೊಲೀಸರ ಮೇಲೆಯೇ ಹಲ್ಲೆ, ಐವರ ವಿರುದ್ಧ ಕೇಸ್‌

ಗ್ರಾಮದ ಗಣಪತಿ, ಕಲ್ಮೇಶ್ವರ, ಕಾಲಭೈರವ ದೇಗುಲಕ್ಕೆ ತಮ್ಮ 5 ಎಕರೆ ಜಮೀನು ಸೇರಿದೆ ಎಂಬುದು ಗ್ರಾಮಸ್ಥರ ವಾದ. ಆದರೆ, ಈ ಜಮೀನು ಸಂಬಂಧ ಅಗತ್ಯ ದಾಖಲೆ ನಮ್ಮ ಬಳಿ ಇದೆ. ಇದೇ ಕಾರಣಕ್ಕೆ ಜೂ.6ರಂದು ಮನೆಗೆ ನುಗ್ಗಿ ಪಿಠೋಪಕರಣ, ಟಿವಿ ಇತರೆ ವಸ್ತುಗಳನ್ನು ಧ್ವಂಸಗೊಳಿಸಲಾಗಿದೆ. ಬೈಕ್‌ಗೆ ಬೆಂಕಿ ಹಚ್ಚಲಾಗಿದೆ. ಕಾಕತಿ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿದ್ದಾರೆ. 
 

Latest Videos
Follow Us:
Download App:
  • android
  • ios