ಧಾರವಾಡ(ಡಿ.27): ಚೋಟುದ್ದ ಬಾಲಕನೊಬ್ಬ ಜಿಲ್ಲಾಧಿಕಾರಿ ದೀಪಾ ಚೋಳನ್‌ ಅವರಿಗೆ ಲವ್ ಲೆಟರ್ ಬರೆದು ಶಾಕ್‌ ಕೊಟ್ಟ ಘಟನೆ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಗುರುವಾರ ನಡೆದಿದೆ. 

"

ನಿನ್ನೆ ನೆರೆ ಸಂತ್ರಸ್ತರ ಮನೆಗಳ ಪರಿಶೀಲನೆಗೆಂದು ಡಿಸಿ ದೀಪಾ ಚೋಳನ್‌ ಅವರು ಉಪ್ಪಿನ ಬೆಟಗೇರಿ ಗ್ರಾಮಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ದೀಪಾ ಚೋಳನ್‌ ಅವರು ಮನೆಯ ಮುಂದೆ ಓದುತ್ತ ಕುಳಿತ ಬಾಲಕನ ಬುಕ್ ನೋಡಿ ದಂಗಾಗಿದ್ದಾರೆ. ಬಾಲಕ ತನ್ನ ಬುಕ್‌ನಲ್ಲಿ ಐ ಲವ್ ಯೂ ಅಂತ ಬರೆದಿದ್ದನು. ಐ ಲವ್ ಯೂ ಅಂತಾ ಬರೆದಿರೋದನ್ನ ನೋಡಿದ ದೀಪಾ ಚೋಳನ್‌ ಅವರು ಆಶ್ಚರ್ಯಗೊಂಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಾಲಕ ಮಾಡಿದ ಕಿತಾಪತಿಯ ವಿಚಾರವನ್ನು ದೀಪಾ ಚೋಳನ್‌ ಅವರು ಅಲ್ಲಿದ ಎಲ್ಲರಿಗೂ ತೋರಿಸಿ ನಗೆ ಚಟಾಕಿ ಹಾರಿಸಿದ್ದಾರೆ. ಡಿಸಿ ಮೇಡಂ ಐ ಲವ್ ಯೂ ಅಂತಾ ಬರೆದಿರುವ ವಿಚಾರ ಗೊತ್ತಾಗುತ್ತಿದ್ದಂತೆ ಬಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ.