Asianet Suvarna News Asianet Suvarna News

ಹಾಸನ: ಲಿಫ್ಟ್ ಅಳವಡಿಕೆಗೆ ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕ ಸಾವು

ಲಿಫ್ಟ್ ಅಳವಡಿಕೆಗೆ ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕನೋರ್ವ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ. 

Boy Dies After Falling into Lift Pit in Hassan grg
Author
First Published Jan 5, 2023, 10:25 PM IST

ಹಾಸನ(ಜ.05):  ಲಿಫ್ಟ್ ಅಳವಡಿಕೆಗೆ ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕನೋರ್ವ ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದ ಕೋಟೆ ರಸ್ತೆಯಲ್ಲಿ ಇಂದು(ಗುರುವಾರ) ನಡೆದಿದೆ. ಗಗನ್ (6) ಎಂಬಾತನೇ ಮೃತಪಟ್ಟ ಬಾಲಕನಾಗಿದ್ದಾನೆ. 

ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಗುಂಡಿ ತೆಗೆಯಲಾಗಿತ್ತು. ಆಧಾರ್ ಕಾರ್ಡ್ ಮಾಡಿಸಲು ಅಜ್ಜ, ಅಜ್ಜಿ ಜೊತೆ ಗಗನ್ ಬಂದಿದ್ದನು.  ಅಜ್ಜ, ಅಜ್ಜಿ ಆಧಾರ್‌ಕಾರ್ಡ್ ಮಾಡಿಸುತ್ತಿದ್ದಾಗ ಗಗನ್ ಹೊರಗಡೆ ಆಟವಾಡುತ್ತಿದ್ದನು. ಆಧಾರ್‌ ಕಾರ್ಡ್ ಮಾಡಿಸಿ ಹೊರ ಬಂದು ನೋಡಿದಾಗ ಗಗನ್ ನಾಪತ್ತೆಯಾಗಿದ್ದನು. 

ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಸನ್ನಿಹಿತ: ಎಚ್‌.ಡಿ.ದೇವೆಗೌಡ

ಗಾಬರಿಯಾದ ಮೊಮ್ಮಗನನ್ನು ಅಜ್ಜ, ಅಜ್ಜಿ ಹುಡುಕಾಡಿದ್ದರು. ಈ ವೇಳೆ ನಿರ್ಮಾಣ ಹಂತದ ಕಟ್ಟಡದಲ್ಲಿ ತೆಗೆದಿದ್ದ ಲಿಫ್ಟ್ ಗುಂಡಿಯಲ್ಲಿ ಗಗನ್ ಶವ ಪತ್ತೆಯಾಗಿದೆ. ಆಟವಾಡುವಾಗ ಗಗನ್ ಆಯತಪ್ಪಿ ಗುಂಡಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. 
ಬಾಲ್ಯದಲ್ಲಿಯೇ ಗಗನ್ ತಾಯಿ‌ ಕಳೆದುಕೊಂಡಿದ್ದನಂತೆ. ಗಗನ್ ತಂದೆ ಮಿಲಿಟರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಅಂತ ತಿಳಿದು ಬಂದಿದೆ.  ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಹೊಳೆನರಸೀಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Follow Us:
Download App:
  • android
  • ios