Asianet Suvarna News Asianet Suvarna News

ಬೋರನಕಣಿವೆ ಜಲಾಶಯ: ಮೇವು ಬೆಳೆಯಲು ತೀರ್ಮಾನ

ಬೋರನಕಣಿವೆ ಜಲಾಶಯದಿಂದ ಜಾನುವಾರುಗಳಿಗೆ ಮೇವು ಬೆಳೆಯಲು ನೀರೊದಗಿಸಲು ತಾಲೂಕು, ಆಡಳಿತ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿಯಲ್ಲಿ ತೀರ್ಮಾನಿಸಲಾಯಿತು.

Boranakanive Reservoir: A decision to grow fodder snr
Author
First Published Nov 21, 2023, 8:42 AM IST

ಚಿಕ್ಕನಾಯಕನಹಳ್ಳಿ: ಬೋರನಕಣಿವೆ ಜಲಾಶಯದಿಂದ ಜಾನುವಾರುಗಳಿಗೆ ಮೇವು ಬೆಳೆಯಲು ನೀರೊದಗಿಸಲು ತಾಲೂಕು, ಆಡಳಿತ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿಯಲ್ಲಿ ತೀರ್ಮಾನಿಸಲಾಯಿತು. ಈ ವೇಳೆ ಸಾರ್ವಜನಿಕರು, ರೈತರು ತಾಲೂಕು ಆಡಳಿತ ಈ ನಿರ್ಧಾರದ ಬಗ್ಗೆ ಅಪಾರ ಸಂತೋಷ ವ್ಯಕ್ತಪಡಿಸಿದರು.

ಜಾನುವಾರುಗಳಿಗೆ ಮೇವು ಕೊರತೆ

ವಿಜಯಪುರ(ನ.04):  ಅದೆಷ್ಟೋ ಜನ ಗೋವುಗಳ ಮೇಲಿನ ಪ್ರೀತಿಗೆ ತಾವೇ ಖಾಸಗಿ ಗೋಶಾಲೆಗಳನ್ನ ತೆರೆದಿದ್ದಾರೆ. ಆದ್ರೆ ಬರದ ಹೊಡೆತಕ್ಕೆ ಗೋಸೇವಕರು ಗೋವುಗಳನ್ನ ಸಾಕೋದಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಇಲ್ಲದೆ, ಸಮರ್ಪಕ ಮೇವು ಸಿಗದೆ ಈಗ ಗೋಪಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಖಾಸಗಿ ಗೋಶಾಲೆಗಳಿಗೆ ಬರ ಕಂಟಕ..!

ರಾಜ್ಯದಲ್ಲಿ ಮಳೆ ಇಲ್ಲದೆ ಬರದ ಛಾಯೆ ಆವರಿಸಿದೆ. ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಆತಂಕದಲ್ಲಿದ್ದಾರೆ. ಬಿತ್ತಿದ ಬೆಳೆಯು ಕೈಗೆ ಬಾರದೆ ರೈತರು ಕಂಗಾಲಾಗಿದ್ದಾರೆ. ಈ ನಡುವೆ ಬರದ ಜಿಲ್ಲೆ ಎಂದಲೇ ಕರೆಯಿಸಿಕೊಳ್ಳುವ ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಮಳೆರಾಯ ಕೈಕೊಟ್ಟಿದ್ದಾನೆ. ಈಗಾಗಲೇ ಜಿಲ್ಲೆಯಲ್ಲಿ ಬರ ಘೋಷಣೆಯಾಗಿದೆ. ಬರದಿಂದ ಒಂದೆಡೆ ರೈತರು ಕಂಗಾಲಾಗಿದ್ದರೇ, ಇತ್ತ ಗೋಶಾಲೆಗಳು ಸಂಕಟಕ್ಕೆ ಸಿಲುಕಿವೆ. ಅದ್ರಲ್ಲು ಗೋವುಗಳ ಮೇಲಿನ ಪ್ರೀತಿಯಿಂದ ಖಾಸಗಿಯಾಗಿ ಗೋಶಾಲೆ ತೆರೆದು ಗೋವುಗಳ ಪೋಷಣೆಯಲ್ಲಿ ತೊಡಗಿದ್ದ ಗೋಪಾಲಕರು ಆತಂಕದಲ್ಲಿದ್ದಾರೆ. ಕಾರಣ ಗೋವುಗಳಿಗೆ ದಿನದಿಂದ ದಿನಕ್ಕೆ ಮೇವಿನ ಕೊರತೆ ಉಂಟಾಗುತ್ತಿದ್ದು ಗೋವುಗಳಿಗೆ ಮೇವು ಪುರೈಸಲು ಗೋಶಾಲೆ ಮಾಲಿಕರು ಪರದಾಟ ಅನುಭವಿಸುತ್ತಿದ್ದಾರೆ.

ಟಿಪ್ಪು ಅಪ್ಪಟ ದೇಶಭಕ್ತ, ಬಿಜೆಪಿ ನಾಯಕರಿಂದ ಅಪಪ್ರಚಾರ: ಸಚಿವ ಎಂ.ಬಿ. ಪಾಟೀಲ

ಮಳೆ ಇಲ್ಲದೆ ಕೈಗೆ ಬಾರದ ಬೆಳೆ..!

ವಿಜಯಪುರ ಜಿಲ್ಲೆಯಾದ್ಯಂತ ಮುಂಗಾರು-ಹಿಂಗಾರು ಮಳೆಗಳು ಕೈಕೊಟ್ಟ ಕಾರಣ ಬಿತ್ತಿದ ಬೆಳೆಯೆ ಕೈಗೆ ಬಂದಿಲ್ಲ. ಅದ್ರಲ್ಲು ಕೆಲವೆಡೆ ಬಿತ್ತನೆಯು ನಡೆದಿಲ್ಲ. ಪ್ರಮುಖವಾಗಿ ಜಾನುವಾರುಗಳಿಗೆ ಮೇವಾಗಿ ಉಪಯೋಗವಾಗ್ತಿದ್ದ ಬಿಳಿ ಜೋಳ-ಗೋವಿನ ಜೋಳ ಎರಡು ಬೆಳೆಗಳು ಬಂದಿಲ್ಲ. ಹೀಗಾಗಿ ಸಹಜವಾಗಿಯೇ ಮೇವಿನ ಕೊರೆತೆ ಉಂಟಾಗುತ್ತಿದೆ. ಜೋಳ ಬೆಳೆದಲ್ಲಿ ಕಟಾವಿನ ಬಳಿಕ ಜಾನುವಾರುಗಳಿಗು ಮೇವಾಗಿ ಬಳಕೆಯಾಗ್ತಿತ್ತು. ರೈತರು ಸಹ ಕಟಾವಿನ ಬಳಿಕ ಹಸಿ-ಒಣ ಮೇವನ್ನ ಕಡಿಮೆ ದರಕ್ಕೆ ಮಾರಾಟ ಮಾಡ್ತಿದ್ರು. ಅದ್ರಲ್ಲು ಗೋಶಾಲೆಗಳೀಗೆ ಪ್ರೀಯಾಗಿಯೇ ಕೆಲ ರೈತರು ನೀಡ್ತಿದ್ರು. ಆದ್ರೀಗ ಬೆಳೆಯೇ ಬಂದಿಲ್ಲ ಅಂದಾಗ ಮೇವು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾರ್ಕೆಟ್‌ನಲ್ಲಿ ಮೇವಿದ ದರ ಗಗನಕ್ಕೆ..!

ಮಳೆಗಾಲಲ್ಲಿ ಅಲ್ಲಲ್ಲಿ ಮೇವು ಬೆಳೆಯುತ್ತಿತ್ತು, ಜಾನುವಾರುಗಳಿಗೆ ಸುಲಭವಾಗಿ ಲಭ್ಯವಾಗ್ತಿತ್ತು. ಮಾರ್ಕೆಟ್‌ ನಲ್ಲು ಹಸಿರು ಹುಲ್ಲು-ಜೋಳದ ಮೇವು ಸಹ ಯತೆಚ್ಚವಾಗಿ ಸಿಗುತ್ತಿತ್ತು. ಖಾಸಗಿ ಗೋಶಾಲೆಗಳು ಸಹ ಕಡಿಮೆ ದರಕ್ಕೆ ಮೇವು ಖರೀದಿ ಮಾಡಿ ಗೋವುಗಳಿಗೆ ನೀಡ್ತಿದ್ರು. ಆದ್ರೀಗ ಮಾರ್ಕೆಟ್‌ ನಲ್ಲಿ ಮೇವಿನ ಕೊರತೆ ಉಂಟಾಗ್ತಿದ್ದು, ಕೇವಲ 100 ರುಪಾಯಿಗೆ ಸಿಗ್ತಿದ್ದ ಮೇವು, 500 ಕೊಟ್ಟರು ಸಿಗದಂತಾಗಿದೆ.  ಹೀಗಾಗಿ ಅಷ್ಟೊಂದು ಹಣ ಖರ್ಚು ಮಾಡಿ ಗೋವುಗಳಿಗೆ ಹೇಗೆ ತಿನ್ನಿಸೋದು ಅಂತಾ ಖಾಸಗಿ ಗೋಶಾಲೆಗಳ ಗೋಪಾಲಕರು ಅಳಲು ತೋಡಿಕೊಳ್ತಿದ್ದಾರೆ.. ಮಳೆಗಾಲದಲ್ಲೆ ಈ ಪರಿಸ್ಥಿತಿ ಇದೆ, ಬೇಸಿಗೆಯಲ್ಲಿ ಗೋವುಗಳ ಪರಿಸ್ಥಿತಿ ಹೇಗೆ ಅಂತಾ ಆತಂಕ ಹೊರಹಾಕ್ತಿದ್ದಾರೆ..

Follow Us:
Download App:
  • android
  • ios