Asianet Suvarna News Asianet Suvarna News

ಕೊಡಗು: ಸರ್ಕಾರದ ಸೌಲಭ್ಯ ದುರ್ಬಳಕೆಗಾಗಿ ಬೋಗಸ್ ಕಾರ್ಮಿಕ ಕಾರ್ಡು!

ಸರ್ಕಾರದ ಸೌಲಭ್ಯ ದುರುಪಯೋಗಪಡಿಸಿಕೊಳ್ಳಲು ಲೇಬರ್ ಕಾರ್ಡ್‌ಗಳನ್ನು ಕಟ್ಟಡ ಕಾರ್ಮಿಕರಲ್ಲದವರು ಹೊಂದಿದ್ದು ಸುಮಾರು  2000 ಕ್ಕೂ ಹೆಚ್ಚು ಬೋಗಸ್ ಕಾರ್ಡುಗಳಲ್ಲಿ ವ, 103 ಕಾರ್ಡುಗಳನ್ನು ಕಾರ್ಮಿಕ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

Bogus labor card for misuse of government facility at kodagu rav
Author
First Published Feb 28, 2023, 10:38 PM IST

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಫೆ.28): ಕಟ್ಟಡ ಮತ್ತು ಇತರೆ ನಿರ್ಮಾಣಗಾರರಿಗೆ ಅನುಕೂಲ ಆಗಲೆಂದು ಸರ್ಕಾರದ ಸೌಲಭ್ಯಗಳು ಸುಲಭವಾಗಿ ಸಿಗುವುದಕ್ಕಾಗಿ ಕಾರ್ಮಿಕ ಇಲಾಖೆಯಿಂದ ಕಾರ್ಡುಗಳನ್ನು  ವಿತರಣೆ ಮಾಡಿದೆ. ಈ ಕಾರ್ಡುಗಳನ್ನು ಕನಿಷ್ಠ 18 ವರ್ಷದಿಂದ 60 ವರ್ಷದ ಒಳಗಿನವರು, ವರ್ಷದ ಕನಿಷ್ಠ 90 ದಿನಗಳ ಕಾಲ ಕಟ್ಟಡ ಅಥವಾ ಇತರೆ ನಿರ್ಮಾಣ ಕೆಲಸಗಳಲ್ಲಿ ತೊಡಗಿರುವವರು ಪಡೆಯಬಹುದು. ಅಂತಹವರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡು, ಕಾರ್ಮಿಕರ ಕಾರ್ಡು ಪಡೆಯಬಹುದು. 

 

ಬಡತನದಿಂದ ಬಂದವರಿಗೆ ಕಾರ್ಮಿಕರ ನೋವು ಅರಿವಾಗುತ್ತೆ: ಆಯನೂರು

ಹೌದು ಕೊಡಗು(Kodagu) ಜಿಲ್ಲೆಯಲ್ಲಿ ಇದುವರೆಗೆ 10,635 ಜನರು ನೋಂದಣಿ ಮಾಡಿಕೊಂಡು ಕಾರ್ಡು ಮಾಡಿಸಿಕೊಂಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಯಗಳಲ್ಲಿ ತೊಡಗದ 2 ಸಾವಿರಕ್ಕೂ ಹೆಚ್ಚು ಜನರಿಗೂ ಕಾರ್ಮಿಕ ಕಾರ್ಡು(Labor Card) ವಿತರಣೆಯಾಗಿರುವ ಆರೋಪ ಕೇಳಿ ಬಂದಿದೆ. 

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯಿಂದ ದೊರೆಯುವ ಕಾರ್ಡನ್ನು ಮನೆಯಲ್ಲೇ ಆರಾಮವಾಗಿರುವ ಅಥವಾ ಬೇರೆಲ್ಲಾ ಆರಾಮದಾಯಕ ಕಟ್ಟಡ ಕೆಲಸಗಳನ್ನು ಮಾಡುತ್ತಿರುವವರು ಕಟ್ಟಡ ಅಥವಾ ನಿರ್ಮಾಣ ಕಾರ್ಮಿಕ ಮಂಡಳಿಯಿಂದ ದೊರೆಯುವ ಕಾರ್ಡನ್ನು ಪಡೆದಿದ್ದಾರೆ. ಅಂತಹ ಬೋಗಸ್ ಕಾರ್ಡುಗಳನ್ನು ಮಾಡಿಸಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಪರಿಶೀಲನೆಗೆ ಇಳಿದ ಕಾರ್ಮಿಕ ಇಲಾಖೆ(Department of Labour)ಗೆ ಈಗಾಗಲೇ 103 ಜನರು ಬೋಗಸ್ ಕಾರ್ಡು(bogus Labour card)ಗಳನ್ನು ಮಾಡಿಕೊಂಡಿರುವುದನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದೇವೆ ಎಂದು ಹಿರಿಯ ಕಾರ್ಮಿಕ ಅಧಿಕಾರಿ ಯತ್ನಟ್ಟಿ ಅವರು ಹೇಳಿದ್ದಾರೆ. 

ಈ ಕಾರ್ಡುಗಳನ್ನು ಪಡೆದುಕೊಳ್ಳುವುದರಿಂದ ಸಾಕಷ್ಟು ಅನುಕೂಲಗಳು ದೊರೆಯಲಿವೆ. ಕಾರ್ಮಿಕರು ಮೂರು ವರ್ಷಗಳ ಕಾಲ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಿ 60 ವರ್ಷ ಪೂರೈಸಿದ್ದರೆ ಮಾಸಿಕ 3000 ಮಾಸಶನ ಪಡೆಯಬಹುದು. ಕಾಮಗಾರಿಗಳ ವೇಳೆ ಅಪಘಾತವಾಗಿ ಅಂಗವಿಕಲತೆಗೆ ಒಳಗಾಗಿದ್ದರೆ 2 ಲಕ್ಷದವರೆಗೆ ವಿಮೆ ಪಡೆಯಬಹುದು. 20 ಸಾವಿರ ಮೌಲ್ಯದ ಟೂಲ್ ಕಿಟ್(Tool kit) ಪಡೆಯಬಹುದು. ಅಷ್ಟೇ ಅಲ್ಲ ಇಂತಹ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯಧನ, ಅಖಿಲ ಭಾರತ ಸೇವೆಯ ಪರೀಕ್ಷೆಗಳಿಗಾಗಿ ತರಬೇತಿ ಸೌಲಭ್ಯಗಳು ಇವೆ. ಸರ್ಕಾರದ ಇಂತಹ ಸೌಲಭ್ಯಗಳ ದುರಾಸೆಗೆ ಬಿದ್ದ ಅರ್ನಹರು ಕೂಡ ಈ ಕಾರ್ಡುಗಳನ್ನು ಪಡೆದು ಸರ್ಕಾರದ ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. 

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಈ ಸೌಲಭ್ಯಗಳು ಸಿಗಲು ಸಾಕಷ್ಟು ಅವಿರತ ಹೋರಾಟ ನಡೆಸಿದ್ದೇವೆ. ಅದರ ಫಲವಾಗಿ ಈ ಸೌಲಭ್ಯಗಳು ದೊರೆತಿವೆ. ಈ ಮೊದಲು ಈ ಕಾರ್ಡುಗಳ ನೋಂದಣಿಗೆ ಕಾರ್ಮಿಕ ಸಂಘಟನೆಗಳಿಂದ ಒಪ್ಪಿಗೆ ಕೇಳಲಾಗುತ್ತಿತ್ತು. ಆದರೆ ಈಗ ಅದನ್ನು ಮಾಲೀಕರಿಗೆ, ಗುತ್ತಿಗೆದಾರರಿಗೆ ನೀಡಲಾಗಿದ್ದು, ಅವರು ತಮಗೆ ಇಷ್ಟ ಬಂದವರಿಗೆಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಾಗಿದ್ದಾರೆ ಎನ್ನುವ ಪತ್ರ ನೀಡುತ್ತಿದ್ದಾರೆ. ಜೊತೆಗೆ ಕಾರ್ಡಿಗಾಗಿ ನೋಂದಾವಣಿಗೆ ಸೈಬರ್ ಕೇಂದ್ರಗಳಿಗೆ ಅವಕಾಶ ನೀಡಿದ್ದರಿಂದಲೇ ಈ ಕಾರ್ಡನ್ನು ಅನರ್ಹರು ಪಡೆಯಲು ಅವಕಾಶ ಸಿಕ್ಕಿದಂತೆ ಆಗಿದೆ ಎನ್ನುವುದು ಕಾರ್ಮಿಕ ಮುಖಂಡ ಪಿ. ಆರ್ ಭರತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Bengaluru: ಕಟ್ಟಡ ಡೆಮಾಲಿಷನ್‌ ವೇಳೆ ಪಿಲ್ಲರ್‌ ಕುಸಿತ: ಇಬ್ಬರು ಕಾರ್ಮಿಕರು ಸಾವು

ಮತ್ತೊಂದೆಡೆ ಕೋವಿಡ್(Covid virus) ನಂತರ ಸರ್ಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗಾಗಿ ಮೊದಲ ಹಂತದಲ್ಲಿ 5 ಸಾವಿರ ಮತ್ತು ಎರಡನೇ ಹಂತದಲ್ಲಿ 3 ಸಾವಿರ ಸಹಾಯಧನ ನೀಡಿತು. ಈ ಸಹಾಯಧನ ಇಂದಿಗೂ ಅರ್ಹ ಕಾರ್ಮಿಕರಿಗೆ ಬಂದಿಲ್ಲ. ಆದರೆ ಅರ್ಹರಿಗೆ ಖಾತೆಗೆ ಬಂದಿದೆ ಎಂದು ಅಧಿಕಾರಿಗಳು ಕಟ್ಟಡ ಕಾರ್ಮಿಕರಾದ ರವಿಗೌಡ ಮತ್ತು ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios