Bengaluru: ಕಟ್ಟಡ ಡೆಮಾಲಿಷನ್ ವೇಳೆ ಪಿಲ್ಲರ್ ಕುಸಿತ: ಇಬ್ಬರು ಕಾರ್ಮಿಕರು ಸಾವು
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಹತ್ತನೇ ಕ್ರಾಸ್ ಬಳಿ ಘಟನೆ ಹಳೆಯ ಕಟ್ಟಡವೊಂದನ್ನು ಡೆಮಾಲಿಶ್ ಮಾಡುವ ವೇಳೆ ಕಟ್ಟಡದ ಕುಸಿಯುವ ಗೋಡೆಯೊಳಗೆ ಸಿಲುಕಿ ಇಬ್ಬರು ಪಶ್ಚಿಮ ಬಂಗಾಳ ಮೂಲದ ಕೂಲಿ ಕಾರ್ಮಿಕರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಬೆಂಗಳೂರು (ಫೆ.11): ಸಿಲಿಕಾನ್ ಸಿಟಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಹತ್ತನೇ ಕ್ರಾಸ್ ಬಳಿ ಘಟನೆ ಹಳೆಯ ಕಟ್ಟಡವೊಂದನ್ನು ಡೆಮಾಲಿಶ್ ಮಾಡುವ ವೇಳೆ ಕಟ್ಟಡದ ಕುಸಿಯುವ ಗೋಡೆಯೊಳಗೆ ಸಿಲುಕಿ ಇಬ್ಬರು ಪಶ್ಚಿಮ ಬಂಗಾಳ ಮೂಲದ ಕೂಲಿ ಕಾರ್ಮಿಕರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಮಹಾಲಕ್ಷ್ಮೀ ಲೇಔಟ್ ಹತ್ತನೇ ಕ್ರಾಸ್ ಬಳಿ ಬಿಲ್ಡಿಂಗ್ ಡೆಮಾಲಿಷನ್ ವೇಳೆ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ ಇಬ್ಬರು ಕಾರ್ಮಿಕರು ಸಾವವನ್ನಪ್ಪಿದ್ದಾರೆ. ಪಶ್ಚಿಮ ಬಂಗಳಾದ ಇಬ್ಬರು ಕೂಲಿ ಕಾರ್ಮಿಕರು ದುರ್ಮರಣ ಆಗಿದೆ. ಇನಾಮ್ ಉಲ್ಲಾ, ಸಿರಾಜ್ ಉಲ್ಲಾ ಮೃತ ದುರ್ದೈವಿಗಳು ಆಗಿದ್ದಾರೆ. ಹಳೇ ಕಟ್ಟಡದ ಪಿಲ್ಲರ್ ಕುಸಿದು ಅವಘಡ ಸಂಭವಿಸಿದೆ. ಒಂದು ವಾರದಿಂದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆರು ಮಂದಿ ಬಿಲ್ಡಿಂಗ್ ತೆರವು ಮಾಡುತ್ತಿದ್ದರು. ಆದರೆ, ಸೂಕ್ತ ಮುಂಜಾಗ್ರತೆ ತೆಗೆದುಕೊಳ್ಳದೆ ಬಿಲ್ಡಿಂಗ್ ತೆರವು ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವಘಡ ಸಂಭವಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಸಾಫ್ಟ್‌ವೇರ್ ದಂಪತಿಯ ದುರಂತ ಅಂತ್ಯ: ಮದುವೆಗೆ ಹೊರಟಿದ್ದವರು ಮಸಣ ಸೇರಿದರು
ಮುಂಜಾಗ್ರತಾ ಕ್ರಮವಹಿಸದೇ ತೆರವು ಕಾರ್ಯ: ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಕಟ್ಟಡ ತೆರವು ಕಾರ್ಯ ಮಾಡುತ್ತಿದ್ದರಿಂದ ಇಂದು ಬೆಳಗ್ಗೆ ಕಟ್ಟಡದ ಪಿಲ್ಲರ್ ಕುಸಿದು ಅದರಡಿ ಸಿಲುಕಿದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸಂಜೆ ವೇಳೆಗೆ ಕಾರ್ಮಿಕರ ಮೃತ ದೇಹಗಳನ್ನು ಕಟ್ಟಡದ ಅವಶೇಷಗಳಿಂದ ಹೊರತೆಗೆದು ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನ ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದಾರೆ. ಇನ್ನು ಕಟ್ಟಡದ ಮಾಲೀಕರು ಹಾಗೂ ಕಟ್ಟಡ ಡೆಮಾಲಿಷನ್ ಮಾಡುತ್ತಿದ್ದ ಗುತ್ತಿಗೆಯನ್ನು ವಹಿಸಿಕೊಂಡಿದ್ದ ಮೇಸ್ತ್ರಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಜಾತ್ರೆಗೆ ಹೊರಟವರ ಬೈಕ್ ಅಪಘಾತ- ಓರ್ವ ಸಾವು: ರಾಯಚೂರು: ಜಿಲ್ಲೆ ಮಾನ್ವಿ ತಾ. ರಾಮನಾಥ್ ಕ್ಯಾಂಪ್ ನಲ್ಲಿ ನಡೆದ ಎರಡು ಬೈಕ್ ಗಳ ನಡುವೆ ಡಿಕ್ಕಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಓರ್ವ ಬೈಕ್ ಸವಾರ ಸಾವನ್ನಪ್ಪಿದರೆ ಇನ್ನೊಂದು ಬೈಕ್‌ನ ಸವಾರ ಗಂಭೀರ ಗಾಯಗೊಂಡಿದ್ದಾನೆ. ಬೈಕ್ ಹಿಂಬದಿ ಸವಾರ ದಿಲೀಪ್ ದಿಲೀಪ್ (25) ಸಾವನ್ನಪ್ಪಿದ್ದಾನೆ. ಇನ್ನು ಯಲ್ಲಾಲಿಂಗ ಮತ್ತು ರಮೇಶ್ ಎಂಬುವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನೀರಮಾನ್ವಿ ಜಾತ್ರೆಗೆ ಬರುತ್ತಿದ್ದ ವೇಳೆ ಅಪಘಾತ ನಡೆದಿದ್ದು, ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಹೆದ್ದಾರಿಯಲ್ಲಿ ಬೈಕ್‌ಗೆ ಗುದ್ದಿದ ಅಪರಿತ ವಾಹನ: ದಿಕ್ಕಾಪಾಲಾಗಿ ಬಿದ್ದ ಯುವಕರ ಮೃತದೇಹಗಳು
ಟರ್ನಿಂಗ್ ವೇಳೆ ಗೂಡ್ಸ್ ಆಟೋ ಪಲ್ಟಿ: ಕೊಪ್ಪಳ: ಕೊಪ್ಪಳದ ಕನಕಗಿರಿ ಪಟ್ಟಣದಲ್ಲಿ ರಸ್ತೆಯಲ್ಲಿ ಯೂ ಟನ್೯ ತೆಗೆದುಕೊಳ್ಳುವ ವೇಳೆ ಗೂಡ್ಸ್ ಆಟೋವೊಂದು ಪಲ್ಟಿಯಾಗಿರುವ ಘಟನೆ ನಡೆದಿದೆ. ಟಾಟಾ ಎಸ್ ಚಾಲಕ ಏಕಾಎಕಿ ವಾಹನ ಬ್ರೇಕ್ ಹಾಕಿದ ಕಾರಣ ಪಲ್ಟಿಯಾಗಿದೆ. ಪಲ್ಟಿಯಾದ ಆಟೋವನ್ನ ಎತ್ತಿ ಜನರು ಚಾಲಕನ ರಕ್ಷಣೆಗೆ ಮುಂದಾಗಿದ್ದರು. ಇದೇ ವೇಳೆ ಮತ್ತೊಬ್ಬ ಗೂಡ್ಸ್ ಆಟೋ ಚಾಲಕ ಪಲ್ಟಿಯಾದ ಆಟೋದ ಟೈರ್‌ಗಳನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ. ಈ ಕಳ್ಳತನ ಮಾಡಿಕೊಂಡು ಪರಾರಿಯಾಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇನ್ನು ಅಪಘಾತ ಮತ್ತು ಕಳ್ಳತನ ಕುರಿತಂತೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.