Asianet Suvarna News Asianet Suvarna News

BMTC Volvo Bus fare : ಪ್ರಯಾಣಿಕರ ಕೊರತೆ : ವೋಲ್ವೊ ಬಸ್‌ ದರ ಕಡಿತ

  •   ಪ್ರಯಾಣಿಕರ ಕೊರತೆ  ಹಿನ್ನೆಲೆ ವೋಲ್ವೊ ಬಸ್‌ ದರ ಕಡಿತ
  • ಕೊರೋನಾ ಬಳಿಕ ಪ್ರಯಾಣಿಕರಿಲ್ಲದೆ ಡಿಪೋಗಳಲ್ಲಿ ಧೂಳು ತಿನ್ನುತ್ತಿದ್ದ ಹವಾನಿಯಂತ್ರಿತ ವೋಲ್ವೊ ಬಸ್‌
BMTC slashes Volvo bus fares snr
Author
Bengaluru, First Published Dec 17, 2021, 3:31 PM IST

 ಬೆಂಗಳೂರು (ಡಿ.17):  ಕೊರೋನಾ (Corona) ಬಳಿಕ ಪ್ರಯಾಣಿಕರಿಲ್ಲದೆ ಡಿಪೋಗಳಲ್ಲಿ (Depo) ಧೂಳು ತಿನ್ನುತ್ತಿದ್ದ ಹವಾ ನಿಯಂತ್ರಿತ ವೋಲ್ವೊ ಬಸ್‌ಗಳಿಗೆ (Volvo Bus) ಪ್ರಯಾಣಿಕರನ್ನು ಆಕರ್ಷಿಸಲು ಪ್ರಯಾಣ ದರದಲ್ಲಿ ಶೇ.34ರಷ್ಟು ಕಡಿತಗೊಳಿಸಿ ಬಿಎಂಟಿಸಿ (BMTC) ಅದೇಶಿಸಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.ಕೊರೋನಾ ಮೊದಲನೇ ಮತ್ತು ಎರಡನೇ ಅಲೆಯಿಂದ ಸುಮಾರು 700ಕ್ಕೂ ಹೆಚ್ಚು ವೋಲ್ವೊ ಬಸ್‌ಗಳು ರಸ್ತೆ ಗಿಳಿದಿರಲಿಲ್ಲ. ಅಲ್ಲದೆ, ಐಟಿ ಕಂಪೆನಿಗಳಿಂದ(IT Company) ಗುತ್ತಿಗೆಗೆ ಪಡೆದಿದ್ದ ಬಸ್‌ಗಳನ್ನು (Bus) ಹಿಂದಿರುಗಿಸಲಾಗಿತ್ತು. ಆದರೆ, ಈ ವಾಹನಗಳಿಗೆ ನಿರ್ವಹಣೆಗಾಗಿ ಬಿಎಂಟಿಸಿ (BMTC) ಮಾಸಿಕವಾಗಿ ಕೊಟ್ಯಂತರ ರು.ಗಳನ್ನು ವ್ಯವಯಿಸುತ್ತಿತ್ತು. ಇದರಿಂದ ಸಾರ್ವಜನಿಕ ವಲಯಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೆ, ಬಿಎಂಟಿಸಿ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು. ಜೊತೆಗೆ, ಪ್ರಯಾಣ ದರವನ್ನು ಕಡಿಮೆ ಮಾಡಿ ವೋಲ್ವೊ ಬಸ್‌ಗಳನ್ನು ರಸ್ತೆಗಳಿಸುವಂತೆ ಆಗ್ರಹಗಳು ಕೇಳಿ ಬಂದಿತ್ತು.

ಇದರಿಂದ ಎಚ್ಚೆತ್ತುಕೊಂಡಿರುವ ಬಿಎಂಟಿಸಿ ಅಧಿಕಾರಿಗಳು ಇದೀಗ ಪ್ರಯಾಣ ದರದಲ್ಲಿ ಶೇ.34 ರಷ್ಟು ಕಡಿತಗೊಳಿಸಿದ್ದು, ಕಳೆದ ಎರಡು ವರ್ಷಗಳಿಂದ ಮೂಲೆಗೆ ಬಿದ್ದಿದ್ದ ವೋಲ್ವೊ ಬಸ್‌ಗಳನ್ನು ರಸ್ತೆಗಿಳಿಸಲು ಅವಕಾಶ ಮಾಡಿಕೊಟ್ಟಿದೆ.

ಬೆಂಗಳೂರು ನಗರದಲ್ಲಿ(Bengaluru) ಈವರೆಗೂ 9 ಮಾರ್ಗಗಳಲ್ಲಿ 83 ವೋಲ್ವೊ ಬಸ್‌ಗಳು ಕಾರ್ಯಚರಣೆ ನಡೆಸುತ್ತಿದ್ದು, ಡಿ.17ರಿಂದ 12 ಮಾರ್ಗಗಳಲ್ಲಿ 90 ಎಸಿ ಬಸ್‌ಗಳನ್ನ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರಿಷ್ಕೃತ ದರಗಳ ವಿವರ

ದಿನ ಪಾಸುಗಳಿಗೆ(Daily Pass) ಈ ಹಿಂದೆ ಇದ್ದ 120 ರು.ಗಳನ್ನು 100 ರು.ಗಳಿಗೆ ಕಡಿತಗೊಳಿಸಲಾಗಿದೆ. 2,000ರು.ಗಳಿದ್ದ ಮಾಸಿಕ ಪಾಸಿನ ದರವನ್ನು 1,500ರು.ಗಳಿಗೆ ಇಳಿಸಲಾಗಿದೆ. ಅಲ್ಲದೆ, 50 ಕಿಮೀಗಳಿಗಿದ್ದ 90 ರು.ಗಳ ಪ್ರಯಾಣ ದರವನ್ನು ಶುಕ್ರವಾರದಿಂದ 50 ರು.ಗೆ ಇಳಿಕೆ ಮಾಡಲಾಗಿದೆ.

ದೂರದ ಅಂತರ(ಕೀ.ಮೀಗಳಲ್ಲಿ) ಪ್ರಸ್ತುತ ದರ ಪರಿಷ್ಕೃತ ದರ(ರು.ಗಳಲ್ಲಿ)

2 10 10

4 15 15

6 20 20

8 30 25

10 35 25

12 35 30

14 45 30

16 45 35

18 50 35

20 55 35

ದೂಳು ಹಿಡಿದ 600 ಬಸ್ : 

ಕೊರೋನಾ(Coronavirus) ಲಾಕ್‌ಡೌನ್‌ನಿಂದ(Lockdown) ಕಳೆದ ಎರಡು ವರ್ಷದಿಂದ ಡಿಪೋ ಸೇರಿದ್ದ ಬಿಎಂಟಿಸಿಯ ನೂರಾರು ವೋಲ್ವೊ ಬಸ್‌ಗಳು ಇದೀಗ ಕೊರೋನಾ ಭೀತಿ ಕಡಿಮೆಯಾಗಿ ಜನ ಜೀವನ ಸಾಮಾನ್ಯವಾಗಿದ್ದರೂ, ಪ್ರಯಾಣಿಕರ ಕೊರತೆಯಿಂದಾಗಿ ಡಿಪೋ ಬಿಟ್ಟು ಹೊರ ಬರುತ್ತಿಲ್ಲ. ಬೆಂಗಳೂರು(Bengaluru) ನಗರದ ಬಿಎಂಟಿಸಿಯ(BMTC) ವಿವಿಧ ಡಿಪೋಗಳಲ್ಲಿರುವ 860 ವೋಲ್ವೊ ಬಸ್‌ಗಳಿವೆ(Volvo Bus). ಅವುಗಳಲ್ಲಿ ಪ್ರಸ್ತುತ ಕೇವಲ 200 ಬಸ್‌ಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನುಳಿದ 600 ಬಸ್‌ಗಳು ಡಿಪೋಗಳಲ್ಲಿ(Bus Depot) ಧೂಳು ತಿನ್ನುತ್ತಿವೆ.

ಕಳೆದ ಎರಡು ವರ್ಷಗಳಿಂದ ಈ ಬಸ್‌ಗಳನ್ನು ಬಳಸದೇ ನಿಲ್ಲಿಸಿದ್ದು, ಕಾಲ ಕಾಲಕ್ಕೆ ನಿರ್ವಹಣೆ ಮಾಡಬೇಕಾಗಿದೆ. ಇದಕ್ಕಾಗಿ ಲಕ್ಷಾಂತರ ರು. ವೆಚ್ಚವಾಗುತ್ತಿದ್ದು, ಬಿಎಂಟಿಸಿಗೆ ಹೊರೆಯಾಗಿ ಪರಿಣಮಿಸಿದೆ. ಇದರಿಂದ ನಿಗಮ ಕೋಟ್ಯಂತರ ರು. ನಷ್ಟ ಅನುಭವಿಸುವಂತಾಗಿದೆ.

ಕೈ ಬಿಟ್ಟ ಐಟಿ ಕಂಪೆನಿಗಳು:

ವೈಟ್‌ಫೀಲ್ಡ್‌ ಮತ್ತು ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಐಟಿ-ಬಿಟಿ ಕಂಪೆನಿಗಳು(IT-BT Companies) ವೋಲ್ವೊ ಬಸ್‌ಗಳನ್ನು ಒಪ್ಪಂದದ ಮೇರೆಗೆ ಗುತ್ತಿಗೆಗೆ ಪಡೆದುಕೊಂಡಿದ್ದವು. ಆದರೆ, ಕೊರೋನಾ ಲಾಕ್‌ಡೌನ್‌ನಿಂದ ಎಲ್ಲ ಐಟಿ ಕಂಪೆನಿಗಳು ವರ್ಕ್ಫ್ರಮ್‌ ಹೋಮ್‌(Work From Home) ಜಾರಿ ಮಾಡಿವೆ. ಇದರಿಂದ ವೋಲ್ವೊ ಬಸ್‌ಗಳಿಗಿದ್ದ ಬೇಡಿಕೆ ಸಂಪೂರ್ಣ ಕುಸಿದಿದೆ. ಅಲ್ಲದೆ, ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನಗರದ ವಿವಿಧ ಭಾಗಗಳಿಂದ ಪ್ರತಿ ದಿನ 20 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಆದರೆ, ಪ್ರಯಾಣಿಕರ(Passengers) ಸಂಖ್ಯೆ ತೀವ್ರ ಕಡಿಮೆಯಿದ್ದು, ನಷ್ಟದಲ್ಲಿ ಮುಂದುವರೆಸಲಾಗುತ್ತಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಸಿ ಬಸ್‌ ಹತ್ತಲು ಹಿಂದೇಟು

ಕೊರೋನಾ ಮೊದಲ ಅಲೆಯಲ್ಲಿ ಹವಾನಿಯಂತ್ರಿತ ಪ್ರದೇಶಗಳಲ್ಲಿ ಸೋಂಕು ವೇಗವಾಗಿ ಹರಡಲಿದೆ ಎಂದು ವೈದ್ಯಕೀಯ ವಲಯದ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಸಾರ್ವಜನಿಕರು ಹವಾನಿಯಂತ್ರಿತ ಬಸ್‌ಗಳಲ್ಲಿ ಪ್ರಯಾಣಿಸಲು ಹಿಂಜರಿಯುತ್ತಿದ್ದಾರೆ. ಇದರಿಂದ ಪ್ರಯಾಣಿಕರ ತೀವ್ರ ಕೊರತೆಯುಂಟಾಗಿದ್ದು, ಕೋಟ್ಯಂತರ ರು. ಬೆಲೆ ಬಾಳುವ ಬಸ್‌ಗಳು ಬಿಎಂಟಿಸಿ ಡಿಪೋಗಳಲ್ಲಿ ಧೂಳು ತಿನ್ನುವಂತಾಗಿದೆ. ಅಲ್ಲದೆ, ಮೆಟ್ರೋ ರೈಲಿನ ಸೇವೆಯಿಂದಾಗಿ ಬಸ್‌ಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ.

Follow Us:
Download App:
  • android
  • ios