ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಬಸ್ ಪಾಸ್ ಗಾಗಿ ವಿದ್ಯಾರ್ಥಿಗಳು ತೀವ್ರ ಪರದಾಡುತ್ತಿರುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. ಬಿಎಂಟಿಸಿ ಪಾಸ್ ವಿತರಿಸುವ ಅವಧಿಯನ್ನು ವಿಸ್ತರಿಸಿದೆ.
ಬೆಂಗಳೂರು, [ಸೆ.29]: ಮೆಜೆಸ್ಟಿಕ್ ನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಬಸ್ ಪಾಸ್ ಗಾಗಿ ವಿದ್ಯಾರ್ಥಿಗಳು ತೀವ್ರ ಪರದಾಡುತ್ತಿದ್ದಾರೆ, ಇದ್ರಿಂದ ಎಚ್ಚೆತ್ತುಕೊಂಡ ಬಿಎಂಟಿಸಿ ಪಾಸ್ ವಿತರಿಸುವ ಅವಧಿಯನ್ನು ವಿಸ್ತರಿಸಿದೆ.
ಬಸ್ ಪಾಸ್ ಪಡೆಯಲು ನಾಳೆ [ಸೆಪ್ಟೆಂಬರ್ 30] ಕೊನೆಯ ದಿನವಾಗಿತ್ತು. ಆದರೆ, ಸೆ.30 ಭಾನುವಾರ ಆಗಿದ್ದರಿಂದ ಇಂದು ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬೆಳಗ್ಗೆಯಿಂದಲೇ ಮೆಜೆಸ್ಟಿಕ್ ನಲ್ಲಿ ಜಮಾಯಿಸಿದ್ದು, ಪಾಸ್ ಪಡೆಯಲು ಪರದಾಡುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ಬಸ್ ಪಾಸ್ ನೀಡುವ ಅವಧಿಯನ್ನು ಬಿಎಂಟಿಸಿ ಒಂದು ತಿಂಗಳ ಕಾಲ ವಿಸ್ತರಣೆ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಸಂಚಾರ ವ್ಯವಸ್ಥಾಪಕ ವಿಶ್ವನಾಥ್ , ಗೊಂದಲ ಏನಿಲ್ಲ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಅಷ್ಟೇ. ಜಾಗ ಇರುವಷ್ಟು ಕೌಂಟರ್ ತೆರೆಯಲಾಗಿದೆ. ಶಾಂತಿನಗರದಲ್ಲೂ ಹೆಚ್ಚಿನ ಕೌಂಟರ್ ತೆರೆಯಲಾಗುತ್ತಿದೆ.
ಪಾಸ್ ಪಡೆಯಲು ಸೆಪ್ಟೆಂಬರ್ 30 ಕಡೆಯ ದಿನಾಂಕ ಎಂದು ಹೇಳಲಾಗಿತ್ತು. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ಇನ್ನೂ ಒಂದು ತಿಂಗಳುಗಳ ಕಾಲ ಪಾಸ್ ವಿತರಿಸಲಾಗುವುದು ಎಂದು ಹೇಳಿದ್ದಾರೆ.
