ಮೂರನೇ ಹಂತದ ಯೋಜನೆಗೆ ವಿಸ್ತೃತ ಯೋಜನಾ ವರದಿ ತಯಾರಿಸುವಾಗ ಆರಂಭದಲ್ಲಿ ಡಬಲ್ ಡೆಕ್ಕರ್ ಸೇರಿರಲಿಲ್ಲ. ಬಳಿಕ ಎಲೆಕ್ಟ್ರಾನಿಕ್ ಸಿಟಿ ಮಾರ್ಗದಂತೆ ‘ನಮ್ಮ ಮೆಟ್ರೋ’ದ ಭವಿಷ್ಯದ ಎಲ್ಲ ಮೆಟ್ರೋ ಮಾರ್ಗದಲ್ಲಿ ಸಾಧ್ಯತೆ ಇರುವ ಕಡೆ ಡಬಲ್ ಡೆಕ್ಕರ್ ಅಂದರೆ ಮೆಟ್ರೋ ಮಾರ್ಗದ ಕೆಳಗೆ ಎರಡು ಭಾಗದಲ್ಲಿ ರಸ್ತೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಇ
ಬೆಂಗಳೂರು(ಫೆ.04): ನಮ್ಮ ಮೆಟ್ರೋದ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರದವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೆ ನಡೆಯಲಿರುವ ಮೂರನೇ ಹಂತದ ಕಿತ್ತಳೆ ಮಾರ್ಗದ ಡಬಲ್ ಡೆಕ್ಕರ್ ಮಾರ್ಗ ನಿರ್ಮಾಣಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಹೆಚ್ಚುವರಿ ಭೂಸ್ವಾಧೀನಕ್ಕಾಗಿ ಮರು ಸರ್ವೇ ಕೈಗೊಂಡಿದೆ.
ಮೂರನೇ ಹಂತದ ಯೋಜನೆಗೆ ವಿಸ್ತೃತ ಯೋಜನಾ ವರದಿ ತಯಾರಿಸುವಾಗ ಆರಂಭದಲ್ಲಿ ಡಬಲ್ ಡೆಕ್ಕರ್ ಸೇರಿರಲಿಲ್ಲ. ಬಳಿಕ ಎಲೆಕ್ಟ್ರಾನಿಕ್ ಸಿಟಿ ಮಾರ್ಗದಂತೆ ‘ನಮ್ಮ ಮೆಟ್ರೋ’ದ ಭವಿಷ್ಯದ ಎಲ್ಲ ಮೆಟ್ರೋ ಮಾರ್ಗದಲ್ಲಿ ಸಾಧ್ಯತೆ ಇರುವ ಕಡೆ ಡಬಲ್ ಡೆಕ್ಕರ್ ಅಂದರೆ ಮೆಟ್ರೋ ಮಾರ್ಗದ ಕೆಳಗೆ ಎರಡು ಭಾಗದಲ್ಲಿ ರಸ್ತೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೆ ಹೆಚ್ಚುವರಿ ಭೂಮಿಯ ಅಗತ್ಯತೆ ಇದೆ. ಹೀಗಾಗಿ ಇದೀಗ ಪುನಃ ಸರ್ವೆ ನಡೆಸಿ ಡಬಲ್ ಡೆಕ್ಕರ್‌ಗೆ ಅಗತ್ಯಬೀಳುವ ಭೂಮಿಯನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.
ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ
ಜೆಪಿ ನಗರ 4ನೇ ಹಂತದಿಂದ ಕೆಂಪಾಪುರದವರೆಗಿನ ಮೊದಲ ಹಂತದ ಕಾರಿಡಾರ್‌ನಲ್ಲಿ ಮೈಸೂರು ರಸ್ತೆವರೆಗಿನ ಪ್ಯಾಕೇಜ್ ಕಾಮಗಾರಿಯಲ್ಲಿ 37,703 ಚ.ಮೀ. ಭೂಮಿಯನ್ನು ಸ್ವಾಧೀನ ಮಾಡಲು ಗುರುತಿಸಲಾಗಿತ್ತು. ಇದೀಗ ಪುನಃ ಸರ್ವೆ ನಡೆಸಬೇಕಾಗಿದೆ. ಸದ್ಯ ಕಾರಿಡಾರ್ 1 ರ ಕಾಮಗಾರಿಗೆ ಸರ್ವೆ ನಡೆಸಲಾಗುತ್ತಿದ್ದು, ಬಳಿಕ 2ನೇ ಕಾರಿಡಾರ್‌ಗೆ ಸಮೀಕ್ಷೆ ಮತ್ತು ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸೈಕಲ್‌ಗೆ ಉಚಿತ ಪಾರ್ಕಿಂಗ್ ಸೌಲಭ್ಯ?: ಹೊಸ ನಿಯಮದಲ್ಲೇನಿದೆ?
ಬೆಂಗಳೂರು: ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ ಪಾವತಿಗೆ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ನೊಂದಿಗೆ (ಎನ್‌ಸಿಎಂಸಿ) ಲಿಂಕ್, ಸೈಕಲ್‌ಗೆ ಉಚಿತ ಪಾರ್ಕಿಂಗ್ ಮತ್ತು ಅಂಗವಿಕಲರಿಗೆ ವಿಶೇಷ ಸ್ಥಳವನ್ನು ಒದಗಿಸುವುದು ಸೇರಿ ಹಲವು ಅಂಶವನ್ನು ಒಳಗೊಂಡ ಹೊಸ ಪಾರ್ಕಿಂಗ್ ನೀತಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ತನ್ನ ಪಾರ್ಕಿಂಗ್ ನೀತಿ ಅಂತಿಮಗೊಳಿಸಿದ್ದು, ಅನುಮೋದನೆಗೆ ನಗರಾಭಿವೃದ್ಧಿ ಇಲಾಖೆಗೆ ಶೀಘ್ರ ಕಳುಹಿಸಲಿದೆ.
77 ಕಿ.ಮೀ. ಮಾರ್ಗದಲ್ಲಿ 53ಕ್ಕೂ ಅಧಿಕ ನಿಲ್ದಾಣದಲ್ಲಿ ಪಾರ್ಕಿಂಗ್ ಸ್ಥಳಗಳಿವೆ. ಪಾರ್ಕಿಂಗ್ ದರ ನಿಗದಿ, ಮೆಟ್ರೋಗೆ ಪ್ರಯಾಣಿಕರನ್ನು ಸೆಳೆಯುವುದು, ಸುರಕ್ಷತೆ ಸೇರಿ ಇತರೆ ಉದ್ದೇಶಗಳಿಂದ ಮೆಟ್ರೋ ಪಾರ್ಕಿಂಗ್ ನೀತಿ ರೂಪಿಸಲಾಗಿದೆ.
ಬೆಂಗಳೂರು: ಮೆಟ್ರೋ ಟಿಕೆಟ್ ದರ 40% ಹೆಚ್ಚಳ ಪ್ರಸ್ತಾಪಕ್ಕೆ ಜನರಿಂದ ತೀವ್ರ ವಿರೋಧ
ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡದಿದ್ದರೂ ನಮ್ಮ ಮೆಟ್ರೋ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಕಾರು, ಬೈಕು ನಿಲ್ಲಿಸಿ ಬೇರೆಡೆ ತೆರಳುವವರಿದ್ದು, ಇಂತವರಿಗೆ ದಂಡ ವಿಧಿಸುವಂತ ವಿಶೇಷ ನೀತಿಗಳನ್ನೂ ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಪರಿಸರ ಸ್ನೇಹಿ ಸಾರಿಗೆ ಉತ್ತೇಜಿಸಲು, ಸೈಕಲ್‌ಗಳಿಗೆ ಉಚಿತ ಪಾರ್ಕಿಂಗ್ ಮತ್ತು ಅಂಗವಿಕಲರಿಗೆ ವಿಶೇಷ ಸ್ಥಳವನ್ನು ಒದಗಿಸುವ ವ್ಯವಸ್ಥೆ ಇದರಲ್ಲಿದೆ ಎಂದು ಮೆಟ್ರೋದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ರೋದ ನೂತನ ಪಾರ್ಕಿಂಗ್ ನಿಯಮವನ್ನು ಕಳೆದ 2024ರ ಅಕ್ಟೋಬರ್‌ನಲ್ಲಿ ಬಿಎಂಆರ್‌ಸಿಎಲ್ ಸಿದ್ಧಪಡಿಸಿದೆ. ಇದರ ಬಗ್ಗೆ ಸಾರ್ವಜನಿಕ ಪ್ರತಿಕ್ರಿಯೆ ಪಡೆಯಲಾಗಿದೆ. ಬಳಿಕ ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ಪ್ರತಿಕ್ರಿಯೆ ಕೂಡ ಪಡೆಯಲಾಗಿದೆ.
ಮೆಟ್ರೋದಲ್ಲಿ ಪಾರ್ಕಿಂಗ್ ಸ್ಥಳಗಳನ್ನು ನಿರ್ಮಿಸುವುದು, ಅಭಿವೃದ್ಧಿಪಡಿಸುವುದು ಹಾಗೂ ನಿರ್ವಹಣೆ ಮಾಡಲು ಪಿಪಿಪಿ ಮಾದರಿ ಅನುಸರಣೆ ಮಾಡುವ ಅಂಶಗಳು ಇದರಲ್ಲಿವೆ. ಪ್ರಮುಖವಾಗಿ ರಾತ್ರಿ ವೇಳೆ ಕಾನೂನುಬಾಹಿರ ಚಟುವಟಿಕೆ ತಪ್ಪಿಸಲು ಪಾರ್ಕಿಂಗ್ ಸ್ಥಳಗಳಲ್ಲಿ ಸಾಕಷ್ಟು ವಿದ್ಯುತ್ ಬೆ
