ತುಮಕೂರು(ಡಿ.07): ತುಮಕೂರಿನಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಬಗ್ಗೆ ಮಾಲಿ, ಹಾಲಿ ಶಾಸಕರ ಅಸಮಧಾನ. ವ್ಯಕ್ತಪಡಿಸಿದ್ದಾರೆ. 
ಹಾಲಿ ಶಾಸಕ ಜ್ಯೋತಿಗಣೇಶ್ ಹಾಗೂ ಮಾಜಿ ಶಾಸಕ ರಫೀಕ್ ಅಹಮದ್ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರು ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಚೇರ್ಮನ್ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಅಧಿಕಾರಿಗಳು ಸ್ಮಾರ್ಟ್ ಸಿಟಿ ಕಾಮಗಾರಿಯನ್ನು ಮನಸೋ ಇಚ್ಛೆ ಮಾಡುತ್ತಿದ್ದಾರೆ.  ತುಮಕೂರು ನಗರಕ್ಕೆ ಅಗತ್ಯವಿರುವುದನ್ನು ಮಾಡುತ್ತಿಲ್ಲ. ಎಂದು ಅವರು ಆರೋಪಿಸಿದ್ದಾರೆ.

ಬೈ ಎಲೆಕ್ಷನ್: ಕಾರು, ಬೈಕ್, ಕುರಿ, ಕೋಳಿ ಸೇರಿ ಲಕ್ಷ ಲಕ್ಷ ಬೆಟ್ಟಿಂಗ್..!

ಸ್ಮಾರ್ಟ್ ಸಿಟಿ ಯೋಜನೆ ಬಿಳಿ ಆನೆ ಸಾಕುವುದಕ್ಕಾಗಿ ಯೋಜನೆ ಮಾಡಿದ್ದಂತಿದೆ.  ಸ್ಮಾರ್ಟ್ ಸಿಟಿ ಬೋರ್ಡ್ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ.‌ 
ಸ್ಮಾರ್ಟ್ ಸಿಟಿ ಬೆತ್ತಲು ದೇಹಕ್ಕೆ ಬ್ಲೇಝರ್ ಹೊಲಿಸಿದ್ದಂತಾಗಿದೆ. ಒಳಗೆ ಚಡ್ಡಿ, ಪ್ಯಾಂಟ್ ಏನಿಲ್ಲ ಎಂದು‌ ಕಾಮಗಾರಿಗಳ ಬಗ್ಗೆ ಶಾಸಕ ಜ್ಯೋತಿ ಗಣೇಶ್ ವ್ಯಂಗ್ಯ ಮಾಡಿದ್ದಾರೆ . ಕಾಮಗಾರಿಯಿಂದ ಬಿಳಿ ಆನೆ ಸಾಕಲು ಹೊರಟ್ಟಿದ್ದಾರೆ. ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಆಕ್ರೋಶ ಹೊರಹಾಕಿದ್ದಾರೆ.

ತುಮಕೂರು ನಗರ ಸಮಾಧಿಯಂತಾಗಿದೆ

ಮಾಜಿ ಶಾಸಕ ಡಾ. ರಫೀಕ್ ಸುದ್ದಿಗೋಷ್ಠಿ ನಡೆಸಿ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಜೊತೆಗೆ ಜನಪ್ರತಿನಿಧಿಗಳ ವೈಫಲ್ಯವಿದೆ. ಸ್ಮಾರ್ಟ್ ಸಿಟಿ ಅಧಿಕಾರಿಗಳ‌ ವಿರುದ್ದ ಕ್ರಮ ಕೈಗೊಳ್ಳಲಿ. ತುಮಕೂರು ನಗರ ಸಮಾಧಿಯಂತೆ ಗೋಚರಿಸುತ್ತಿದೆ ಎಂದಿದ್ದಾರೆ.

ಅಲ್ಲಲ್ಲಿ ಗುಂಡಿ ತೋಡಿ ಸಮಾಧಿಯಂತೆ ಮಾಡಿದ್ದಾರೆ. ಕಾಮಗಾರಿ ಅನುಷ್ಠಾನದ ಬಗ್ಗೆ ರಫೀಕ್ ಅಹಮದ್ ಆಕ್ರೋಶ ವ್ಯಕ್ತಪಡಿಸಿದ್ದು, ಕಾಮಗಾರಿ ಸರಿಯಾಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

'ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ವಿರುದ್ಧ ಫೈಟ್ ಮಾಡಿದ್ದೇವೆ'