Asianet Suvarna News Asianet Suvarna News

ಜ್ಞಾನಯೋಗಾಶ್ರಮಕ್ಕೆ ಬಿ.ಎಲ್.ಸಂತೋಷ, ಈಶ್ವರಪ್ಪ ಭೇಟಿ: ಸಿದ್ದೇಶ್ವರ ಶ್ರೀಗಳ ವಿಚಾರಧಾರೆ ಪಠ್ಯದಲ್ಲಿ ಅಳವಡಿಕೆಗೆ ಪ್ರಯತ್ನ!

ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ನಮ್ಮ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು. 

BL Santosh And KS Eshwarappa Visit Jnanayogashrama At Vijayapura gvd
Author
First Published Jan 29, 2023, 8:28 PM IST

ವಿಜಯಪುರ (ಜ.29): ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ನಮ್ಮ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು. ನಮ್ಮ ಸರಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ಪ್ರತಿಯೊಬ್ಬ ಕಾರ್ಯಕರ್ತ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಕರೆ ನೀಡಿದ್ದಾರೆ. 

ವಿಜಯಪುರದಲ್ಲಿ ಶಕ್ತಿಕೇಂದ್ರದ ಪ್ರಮುಖರ ಸಭೆ: ನಗರದ ಸಂಗಣಬಸವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭಿವೃದ್ಧಿ ಹಾಗೂ ವಿಚಾರಧಾರೆಗಳ ಮೂಲಕ ಚುನಾವಣೆ ಎದುರಿಸಬೇಕು, ಸ್ವತಂತ್ರವಾಗಿ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ನಾವೆಲ್ಲರೂ ಶ್ರಮಿಸಬೇಕು. ಎದುರಾಳಿ ಪಕ್ಷಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರವಾಗಿರಬೇಕು ಎಂದು ಹೇಳಿದರು. ನಮ್ಮೊಳಗಿನ ವೈಷಮ್ಯ ಮರೆತು ಪಕ್ಷ ಹಾಗೂ ದೇಶಕ್ಕಾಗಿ ದುಡಿಯೋಣ ಎಂದು ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬಿದರು. 

ಪತ್ನಿ ಶೀಲ ಶಂಕಿಸಿ ಕೊಲೆ ಪ್ರಕರಣ: ಪರಾರಿಯಾಗುತ್ತಿದ್ದ ಆರೋಪಿ ಬಂಧನ

ಇದಕ್ಕೂ ಮೊದಲು ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ್ ಕೂಚಬಾಳ, ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಸಮರ್ಥವಾಗಿ ಮುನ್ನೆಡೆಯುತ್ತಿದೆ. ಇಡೀ ಜಗತ್ತೇ ಇಂದು ಭಾರತದತ್ತ ತಿರುಗಿ ನೋಡುತ್ತಿದೆ, ವಿಶ್ವ ನಾಯಕನಾಗಿ ಬೆಳೆಯುತ್ತಿದೆ, ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಈಗಿನ ಸಿಎಂ ಬೊಮ್ಮಾಯಿಯವರು ಸಾಕಷ್ಟಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವುಗಳನ್ನು ಮನೆಮನೆಗೆ ತಲುಪಿಸುವ ಕಾರ್ಯ ನಮ್ಮೆಲ್ಲರ ಮೇಲಿದೆ, ರಾಷ್ಟ್ರೀಯ ಅಧ್ಯಕ್ಷರು ಜಿಲ್ಲೆಗೆ ಬಂದುಹೋದ ಮೇಲೆ ಹುಮ್ಮಸ್ಸು ಹೆಚ್ಚಾಗಿದ್ದು, ಇದೆ ಹುಮ್ಮಸ್ಸಿನಿಂದ ಚುನಾವಣೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಜ್ಞಾನಯೋಗಾಶ್ರಮಕ್ಕೆ ಬಿ ಎಲ್ ಭೇಟಿ: ಇದಕ್ಕೂ ಮುನ್ನ ಬಿ.ಎಲ್. ಸಂತೋಷ ಅವರು ಜ್ಞಾನಯೋಗಾಶ್ರಮಕ್ಕೆ ಭೇಟಿ ನೀಡಿ ಇತ್ತೀಚಿಗೆ ಅಗಲಿದ ಸಿದ್ದೇಶ್ವರ ಶ್ರೀಗಳಿಗೆ ಗೌರವ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಸಿದ್ದೇಶ್ವರ ಶ್ರೀಗಳು ಈ ಸಮಾಜಕ್ಕೆ ತಂಗಾಳಿ, ಸುವಾಸನೆ,‌ ನೆಮ್ಮದಿ, ಶಾಂತಿ ಈದ್ದಂತೆ ಎಂದು ಹೇಳಿದರು. ಪ್ರಕೃತಿ ನಿಯಮಕ್ಕೆ ಅನುಗುಣವಾಗಿ ಅವರು ಭೌತಿಕವಾಗಿ ನಮ್ಮ ಮಧ್ಯೆ ಅವರಿಲ್ಲ. ಆದರೆ ಅವರ ಚೇತನ ನಮ್ಮಲ್ಲಿದೆ. ಪ್ರಕೃತಿ ನಿಯಮಕ್ಕೆ ಯಾರಿಗೂ ಅತೀತನಾಗಿರಲು ಸಾಧ್ಯವಿಲ್ಲ. 

ಪೂಜ್ಯ ಸಿದ್ದೇಶ್ವರ ಶ್ರೀಗಳು ಭೌತಿಕವಾಗಿಲ್ಲದಿರಬಹುದು ಅವರ ವಿಚಾರದಲ್ಲಿದ್ದಾರೆ. ಅವರ ಚೇತನ ನಮ್ಮಲ್ಲಿದೆ ಎಂದರು. ನಾಡಿಗೋಸ್ಕರ ಅದಕ್ಕೂ‌ಮೀರಿ ಮನುಕುಲಕ್ಕೋಸ್ಕರ ಬದುಕಿದವರು ಸಿದ್ದೇಶ್ವರ ಶ್ರೀಗಳು. ಅವರ ಬಳಿ ಹೋದರೆ ಸಾಕು ಮನಸ್ಸು ಶಾಂತ ಸ್ಥಿತಿಗೆ ತಲುಪುತ್ತಿತ್ತು. ಪೂಜ್ಯ ಸಿದ್ದೇಶ್ವರ ಶ್ರೀಗಳು ಹೇಳಿದ ಒಂದಂಶವಾದರೂ ನಾವು ಅಲಿಸಿದರೆ ಅದೇ ನಾವು ಅವರಿಗೆ ಸಲ್ಲಿಸುವ ದೊಡ್ಡ ಶ್ರದ್ಧಾಂಜಲಿ ಎಂದರು.

ಜ್ಞಾನಯೋಗಾಶ್ರಮಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡ ಭೇಟಿ: ಸಿದ್ದೇಶ್ವರ ಶ್ರೀಗಳಿಗೆ ‌ನುಡಿನಮನ ಸಲ್ಲಿಸಿದರು. ಸಿದ್ದೇಶ್ವರ ಶ್ರೀಗಳು ಕೇವಲ ಸಂತರಲ್ಲ; ಸಂತನ ರೂಪದಲ್ಲಿರುವ ಭಗವಂತ ಇಡೀ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಉಪನ್ಯಾಸ ಮಾಡುವ ಹಕ್ಕು ಇದೆ. ಆದರೆ ಅಧಿಕಾರ ಯಾರಿಗೂ ಇಲ್ಲ. ಸಮಾಜಕ್ಕೆ ದಾರಿದೀಪವಾಗಿದ್ದ ಜ್ಯೋತಿ ಇಂದು ಆರಿ ಹೋಗಿದೆ ಎಂದು ನನಗೇನು ಅನ್ನಿಸಿಲ್ಲ. ಏಕೆಂದರ ಇಂಥ ಜ್ಯೋತಿಯಿಂದಲೇ ಭಾರತ ಇಂದು ವಿಶ್ವ ಬೆಳಗುತ್ತಿರುವುದು ಎಂದರು.

ಪಠ್ಯಕ್ರಮದಲ್ಲಿ ಶ್ರೀಗಳ ವಿಚಾರಧಾರೆ: ಸಿಎಂ ಜೊತೆಗೆ ಮಾತುಕತೆ ಎಂದ ಈಶ್ವರಪ್ಪ: ಸಿದ್ದೇಶ್ವರ ಶ್ರೀಗಳ ವಿಚಾರಧಾರೆಗಳನ್ನು ಪಠ್ಯದಲ್ಲಿ ಅಳವಡಿಸುವ ಕುರಿತಂತೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಲಾಗುತ್ತದೆ. ಮುಂದಿನ ಪೀಳಿಗೆಗೆ ಸಿದ್ದೇಶ್ವರ ಶ್ರೀಗಳು ಗೊತ್ತಾಗಳು ಪಠ್ಯದಲ್ಲಿ ಶ್ರೀಗಳ ಪಾಠ ಅಳವಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಹಂಪಿ ಉತ್ಸವದಲ್ಲಿ ತಾಯಿ ಭುವನೇಶ್ವರಿ ದೇವಿ ಭವ್ಯ ಮೆರವಣಿಗೆ: ತೆಪ್ಪ ಸ್ಪರ್ಧೆಯಲ್ಲಿ ಪಾಲ್ಗೊಂಡ ಮೀನುಗಾರರು

ಈ ಸಂದರ್ಭದಲ್ಲಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಎ.ಎಸ್. ಪಾಟೀಲ ನಡಹಳ್ಳಿ, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮುಖಂಡರಾದ ದಯಾಸಾಗರ ಪಾಟೀಲ, ಉಮೇಶ ಕೋಳಕೂರ, ಚಂದ್ರಶೇಖರ ಕವಟಗಿ ಉಪಸ್ಥಿತರಿದ್ದರು.

Follow Us:
Download App:
  • android
  • ios