ಮಂಡ್ಯ(ನ.25): ಕೆ. ಆರ್. ಪೇಟೆ ಅಭ್ಯರ್ಥಿ ಕೆ. ಸಿ. ನಾರಾಯಣ ಗೌಡ ಪರ ಇಂದು ಚುನಾವಣಾ ಪ್ರಚಾರ ನಡೆಯುತ್ತಿದ್ದು, ಬಿಜೆಪಿ ಸಮಾವೇಶದಲ್ಲಿ ಸ್ಥಳದ ಕೊರತೆಯಿಂದ ಕಾರ್ಯಕರ್ತರು ಮರ ಹತ್ತಿಕುಳಿತಿದ್ದಾರೆ.

ಕೆ. ಆರ್. ಪೇಟೆಯ ಕಿಕ್ಕೇರಿಯಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಸಿಎಂ ಬಿ. ಎಸ್. ಯಡಿಯೂರಪ್ಪ, ಡಿಸಿಎಂ ಅಶ್ವತ್ಥ್ ನಾರಾಯಣ್ ಸೇರಿ ಹಲವು ಪ್ರಮುಖರು ಭಾಗವಹಿಸಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದಾರೆ.

ಕೆ. ಆರ್‌. ಪೇಟೆಯಲ್ಲಿ ಸಿಎಂ ಮತಬೇಟೆ, JDS ಪರ ನಿಖಿಲ್ ಪ್ರಚಾರ

ಕಾರ್ಯಕ್ರಮ ನೋಡಲು ಕಾರ್ಯಕರ್ತರು ಮರವೇರಿದ ಘಟನೆ ಕಿಕ್ಕೇರಿ ಬಿಜೆಪಿ ಸಮಾವೇಶದಲ್ಲಿ ನಡೆದಿದೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಚುನಾವಣಾ ಪ್ರಚಾರದ ಹಿನ್ನಲೆ ನಡೆಯುತ್ತಿರುವ ಸಮಾವೇಶದಲ್ಲಿ ಸಹಸ್ರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ವೇದಿಕೆ ಮುಂಭಾಗದ ಕುರ್ಚಿಗಳೆಲ್ಲವೂ ಭರ್ತಿಯಾಗಿದ್ದು, ಹಾಗಾಗಿ ಕಾರ್ಯಕ್ರಮ ವೀಕ್ಷಿಸಲು ಕಾರ್ಯಕರ್ತರು ಮರ ಹತ್ತಿ ಕುಳಿತಿದ್ದಾರೆ.

ಡಿಸೆಂಬರ್ 5ರಂದು ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಪಕ್ಷಗಳು ಕ್ಷೇತ್ರಗಳಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿವೆ.

ಪಕ್ಷ ಕಷ್ಟದಲ್ಲಿದೆ, ದಯಮಾಡಿ ಜೆಡಿಎಸ್ ಉಳಿಸಿಕೊಡಿ ಎಂದ ನಿಖಿಲ್ ಕುಮಾರಸ್ವಾಮಿ