ತಿಪಟೂರು (ಅ.01):  ನಗರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ರಾಮ್‌ಮೋಹನ್‌(ಶಾಸಕ ಬಿ.ಸಿ. ನಾಗೇಶ್‌ ಬಣ) ಹಾಗೂ ಬಿಜೆಪಿ ಮುಖಂಡ ಲೋಕೇಶ್ವರ ಅವರ ಬಣದ ಸೊಪ್ಪು ಗಣೇಶ್‌(ಜೆಡಿಎಸ್‌ನಿಂದ ಗೆದ್ದಿದ್ದರು) ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ.

ಬಿಜೆಪಿಯ 16 ಮತ್ತು ಲೋಕೇಶ್ವರ ಬಣದ 4 ಜನ ಸದಸ್ಯರು, ಶಾಸಕರು ಹಾಗೂ ಸಂಸದರ ಮತ ಸೇರಿ 22 ಮತಗಳು ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಮ್‌ಮೋಹನ್‌ ಹಾಗೂ ಉಪಾಧ್ಯರಾಗಿ ಆಯ್ಕೆಯಾಗಿರುವ ಸೊಪ್ಪುಗಣೇಶ್‌ ಪಡೆಯುವ ಮೂಲಕ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದ್ದರೆ, ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಮಹೇಶ್‌ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮೇಘಶ್ರೀ ಭೂಷಣ್‌ ಅವರಿಗೆ ತಲಾ 10 ಮತಗಳು ಬೀಳುವ ಮೂಲಕ ಪರಾಜಿತರಾಗಿದ್ದಾರೆ.

ಆರ್ ಆರ್‌ ನಗರ ಚುನಾವಣೆ : ಕೈ ವಿರುದ್ಧ ಈಗ ಮತ್ತೊಂದು ಗಂಭೀರ ಆರೋಪ ...

ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಶಾಸಕ ಬಿ.ಸಿ ನಾಗೇಶ್‌, ಬಿಜೆಪಿ ಮುಖಂಡ ಲೋಕೇಶ್ವರ ಅಭಿನಂದಿಸಿ, ನಗರಸಭೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿರುವುದು ಸಂತಸ ಉಂಟುಮಾಡಿದ್ದು, ಜನರ ನಿರೀಕ್ಷೆಯಂತೆ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿಗಳಾದ ದಿಗ್ವಿಜಯ್‌ ಬೋಡ್ಕೆ ಕರ್ತವ್ಯ ನಿರ್ವಹಿಸಿದರು. ಡಿವೈಎಸ್‌ಪಿ ಚಂದನ್‌ಕುಮಾರ್‌ ನೇತೃತ್ವದಲ್ಲಿ ಬಿಗಿಪೊಲೀಸ್‌ ಬಂದೋಬಸ್‌್ತ ಏರ್ಪಡಿಸಲಾಗಿತ್ತು.