Asianet Suvarna News Asianet Suvarna News

ಅರಳಿದ ಕಮಲ : ಬಿಜೆಪಿಗರು ಅವಿರೋಧ ಆಯ್ಕೆ

ಕಮಲ ಪಾಳಯ ಭರ್ಜರಿ ಜಯಗಳಿಸಿದ್ದು, ಬಿಜೆಪಿ ಅದೃಷ್ಟದ ಗೆಲುವು ಒಲಿದಿದೆ. ಅವಿರೋಧವಾಗಿ ಮುಖಂಡರು ಆಯ್ಕೆಯಾಗಿದ್ದಾರೆ. 

BJP Won in Gokak City Municipality Election snr
Author
Bengaluru, First Published Nov 3, 2020, 3:13 PM IST

 ಗೋಕಾಕ (ನ.03):  ಕಳೆದ ಎರಡು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ಚುನಾವಣೆ ನಡೆದು ಅಧ್ಯಕ್ಷರಾಗಿ ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ನಗರಸಭೆ ಸದಸ್ಯ ಜಯಾನಂದ ಹುಣಚ್ಯಾಳಿ ಮತ್ತು ಉಪಾಧ್ಯಕ್ಷರಾಗಿ ಬಸವರಾಜ ಅರೆನ್ನವರ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮೊದಲ ಬಾರಿಗೆ ಗೋಕಾಕ ನಗರಸಭೆ ಬಿಜೆಪಿಯ ಪಾಲಾಗಿದೆ

ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಗರಸಭೆ ಸದಸ್ಯ ಜಯಾನಂದ ಹುಣಚ್ಯಾಳಿ ಮತ್ತು ಪರಿಶಿಷÜ್ಟವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಗರಸಭೆ ಸದಸ್ಯ ಬಸವರಾಜ ಅರೆನ್ನವರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದೆ ಎಂದು ಘೋಷಿಸಿದರು

ಬಿಬಿಎಂಪಿ ನಿರ್ಲಕ್ಷ್ಯ: ನೂರಾರು ಜನರಿಗೆ ಸಿಗದ ಪೋಸ್ಟಲ್ ವೋಟಿಂಗ್ ಸೌಲಭ್ಯ

ಸಚಿವ ರಮೇಶ ಜಾರಕಿಹೊಳಿ ಬೆಂಬಲಿತ ವಾರ್ಡ್‌ ನಂ. 15 ರಿಂದ ಎರಡನೇ ಬಾರಿಗೆ ನಗರಸಭೆ ಸದಸ್ಯರಾಗಿ ಆಯ್ಕೆಯಾದ ಪ್ರಬಲ ಲಿಂಗಾಯತ ಸಮುದಾಯ ಯುವ ನಾಯಕ ಜಯಾನಂದ ಹುಣಚ್ಯಾಳಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರೆ ವಾರ್ಡ್‌ ನಂ 25 ರಿಂದ ಮೊದಲನೇ ಬಾರಿಗೆ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಪರಿಶಿಷÜ್ಟವರ್ಗದ ಬಸವರಾಜ ಅರೆನ್ನವರ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಆಯ್ಕೆ ಪ್ರಕ್ರಿಯೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ನೂತನ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಸಚಿವ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಗೋಕಾಕ ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು

ಸಚಿವ ರಮೇಶ ಬೆಂಬಲಿತ ಅಭ್ಯರ್ಥಿಗಳಿಗೆ ಸೂಚಕರಾದ ಲಖನ್‌ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳು:

ಚುನಾವಣೆ ದಿನಾಂಕ ಘೋಷಣೆಯಾದಗಿನಿಂದ ತೀವ್ರ ಕುತೂಹಲ ಕೆರಳಿಸಿದ್ದ ಗೋಕಾಕ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಮತ್ತು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಸಂಧರ್ಭದಲ್ಲಿ ಕಾಂಗ್ರೆಸ್‌ ಮುಖಂಡ ಲಖನ್‌ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳು ಸೂಚಕರಾಗಿದ್ದು, ಎಲ್ಲರ ಹುಬ್ಬೇರಿಸಿತ್ತು. ಕಳೆದ ಕೆಲವು ತಿಂಗಳಗಳ ಹಿಂದೆ ಪರೋಕ್ಷವಾಗಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಬೆಂಬಲಿಸುತ್ತಿರುವ ಲಖನ್‌ ಜಾರಕಿಹೊಳಿ ಅವರು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸದೆ ಸಚಿವ ರಮೇಶ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳಿಗೆ ಸೂಚಕರಾಗಿ ಸಹಿ ಮಾಡುವ ಮೂಖೇನ ಮುಂದೆ ಬಿಜೆಪಿಗೆ ಸೇರುವ ಸೂಚನೆಯನ್ನು ನೀಡಿದ್ದಂತಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಗೋಕಾಕ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಪೂರ್ವ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಿದ್ದು , ಮೊದಲ ಬಾರಿಗೆ ಗೋಕಾಕ ನಗರಸಭೆಯಲ್ಲಿ ಬಿಜೆಪಿ ಧ್ವಜ ಹಾರಾಡಿದೆ.

Follow Us:
Download App:
  • android
  • ios