Asianet Suvarna News Asianet Suvarna News

ಬಿಬಿಎಂಪಿ ಚುಕ್ಕಾಣಿ ಹಿಡಿದ ಬಿಜೆಪಿ: ಗೌತಮ್ ಮೇಯರ್, ರಾಮ್ ಮೋಹನ್ ರಾಜು ಉಪಮೇಯರ್!

ನಾಲ್ಕು ವರ್ಷಗಳ ಬಳಿಕ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರ| ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ ಚುನಾವಣೆಯಲ್ಲೂ ಬಿಜೆಪಿಗೆ ಜಯ| ಕೊನೆ ಗಳಿಹಗೆಯಲ್ಲಿ ಗೊಂದಲ ನಿವಾರಣೆ, ಆಕಾಂಕ್ಷಿಗಳ ಮನವೊಲಿಸಲು ಕಮಲ ಪಾಳಯ ಯಶಸ್ವಿ| ಬಿಜೆಪಿ ಅಭ್ಯರ್ಥಿ ಗೌತಮ್ ಮೇಯರ್ ಬೆಂಗಳೂರಿನ ನೂತನ ಮೇಯರ್, ರಾಮ್ ಮೋಹನ್ ರಾಜು ಉಪಮೇಯರ್| 

BJP Won in BBMP Election Gautam Kumar Becomes Mayor Ram Mohan Raju As Deputy Mayor
Author
Bangalore, First Published Oct 1, 2019, 1:46 PM IST

ಬೆಂಗಳೂರು[ಅ.01]: ಕಾಂಗ್ರೆಸ್, ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿ ನಡುವೆ ತೀವ್ರ ಪೈಪೋಟಿ ಮೂಡಿಸಿದ್ದ ಬಿಬಿಎಂಪಿ ಚುನಾವಣೆಯಲ್ಲಿ ಕಮಲ ಪಾಳಯಕ್ಕೆ ಗೆದ್ದು ಬೀಗಿದೆ. ಬೆಂಗಳೂರಿನ ನೂತನ ಮೇಯರ್ ಆಗಿ ಗೌತಮ್ ಕುಮಾರ್ ಆಯ್ಕೆಯಾಗಿದ್ದು, ಉಪ ಮೇಯರ್ ಆಗಿ ರಾಮ್ ಮೋಹನ್ ರಾಜು ಆಯ್ಕೆತಯಾಗಿದ್ದಾರೆ. 

"

ಬರೋಬ್ಬರಿ ನಾಲ್ಕು ವರ್ಷಗಳ ಬಳಿಕ ಬೆಂಗಳೂರಿನ ಗದ್ದುಗೆ ಏರಲು ಬಿಜೆಪಿ ಯಶಸ್ವಿಯಾಗಿದ್ದು, ಕಾಂಗ್ರೆಸ್- ಜೆಡಿಎಸ್ ದೋಸ್ತಿಗಳಿಗೆ ತೀವ್ರ ಮುಖಭಂಗವಾಗಿದೆ. RSS ಹಿನ್ನೆಲೆಯ, ಜೈನ ಸಮುದಾಯದ ಗೌತಮ್‌ ಕುಮಾರ್‌ ಬೆಂಗಳೂರಿನ 53ನೇ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಬೊಮ್ಮನಹಳ್ಳಿ ವಾರ್ಡ್ ನ ಕಾರ್ಪೋರೇಟರ್ ರಾಮ್ ಮೋಹನ್ ರಾಜು ಉಪ ಮೇಯರ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ.

"

ಯಾರು ಗೌತಮ್ ಕುಮಾರ್?

ಎರಡು ಬಾರಿ ಬಿಜೆಪಿಯಿಂದ ಜೋಗುಪಾಳ್ಯ ವಾರ್ಡ್ ಕಾರ್ಪೊರೇಟರ್ ಆಗಿ ಆಯ್ಕೆಯಾದ ಗೌತಮ್ ಕುಮಾರ್, RSSನಲ್ಲಿ ಗುರುತಿಸಿಕೊಂಡಿದ್ದಾರೆ. ಬಿಕಾಂ ಪದವೀಧರರಾಗಿರುವ ಗೌತಮ್ ಕುಮಾರ್, ಎಂದಿಗೂ ಪಕ್ಷ ಮತ್ತು ಸಂಘದ ಮಾತನ್ನು ಯಾವತ್ತೂ ಮೀರಿದವರಲ್ಲ.

Follow Us:
Download App:
  • android
  • ios