ಬಿಜೆಪಿ ಹಿರಿಯ ಮುಖಂಡ ಎಸ್.ಆರ್. ಪಿಕಳೆ ನಿಧನ
1957ರಲ್ಲಿ ಡಾ. ಪಿಕಳೆ ನ್ಯೂ ನರ್ಸಿಂಗ್ ಹೋಮ್‌ನ್ನು ತೆರೆದು ವೈದ್ಯಕೀಯ ಸೇವೆ ಆರಂಭಿಸಿದ್ದ ಎಸ್.ಆರ್. ಪಿಕಳೆ| ಪಿಕಳೆ ಮನೆತನದ ಮೂರು ತಲೆಮಾರು ಕಂಡ ಕಾರವಾರ ನಗರಸಭೆ| ಬಿಜೆಪಿ ನಪಕ್ಷ ಸಂಘಟನೆಗೋಸ್ಕರ ಹಗಲಿರುಳು ಶ್ರಮಿಸಿದ್ದ ಪಿಕಳೆ|
ಕಾರವಾರ(ಡಿ.09): ಜನಸಂಘ, ಬಿಜೆಪಿಯ ಹಿರಿಯ ಮುಖಂಡ ಡಾ. ಶ್ರೀಪಾದ ಆರ್. ಪಿಕಳೆ (92) ಮಂಗಳವಾರ ನಿಧನರಾದರು.
ಎಸ್.ಆರ್.ಪಿಕಳೆ ಎಂದೇ ಮನೆಮಾತಾಗಿದ್ದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ನಗರದಲ್ಲಿ 1957ರಲ್ಲಿ ಡಾ. ಪಿಕಳೆ ನ್ಯೂ ನರ್ಸಿಂಗ್ ಹೋಮ್‌ನ್ನು ತೆರೆದು ವೈದ್ಯಕೀಯ ಸೇವೆ ಆರಂಭಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತತ್ವ ಸಿದ್ಧಾಂತಗಳಿಗೆ ಮಾರು ಹೋಗಿ ಜನಸಂಘದ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ ಜನ ಸಂಘವು ಬಿಜೆಪಿಯಾಗಿ ರೂಪಾಂತರಗೊಂಡಾಗ ಕಾರವಾರದಲ್ಲಿ ಪಕ್ಷದ ನಾಯಕತ್ವ ಪಡೆದು ಮುನ್ನಡೆಸಿದ್ದರು.
ವಿಧಾನಸಭೆಗೆ 1983ರಲ್ಲಿ ನಡೆದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಅದೃಷ್ಟದಿ. ಎಸ್.ಆರ್. ಪಿಕಳೆ ಕೈಹಿಡಿಯಲಿಲ್ಲ. ಪಕ್ಷ ಸಂಘಟನೆಗೋಸ್ಕರ ಹಗಲಿರುಳು ಶ್ರಮಿಸಿದ್ದರು. ಹೀಗಾಗಿ, 1980ರಲ್ಲಿ ಬಿಜೆಪಿ ನಗರಸಭೆ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು. ಡಾ.ಪಿಕಳೆ ಅಧ್ಯಕ್ಷರಾಗಿದ್ದರು. ಡಾ. ಪಿಕಳೆ ನಿಧನದೊಂದಿಗೆ ಕಾರವಾರದಲ್ಲಿ ಮೂಲ ಬಿಜೆಪಿಯ ಕೊಂಡಿಯೊಂದು ಕಳಚಿದಂತಾಗಿದೆ.
ಹಠಾತ್ತಾಗಿ ಕುಸಿದ ಈರುಳ್ಳಿ ದರ: ಮುಗಿಬಿದ್ದ ಗ್ರಾಹಕರು
ಮೂರು ತಲೆಮಾರು
1980ರಲ್ಲಿ ಡಾ. ಎಸ್.ಆರ್.ಪಿಕಳೆ, ಅದಕ್ಕೂ ಪೂರ್ವ 1969ರಲ್ಲಿ ಜನಸಂಘದ ಕಾಲದಲ್ಲಿ ಸಹೋದರ ಡಾ. ಎಂ.ಆರ್. ಪಿಕಳೆ ಕೂಡಾ ಅಧ್ಯಕ್ಷರಾಗಿದ್ದರು. 2020ರಲ್ಲಿ ಎಸ್.ಆರ್. ಪಿಕಳೆ ಪುತ್ರ ಡಾ. ನಿತಿನ್ ಪಿಕಳೆ ಅಧ್ಯಕ್ಷರಾಗಿದ್ದಾರೆ. ಕಾರವಾರ ನಗರಸಭೆ ಪಿಕಳೆ ಮನೆತನದ ಮೂರು ತಲೆಮಾರನ್ನು ಕಂಡಿದೆ. ಡಾ. ನಿತಿನ್ ಅಧ್ಯಕ್ಷರಾದಾಗ ಮನೆಗೆ ತೆರಳಿ ತಮ್ಮ ತಂದೆ ಎಸ್.ಆರ್. ಪಿಕಳೆ ಬಳಿ, ಮುನ್ಸಿಪಾಲ್ಟಿಇಲೆಕ್ಷನ್ ಜಲೆ, ಹಾಂವ್ ಪ್ರೆಸಿಡೆಂಟ್ ಮಣ್ ಇಲೆಕ್ಟ್ ಜಲೋ (ಮುನ್ಸಿಪಾಲ್ಟಿಚುನಾವಣೆ ನಡೆಯಿತು. ನಾನು ಅಧ್ಯಕ್ಷನಾಗಿ ಆಯ್ಕೆಯಾದೆ) ಎಂದಾಗ ಸಂತಸ ವ್ಯಕ್ತಪಡಿಸಿದ್ದು, ಉಲ್ಲೇಖನೀಯ.