Asianet Suvarna News Asianet Suvarna News

ಮನೆ ಕಂದಾಯ ಏಕಗವಾಕ್ಷಿ ಪದ್ಧತಿ: ಬಿಜೆಪಿ ನಿಯೋಗ ಒತ್ತಾಯ

ನಗರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಮನೆ ಕಂದಾಯ ಹಾಗೂ ನೀರಿನ ತೆರಿಗೆ ಪಾವತಿಸಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.ಹೀಗಾಗಿ ಏಕಗವಾಕ್ಷಿ ಪದ್ಧತಿ ಜಾರಿಗೆ ತರಲು ಬಿಜೆಪಿ ನಿಯೋಗ ಒತ್ತಾಯಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

BJP urges Single Window system for property and water tax
Author
Sagara, First Published May 13, 2020, 9:08 AM IST

ಸಾಗರ(ಮೇ.13): ಸಾರ್ವಜನಿಕರು ನಗರಸಭೆಗೆ ಮನೆ ಕಂದಾಯ ಮತ್ತು ನೀರಿನ ಕಂದಾಯ ಪಾವತಿಸಲು ಏಕಗವಾಕ್ಷಿ ಪದ್ಧತಿ ಜಾರಿಗೆ ತರುವಂತೆ ಒತ್ತಾಯಿಸಿ ಮಂಗಳವಾರ ನಗರಸಭೆಯ ಬಿಜೆಪಿ ಸದಸ್ಯರ ನಿಯೋಗ ಉಪವಿಭಾಗಾ​ಧಿಕಾರಿ ಹಾಗೂ ನಗರಸಭೆ ಆಡಳಿತಾ​ಕಾರಿ ಡಾ.ನಾಗರಾಜ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್‌ ಮಾತನಾಡಿ, ನಗರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ಮನೆ ಕಂದಾಯ ಹಾಗೂ ನೀರಿನ ತೆರಿಗೆ ಪಾವತಿಸಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ನಗರಸಭೆಯಿಂದ ಬ್ಯಾಂಕಿಗೆ, ಬ್ಯಾಂಕಿನಿಂದ ಝೆರಾಕ್ಸ್‌ ಅಂಗಡಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕುಗಳಲ್ಲಿ ಜನದಟ್ಟಣೆ ಇರುವುದರಿಂದ ಕಂದಾಯ ಪಾವತಿಸಲು ಕಷ್ಟಸಾಧ್ಯವಾಗುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಎರಡನೇ ದಿನಕ್ಕೆ ದಿಢೀರ್ ಕುಸಿದ ಅಡಕೆ ಧಾರಣೆ

ಹಿಂದೆ ನಗರಸಭೆಯಲ್ಲಿಯೆ ಬ್ಯಾಂಕಿನವರು ಉಪಸ್ಥಿತರಿದ್ದು ಕಂದಾಯ ಬಾಬ್ತು ಪಾವತಿ ಮಾಡಿಸಿಕೊಳ್ಳುತ್ತಿದ್ದರು. ಇದರಿಂದ ತೆರಿಗೆದಾರರು ಸುಲಭವಾಗಿ ಮನೆ ಗಂದಾಯ ಹಾಗೂ ನೀರಿನ ತೆರಿಗೆ ಪಾವತಿ ಮಾಡಲು ಅನುಕೂಲವಾಗುತ್ತಿತ್ತು. ಈ ಸಾಲಿನಲ್ಲಿಯೂ ನಗರಸಭೆಯಲ್ಲಿ ಏಕಗವಾಕ್ಷಿಯಡಿ ಕಂದಾಯ ಪಾವತಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಸ್ಪಂದಿಸಿದ ಎಸಿ:

ಬಿಜೆಪಿ ಸದಸ್ಯರ ಮನವಿಗೆ ಸ್ಪಂದಿಸಿದ ಉಪವಿಭಾಗಾ​ಧಿಕಾರಿ ಡಾ.ನಾಗರಾಜ್‌, ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆ ಆಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ. ಸಂಬಂಧಪಟ್ಟಬ್ಯಾಂಕ್‌ ಅ​ಕಾರಿಗಳೊಂದಿಗೆ ಚರ್ಚೆ ನಡೆಸಿ, ನಗರಸಭೆಯಲ್ಲಿಯೆ ಕೌಂಟರ್‌ ತೆರೆಯುವಂತೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೆ.ಆರ್‌.ಗಣೇಶಪ್ರಸಾದ್‌, ರಾಮು ಇತರರು ಇದ್ದರು.

Follow Us:
Download App:
  • android
  • ios