Asianet Suvarna News Asianet Suvarna News

ಮೈಸೂರು: ಅನ್ನಭಾಗ್ಯ ಅಕ್ಕಿಗೆ ಕನ್ನ ಹಾಕಿದ ಬಿಜೆಪಿ ಸದಸ್ಯ

ತಿ.ನರಸೀಪುರ ಪುರಸಭೆಯ ಬಿಜೆಪಿ ಸದಸ್ಯ ಎಸ್.ಕೆ. ಕಿರಣ್ ಅವರು ಅಕ್ರಮವಾಗಿ ಪಡಿತರ ಅಕ್ಕಿ ಶೇಖರಣೆ ಮಾಡಿಕೊಂಡು ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎಂಬ ಆರೋಪ  

BJP TMC Member Who Selling Ration Rice Illegally in Mysuru grg
Author
First Published Nov 1, 2022, 12:15 PM IST

ಮೈಸೂರು(ನ.01):  ಜಿಲ್ಲೆಯ ತಿ.ನರಸೀಪುರ ಪುರಸಭೆ ಸದಸ್ಯ ಕಿರಣ್‌ ಅವರಿಗೆ ಸೇರಿದ ಗೋದಾಮಿನಲ್ಲಿ ರಾಶಿಗಟ್ಟಲೆ ಪಡಿತರ ಅಕ್ಕಿ ಮೂಟೆ ಪತ್ತೆಯಾದ ಘಟನೆ ಇಂದು(ಮಂಗಳವಾರ) ನಡದಿದೆ. ತಿ.ನರಸೀಪುರ ಪುರಸಭೆಯ ಬಿಜೆಪಿ ಸದಸ್ಯ ಎಸ್.ಕೆ. ಕಿರಣ್ ಅವರು ಅಕ್ರಮವಾಗಿ ಪಡಿತರ ಅಕ್ಕಿ ಶೇಖರಣೆ ಮಾಡಿಕೊಂಡು ಕಾಳಸಂತೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. 

ಬಡವರ ಮನೆ ಸೇರಬೇಕಿದ್ದ ಅನ್ನಭಾಗ್ಯ ಅಕ್ಕಿ ಪುರಸಭೆ ಸದಸ್ಯನ ಗೋದಾಮಿನಲ್ಲಿ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಅಕ್ರಮ ಪಡಿತರ ಗೋದಾಮಿನ ಮೇಲೆ ಪೋಲೀಸರು ದಾಳಿ ನಡೆಸಿದ್ದಾರೆ. ಮೈಸೂರು ಜಿಲ್ಲಾ ಎಸ್ಪಿ ಆರ್. ಚೇತನ್,  ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಮಾರ್ಗದರ್ಶನದಲ್ಲಿ ಪೋಲೀಸರು ದಾಳಿ ನಡೆಸಿದ್ದಾರೆ. 

ಮೈಸೂರು: ಮುಂದಿನ ವರ್ಷದಿಂದ ತಾಲೂಕು ಆಡಳಿತದಿಂದ ರೈತ ದಿನಾಚರಣೆ ಆಚರಿಸಲು ಕ್ರಮ

ದಾಳಿ ವೇಳೆ ಸುಮಾರು 20 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ಪತ್ತೆಯಾಗಿದೆ.  ಈ ಸಂಬಂಧ ಕಿರಣ್ ತಂದೆ ಸೇರಿದಂತೆ 7 ಜನರನ್ನ ಬಂಧಿಸಲಾಗಿದೆ. ಸ್ಥಳಕ್ಕೆ ತಹಸೀಲ್ದಾರ್ ಗೀತಾ, ಆಹಾರ ಇಲಾಖೆ ಶಿರಸ್ತೇದಾರ್ ಮಂಜುನಾಥ್, ಕಂಠಿ, ದೇವಣ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 
 

Follow Us:
Download App:
  • android
  • ios