Asianet Suvarna News Asianet Suvarna News

ಮತಗಟ್ಟೆ ಗೆಲುವಿಗೆ ಬಿಜೆಪಿ ರಣತಂತ್ರ: ಮಹೇಶ

ಬಿಜೆಪಿಯು ಪ್ರತಿ ಮತಗಟ್ಟೆಗಳಲ್ಲಿ ಪೇಜ್‌ ಹಾಗೂ ವಾರ್ಡ್‌ ಸಮಿತಿ ರಚನೆ, ಬೂತ್‌ ಪದಾಧಿಕಾರಿಗಳ ಹಾಗೂ ಪಂಚರತ್ನಗಳ ಕಾರ್ಯನಿರ್ವಹಣೆ, ವಾಟ್ಸ್ಯಾಪ್‌ ಗ್ರೂಪ್‌ ರಚನೆ, ಕೀವೋಟ​ರ್‍ಸ್, ಪ್ರತೀ ತಿಂಗಳ ಅಂತ್ಯದಲ್ಲಿ ಪ್ರಧಾನಿ ನರೇಂದ್ರಮೋದಿರವರ ಮನ್‌ ಕೀ ಬಾತ್‌ ಕಾರ್ಯಕ್ರಮ ಆಯೋಜನೆ ಮತ್ತು ಎಲ್ಲಾ ವರ್ಗ, ಸಮುದಾಯಗಳ ಮತದಾರರನ್ನು ವಿಶ್ವಾಸಕ್ಕೆ ಪಡೆಯುವ ದೃಷ್ಟಿಯಿಂದ ಬೂತ್‌ ವಿಜಯ್‌ ಅಭಿಯಾನವನ್ನು ನಡೆಸುತ್ತಿದೆ

BJP strategy for poll victory: Mahesh snr
Author
First Published Jan 12, 2023, 5:02 AM IST

 ತುಮಕೂರು :  ಬಿಜೆಪಿಯು ಪ್ರತಿ ಮತಗಟ್ಟೆಗಳಲ್ಲಿ ಪೇಜ್‌ ಹಾಗೂ ವಾರ್ಡ್‌ ಸಮಿತಿ ರಚನೆ, ಬೂತ್‌ ಪದಾಧಿಕಾರಿಗಳ ಹಾಗೂ ಪಂಚರತ್ನಗಳ ಕಾರ್ಯನಿರ್ವಹಣೆ, ವಾಟ್ಸ್ಯಾಪ್‌ ಗ್ರೂಪ್‌ ರಚನೆ, ಕೀವೋಟ​ರ್‍ಸ್, ಪ್ರತೀ ತಿಂಗಳ ಅಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿರವರ ಮನ್‌ ಕೀ ಬಾತ್‌ ಕಾರ್ಯಕ್ರಮ ಆಯೋಜನೆ ಮತ್ತು ಎಲ್ಲಾ ವರ್ಗ, ಸಮುದಾಯಗಳ ಮತದಾರರನ್ನು ವಿಶ್ವಾಸಕ್ಕೆ ಪಡೆಯುವ ದೃಷ್ಟಿಯಿಂದ ಬೂತ್‌ ವಿಜಯ್‌ ಅಭಿಯಾನವನ್ನು ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹಾಗೂ ಸೋಮೇಶ್ವರ ಶಕ್ತಿಕೇಂದ್ರದ ವಾರ್ಡ್‌ 25ರ ಪ್ರಭಾರಿ ಕೆ.ಪಿ.ಮಹೇಶ ತಿಳಿಸಿದರು.

ನಗರದ ಸೋಮೇಶ್ವರಪುರಂನ ವಾರ್ಡ್‌ 25ರ ಮತಗಟ್ಟೆ ಸಂಖ್ಯೆ 167ರ ವಾರ್ಡ್‌ ಅಧ್ಯಕ್ಷ ರಾಜ್‌ ಕುಮಾರ್‌ ಗುಪ್ತರವರ ಮನೆ ಮೇಲೆ ಬಿಜೆಪಿ ಧ್ವಜವನ್ನು ಹಾರಿಸುವ ಸಂದರ್ಭದಲ್ಲಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಮತ್ತು ವಿಧಾನಸಭೆ- 2023ರ ಚುನಾವಣೆಯಲ್ಲಿ ಬಿಜೆಪಿ ಅಭೂತ ಪೂರ್ಣ ಸ್ಪಷ್ಟಬಹುಮತಕ್ಕೆ ಬೂತ್‌ ಮಟ್ಟದಲ್ಲಿ ಅತ್ಯಧಿಕ ಮತ ಪಡೆಯುವ ದೃಷ್ಟಿಯಿಂದ ಹಾಗೂ ಕೇಂದ್ರ, ರಾಜ್ಯ ಬಿಜೆಪಿಯ ಡಬ್ಬಲ್‌ ಎಂಜಿನ್‌ ಸರ್ಕಾರಗಳು ನೀಡಿರುವ ಕೊಡುಗೆ ಮತ್ತು ಸಾಧನೆಗಳನ್ನು ಪ್ರತಿ ಮನೆಗೆ ತಲುಪಿಸಿ, ಮತದಾರರ ಮನ ಗೆದ್ದು, ಮತವಾಗಿ ಪರಿವರ್ತಿಸುವ ಕಾರ್ಯಕ್ಕೆ ಬಿಜೆಪಿ ಮುಂದಾಗಿದೆ ಎಂದರು

ಪ್ರಥಮ ಹಂತದಲ್ಲಿ ಪ್ರತಿ ಬೂತ್‌ನ ಬಿಜೆಪಿ ಪದಾಧಿಕಾರಿಗಳು, ಸದಸ್ಯರು ಮತ್ತು ಕೀವೋಟ​ರ್‍ಸ್ನ 25 ಮನೆಗಳ ಮೇಲೆ ಬಾವುಟ ಹಾರಿಸುವುದರ ಮೂಲಕ ಬಿಜೆಪಿ ಬೂತ್‌ ವಿಜಯ್‌ ಅಭಿಯಾನವನ್ನು ಚಾಲನೆಗೊಳಿಸಿದೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಬಿಜೆಪಿ ರಾಜ್ಯ ವಕ್ತಾರ ಹಾಗೂ ಜಿಲ್ಲಾ ಉಪಾಧ್ಯಕ್ಷ ಎಚ್‌.ಎನ್‌.ಚಂದ್ರಶೇಖರ್‌, ತುಮಕೂರು ಮಂಡಲಾಧ್ಯಕ್ಷ ಟಿ.ಎಚ್‌.ಹನುಮಂತರಾಜು, ನಗರ ಮಂಡಲ ಮಹಿಳಾ ಮೋರ್ಚಾ ಪ್ರಧಾನಕಾರ್ಯದರ್ಶಿ ಹಾಗೂ ಬಿಜೆಪಿ ಬೂತ್‌ ವಿಜಯ್‌ ಅಭಿಯಾನದ ಪ್ರಮುಖ್‌ ಕಾವ್ಯ, ಕಾರ್ಯಕರ್ತರಾದ ಮುತ್ತುರಾಜ್‌, ವಾದಿರಾಜ್‌, ಸಿ.ಎನ್‌.ರವಿಕುಮಾರ್‌, ಚೈತ್ರ, ನಂಜುಂಡಿ, ಸೀತಾರಾಮು, ಚಂದ್ರಶೇಖರ್‌ ಉಪಸ್ಥಿತರಿದ್ದರು.

ಜನರ ಅಭಿವೃದ್ಧಿಗೆ ಬದ್ಧ

ಸವದತ್ತಿ(ಜ.06):  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಒಳಿತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಉತ್ತರ ಕರ್ನಾಟಕದ ಜನರ ಪ್ರಮುಖ ಬೇಡಿಕೆ ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡುವ ಜೊತೆಗೆ ಏತ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಅಭಿನಂದನಾರ್ಹ ವಿಷಯ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಬಿಜೆಪಿ ರೈತ ಮೋರ್ಚಾ ಆಶ್ರಯದಲ್ಲಿ ಕಳಸಾ ಬಂಡೂರಿ ಮತ್ತು ಏತ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸುಮಾರು 44 ವರ್ಷಗಳ ನಿರಂತರ ಹೋರಾಟದ ನಂತರ ಜಾರಿಗೊಂಡ ಈ ಯೋಜನೆಗೆ ಕಾಂಗ್ರೆಸ್‌ನವರು ಸ್ಪಂದಿ​ಸುವುದನ್ನು ಬಿಟ್ಟು ಅನಾವಶ್ಯಕ ಆರೋಪ ಮಾಡುತ್ತಿರುವುದು ವಿಷಾದದ ಸಂಗತಿ. ರೈತಪರವಾಗಿರುವ ಯೋಜನೆಗಳು ಜಾರಿ ಆಗುತ್ತಿರುವದನ್ನು ಸಹಿಸಲಾಗದೇ ವಿರೋಧ ಪಕ್ಷದವರು ಮಾಡುತ್ತಿರುವ ಆರೋಪಗಳಿಂದ ರೈತರನ್ನು ಅವಮಾನಿಸಿದಂತಾಗುತ್ತಿದೆ ಎಂದರು.
ಕಳಸಾ ಬಂಡೂರಿ ಯೋಜನೆಗೆ .1ಸಾವಿರ ಕೋಟಿ ತೆಗೆದಿರಿಸಲಾಗಿದ್ದು, ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ. ದಿ.ಆನಂದ ಮಾಮನಿಯವರ ಕನಸಿನ ಸತ್ತಿಗೇರಿ ಏತ ನೀರಾವರಿ ಯೋಜನೆಗೆ .546 ಕೋಟಿ ವೆಚ್ಚದಲ್ಲಿ ಚಾಲನೆ ನೀಡುತ್ತಿದ್ದು, ಶಾಸಕರ ಕನಸನ್ನು ಸರ್ಕಾರ ಈಡೇರಿಸುವ ಪ್ರಯತ್ನ ಮಾಡಿದೆ ಎಂದರು.

Karnataka Politics: ಬೆಂಕಿ ಹಚ್ಚೋ ಕೆಲಸದಿಂದ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್‌: ಕಡಾಡಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಸ್ತೆ ಅಭಿವೃದ್ಧಿ ಜೊತೆ ಮಹತ್ತರವಾಗಿರುವ ರೈಲ್ವೆ ಯೋಜನೆಗಳನ್ನು ಜಾರಿಗೆ ತಂದಿದ್ದು, ಧಾರವಾಡ ಕಿತ್ತೂರ ಮಾರ್ಗವಾಗಿ ಬೆಳಗಾವಿಗೆ .987 ಕೋಟಿ ವೆಚ್ಚದಲ್ಲಿ ರೈಲುಮಾರ್ಗ ಯೊಜನೆಯನ್ನು ರೂಪಿಸಲಾಗಿದೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತ ಕಾರ್ಯವನ್ನು ಕಾರ್ಯಕರ್ತರು ನಿಷ್ಠೆಯಿಂದ ಮಾಡಬೇಕು ಎಂದರು.

Follow Us:
Download App:
  • android
  • ios