Asianet Suvarna News Asianet Suvarna News

'ಹಳೆ ಮೈಸೂರು ಭಾಗವೀಗ ಬಿಜೆಪಿ ಪ್ರಾಬಲ್ಯಕ್ಕೆ : ಆಶಯ ಈಡೇರಿದೆ'

  •  ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಗೊಳ್ಳುತ್ತಿರುವುದನ್ನು ಸಾಬೀತು
  • ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ
BJP step by step win old mysore region says nalin kateel snr
Author
Bengaluru, First Published Aug 26, 2021, 12:54 PM IST

ಮಂಡ್ಯ (ಆ.26): ಮೈಸೂರು ಮಹಾನಗರ ಪಾಲಿಕೆ ಬಿಜೆಪಿ ವಶವಾಗಿರುವುದು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಗೊಳ್ಳುತ್ತಿರುವುದನ್ನು ಸಾಬೀತುಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು. 

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಬಿಜೆಪಿ ಪಕ್ಷದ ಸುನಂದಾ ಪಾಲನೇತ್ರ ಅವರು ಮೈಸೂರು ಮೇಯರ್ ಆಗಿ ಆಯ್ಕೆಯಾಗಿರುವುದು ಖುಷಿ ವಿಚಾರ.

ಮೊಟ್ಟ ಮೊದಲ ಬಾರಿಗೆ ಕಮಲಕ್ಕೊಲಿದ ಮೈಸೂರು ಮೇಯರ್ ಪಟ್ಟ : BJP ತಂತ್ರಗಾರಿಕೆಗೆ ಸಕ್ಸಸ್

ಹಾಸನ  ಮೈಸೂರು, ಮಂಡ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂಬ ಆಶಯ ಇತ್ತು. ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ನಾರಾಯಣಗೌಡರ ಗೆಲುವಿನೊಂದಿಗೆ ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆಯಿತು. ಇನ್ನು ಮೈಸೂರು ಮೇಯರ್ ಸ್ಥಾನ ದೊರಕಿತು. ಹಂತ ಹಂತವಾಗಿ ಹಳೇ ಮೈಸೂರು ಭಾಗದಲ್ಲಿ ಬೆಳವಣಿಗೆ ಕಾಣುತ್ತಿರುವುದು ಆಶಾದಾಯಕ ಎಂದರು. 

ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇದೆ. ರಾಷ್ಟ್ರೀಯ ನಾಯಕರನ್ನು ಅಯ್ಕೆ ಮಾಡಿಕೊಳ್ಳಲಾಗುತ್ತಿಲ್ಲ. ರಾಜ್ಯದೊಳಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿಲ್ಲ. ಸಿಎಂ ಸ್ಥಾನಕ್ಕೆ ಜಗಳ ಶುರುವಾಗಿದೆ. ಕಾಂಗ್ರೆಸ್ ನಾಯಕರನ್ನು ಬೌದ್ದಿಕ ದಿವಾಳಿತನ ಕಾಡುತ್ತಿದೆ ಎಂದು ಹೇಳಿದರು.  

Follow Us:
Download App:
  • android
  • ios