ಬೀದರ್(ಫೆ.19): ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ ಸರಣಿ ಕೊಲೆಗಳು ನಡೆದಿದ್ದವು. ಅವರು ಇವತ್ತು ವೇದಾಂತ‌, ಸಿದ್ಧಾಂತವನ್ನೆಲ್ಲ ಮಾತಾಡುತ್ತಾರೆ. ಅವರ ಸರ್ಕಾರದ ಸಂದರ್ಭದಲ್ಲಿ ಹೇಗಿತ್ತು ಪರಿಸ್ಥಿತಿ ‌ಯೋಚನೆ ಮಾಡಲಿ. 24 ಜನ ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದರೂ ಮೌನವಾಗಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಹೇಳಿದ್ದಾರೆ. 

ಬುಧವಾರ ನಗರದಲ್ಲಿ ಮಾಧ್ಯಮವರ ಜೊತೆ ಮಾತನಾಡಿದ ಅವರು,  ಇವರದ್ದೇ ಪಂಚಾಯತ್ ಅಧ್ಯಕ್ಷನ ಮರ್ಡರ್ ಆಯ್ತು, ಸಲ್ಯೂನ್‌ನಲ್ಲಿ ಡಬಲ್ ಮರ್ಡರ್, ಶ್ರಂಗೇರಿಯಲ್ಲಿ ಎನ್ಕೌಂಟರ್, ಡಿವೈಎಸ್ಪಿ ಆತ್ಮಹತ್ಯೆ, ಡಿಕೆ ರವಿ ಆತ್ಮಹತ್ಯೆ, 4 ನೂರು ಜನ ರೈತರ ಆತ್ಮಹತ್ಯೆಯಾಗಿದೆ. ಇವರ ಕಾಲಘಟದಲ್ಲಿ ಹೇಗಿತ್ತು, ನಮ್ಮ ಕಾಲಘಟದಲ್ಲಿ ಹಾಗಿಲ್ಲ. ನಾವು ಕಾನೂನು ಶಿಸ್ತಿಗೆ ಬದ್ಧರಾಗಿದ್ದವರು, ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಧ್ಯಂತರ ಚುನಾವಣೆ ಬಗ್ಗೆ ದೇವೇಗೌಡರ ಹೇಳಿಕೆ‌ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರು ಪಾರ್ಟಿ ತುಂಡಾಗುತ್ತೇ, ಶಾಸಕರು ಹೊರಗಡೆ ಹೋಗುತ್ತಾರೆಂದು ಯಾವಾಗಲು ಇಂತಹ ಹೇಳಿಕೆ ಕೊಡುತ್ತಿರುತ್ತಾರೆ. ಅವರು ಹಾಗೆ ಹೇಳಿದಾರೆ ಅಂದ್ರೆ ಶಾಸಕರು ಹೊರಗೆ ಕಾಲಿಟ್ಟಿದಾರೆ ಅಂತ ಅರ್ಥ ಎಂದು ತಿಳಿಸಿದ್ದಾರೆ. ಬಿಜೆಪಿ ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ, ಶಾಸಕರ ಸಭೆ ಕರೆದಿದ್ದೇವೆ ಎಲ್ಲರ ಜೊತೆ ಮಾತುಕತೆ ನಡೆದಿದೆ ಯಾವುದೇ ಅಸಮಾಧಾನವೂ ಇಲ್ಲ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಓಟ್‌ ಬ್ಯಾಂಕ್ ಗೋಸ್ಕರ ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ದೇಶದಲ್ಲಿ ಪೂರ್ವದ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ. ಪೂರ್ವದ ಕಾಂಗ್ರೆಸ್ ರಾಷ್ಟ್ರದ ಸ್ವತಂತ್ರ್ಯ ಸಲುವಾಗಿ ಹೋರಾಟ‌ ಮಾಡಿತ್ತು. ಇವತ್ತಿನ ಕಾಂಗ್ರೆಸ್ ಭೌತಿಕ ರಾಜಕಾರಣ ಗೋಸ್ಕರ ರಾಷ್ಟ್ರ ವಿರೋಧಿಗಳಿಗೆ ಪ್ರೇರಣೆ‌ ಕೊಡುತ್ತಿದೆ. ಪಾಕ್ ಜೈ ಅಂದವರಿಗೆ ಸಹಕಾರ ಕೊಡುತ್ತಿದೆ. ಮೋದಿಗೆ ವಿರೋಧಿಸಬೇಕೆಂಬ ವಿಚಾರಕ್ಕೆ ಪಾಕ್ ಜೊತೆಗೆ ಕೈಜೋಡಿಸುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.