Asianet Suvarna News Asianet Suvarna News

ಯುವಕರಿಂದ ಮೋದಿ ಆರಾಧನೆ: ನಳಿನ್‌ ಕುಮಾರ್‌ ಕಟೀಲ್‌

* ನವಭಾರತ ಮೇಳದ ಸಮಾರೋಪ ಸಮಾರಂಭ ಬಿಜೆಪಿ ರಾಜ್ಯಾಧ್ಯಕ್ಷ ಬಣ್ಣನೆ
* ಈ ದೇಶದ ಐಕಾನ್‌ ಆಗಿ ಹೊರಹೊಮ್ಮಿದ ನರೇಂದ್ರ ಮೋದಿ
* ಬಡತನ, ಹಸಿವು, ರೋಗ ಮತ್ತು ನಿರುದ್ಯೋಗ ದೇಶದ ಜನರಿಗೆ ಕೊಡುಗೆಯಾಗಿ ನೀಡಿದ ಕಾಂಗ್ರೆಸ್‌
 

BJP State President Nalin Kumar Kateel Talks Over PM Narendra Modi grg
Author
Bengaluru, First Published Oct 11, 2021, 8:03 AM IST
  • Facebook
  • Twitter
  • Whatsapp

ಬೆಂಗಳೂರು(ಅ.11):  ದೇಶದಲ್ಲಿ 2014ರವರೆಗೆ ಯುವಕರು ಸ್ವಾಮಿ ವಿವೇಕಾನಂದರನ್ನು(Swami Vivekananda) ಪೂಜಿಸಿ ಆರಾಧಿಸಿದರು. ಆದರೆ, 2014ರ ಬಳಿಕ ಯುವಕರು(Youths) ನರೇಂದ್ರ ಮೋದಿಯವರನ್ನು ಆರಾಧಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌(Nalin Kumar Kateel) ಹೇಳಿದ್ದಾರೆ.

ನಗರದ(Bengaluru) ಬಿಟಿಎಂ ಲೇಔಟ್‌ನಲ್ಲಿ ಬಿಜೆಪಿ(BJP) ಯುವ ಮೋರ್ಚಾ ವತಿಯಿಂದ ಸಂಘಟಿಸಿದ ಅತಿ ದೊಡ್ಡ ನವಭಾರತ ಮೇಳದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನರೇಂದ್ರ ಮೋದಿ(Narendra Modi) ಈ ದೇಶದ ಐಕಾನ್‌ ಆಗಿ ಹೊರಹೊಮ್ಮಿದ್ದಾರೆ ಎಂದರು.

ವಿವೇಕಾನಂದರು ಜಗದಾದ್ಯಂತ ಭಾರತದ(India) ಕನಸನ್ನು ಕಂಡರು. ಅದನ್ನು ಸಾಕಾರಗೊಳಿಸಲು ಯೋಜನೆಗಳನ್ನು ಮಾಡಿದರು. ಸ್ವದೇಶಿ ಚಿಂತನೆಗಳಿಂದ ದೇಶ ಮುನ್ನಡೆಯಬೇಕು. ಗುಲಾಮಗಿರಿಯಿಂದ ಮುಕ್ತವಾಗಬೇಕು ಎಂಬ ಆಶಯ ಅವರದಾಗಿತ್ತು. ಸ್ವಾತಂತ್ರ್ಯಾನಂತರದ 75 ವರ್ಷಗಳಲ್ಲಿ 65 ವರ್ಷ ಕಾಂಗ್ರೆಸ್‌(congress0 ದೇಶದ ಆಡಳಿತ ನಡೆಸಿತು. ಕಾಂಗ್ರೆಸ್‌ ಬಡತನ, ಹಸಿವು, ರೋಗ ಮತ್ತು ನಿರುದ್ಯೋಗವನ್ನು ದೇಶದ ಜನರಿಗೆ ಕೊಡುಗೆಯಾಗಿ ನೀಡಿತು ಎಂದು ಟೀಕಿಸಿದರು.

ಎರಡೂ ಉಪಚುನಾವಣೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು

ಯಾವ ದೇಶಗಳು ಭಾರತವನ್ನು ಭಿಕ್ಷುಕರ ರಾಷ್ಟ್ರ, ರೋಗಗ್ರಸ್ತ ದೇಶ, ನಿರುದ್ಯೋಗಿಗಳ ದೇಶ ಎಂದು ಹೀನಾಯವಾಗಿ ಕಂಡು ಕರೆಯುತ್ತಿದ್ದವೋ ಅಂಥ ದೇಶಗಳು ಕೋವಿಡ್‌(Covid19) ಬಂದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಡೆ ನೋಡಿ ಲಸಿಕೆ(Vaccine) ಕಳುಹಿಸಿ ಕೊಡಲು ವಿನಂತಿಸಿದವು ಎಂದರು.

ನರೇಂದ್ರ ಮೋದಿ ಅವರು ಕೇವಲ ರಾಮಮಂದಿರಕ್ಕೆ(RamMandir) ಶಿಲಾನ್ಯಾಸ ಮಾಡಿಲ್ಲ. ಜಗತಾದ್ಯಂತ ಭಾರತಕ್ಕೂ ಶಿಲಾನ್ಯಾಸ ಮಾಡಿದ್ದಾರೆ. ಅತಿ ಹೆಚ್ಚು ಪ್ರೀತಿಯ ನಾಯಕ ನರೇಂದ್ರ ಮೋದಿ ಮತ್ತು ಅತ್ಯಂತ ಪ್ರೀತಿಯ ದೇಶ ಭಾರತ ಎಂದು ಅಮೆರಿಕದ(America) ಅಧ್ಯಕ್ಷರೂ ತಿಳಿಸುವಂತಾಗಿದೆ ಎಂದು ವಿವರಿಸಿದರು.

ತೋಟಗಾರಿಕಾ ಸಚಿವ ಮುನಿರತ್ನ, ರಾಜ್ಯ ಬಿಜೆಪಿ ಯುವ ಮೋರ್ಚಾ ಕೋಶಾಧ್ಯಕ್ಷ ಹಾಗೂ ನವಭಾರತ ಮೇಳದ ರಾಜ್ಯ ಸಂಚಾಲಕರಾದ ಅನಿಲ್‌ ಶೆಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
 

Follow Us:
Download App:
  • android
  • ios