ಪಂಪ್‌ವೆಲ್ ಫ್ಲೈಓವರ್ ವಿರುದ್ಧ ‘ಒಂಭತ್ತು ಕೆರೆ’ ಅಸ್ತ್ರ ಪ್ರಯೋಗ!
ಇತ್ತೀಚೆಗೆ ಕಾಂಗ್ರೆಸ್ ಅಣಕು ಉದ್ಘಾಟನೆಯ ಮೂಲಕ ಬಿಜೆಪಿಗರಿಗೆ ಟಾಂಗ್ ಕೊಟ್ಟಿತ್ತು. ಇದೀಗ ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿರುವ ಬಿಜೆಪಿ ಪಡೆ ಮಂಗಳೂರು ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಒಂಭತ್ತುಕೆರೆ ಆಶ್ರಯ ಮನೆ ಯೋಜನೆಯನ್ನು ಮುನ್ನೆಲೆಗೆ ತಂದು ಕಾಂಗ್ರೆಸ್ ವಿರುದ್ಧ ಸೋಷಿಯಲ್ ವಾರ್ ಆರಂಭಿಸಿದೆ.
ಮಂಗಳೂರು(ಜ.08): ರಾಜ್ಯಾದ್ಯಂತ ಸಾಕಷ್ಟುಚರ್ಚೆಗೆ ಗ್ರಾಸವಾಗಿದ್ದ ಮಂಗಳೂರಿನ ಪಂಪ್‌ವೆಲ್ ಫ್ಲೈ ಓವರ್ ಕಾಮಗಾರಿ ನಿಧಾನಗತಿಯಲ್ಲಿದ್ದು, ಸಾಮಾಜಿಕ ತಾಣಗಳಲ್ಲಿ ಮಾತ್ರ ಈ ವಿಚಾರ ಪ್ರತಿ ನಿತ್ಯವೂ ಚರ್ಚೆಯ ವಿಷಯವಾಗಿದೆ.
ಇತ್ತೀಚೆಗೆ ಕಾಂಗ್ರೆಸ್ ಅಣಕು ಉದ್ಘಾಟನೆಯ ಮೂಲಕ ಬಿಜೆಪಿಗರಿಗೆ ಟಾಂಗ್ ಕೊಟ್ಟಿತ್ತು. ಇದೀಗ ಕಾಂಗ್ರೆಸ್‌ಗೆ ಸೆಡ್ಡು ಹೊಡೆದಿರುವ ಬಿಜೆಪಿ ಪಡೆ ಮಂಗಳೂರು ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಒಂಭತ್ತುಕೆರೆ ಆಶ್ರಯ ಮನೆ ಯೋಜನೆಯನ್ನು ಮುನ್ನೆಲೆಗೆ ತಂದು ಕಾಂಗ್ರೆಸ್ ವಿರುದ್ಧ ಸೋಷಿಯಲ್ ವಾರ್ ಆರಂಭಿಸಿದೆ.
ಬಂದ್ ವಿಫಲಗೊಳಿಸಿದ್ದಕೆ ಥ್ಯಾಂಕ್ಸ್ ಹೇಳಿದ ಸಚಿವ ಕೋಟ
ಮಂಗಳೂರು ಶಾಸಕ ಯು.ಟಿ.ಖಾದರ್ ಮತ್ತು ನೆನೆಗುದಿಗೆ ಬಿದ್ದಿರುವ ಆಶ್ರಯ ಮನೆ ಯೋಜನೆಯನ್ನು ಸಾಮಾಜಿಕ ತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಐವನ್ ಡಿಸೋಜ ಅವರು ತಾಕತ್ತಿದ್ದರೆ ಈ ಆಶ್ರಯ ಮನೆಗಳನ್ನು ಉದ್ಘಾಟನೆ ಮಾಡಲಿ ಎಂದು ಸಾಮಾಜಿಕ ತಾಣಗಳಲ್ಲಿ ಸಾಲು ಸಾಲು ಸಂದೇಶಗಳು ಹರಿದಾಡುತ್ತಿವೆ.
ಸುಮಾರು 18 ವರ್ಷಗಳ ಹಿಂದೆ ಆರಂಭವಾದ ಈ ಯೋಜನೆ ಸದ್ಯ ನೆನೆಗುದಿಗೆ ಬಿದ್ದಿದ್ದು, 390 ಮನೆಗಳ ನಿರ್ಮಾಣವಾಗಿದ್ದರೂ ಫಲಾನುಭವಿಗಳನ್ನು ತಲುಪಿಲ್ಲ. ಈ ಆಶ್ರಯ ಯೋಜನೆಯನ್ನು ಐತಿಹಾಸಿಕ ಸ್ಮಾರಕ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ಮಧ್ಯೆ ಕಳೆದ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಉಳ್ಳಾಲದ ಒಳಚರಂಡಿ ಯೋಜನೆಯು ಚರ್ಚೆಗೆ ಬಂದಿದೆ.
ಏನಿದು ಆಶ್ರಯ ಮನೆ ಯೋಜನೆ?
ಮಂಗಳೂರಿನ ಉಳ್ಳಾಲದ ಒಂಬತ್ತು ಕೆರೆ ಗ್ರಾಮದಲ್ಲಿ 1999ರಲ್ಲಿ ಯು.ಟಿ.ಖಾದರ್ ಅವರ ತಂದೆ ಯು.ಟಿ.ಫರೀದ್ ಶಾಸಕರಾಗಿದ್ದ ಅವಧಿಯಲ್ಲಿ ಆಶ್ರಯ ಮನೆ ಯೋಜನೆ ಜಾರಿಗೆ ಬಂದಿತ್ತು. ಅವತ್ತು 90 ಲಕ್ಷ ರು. ಮೌಲ್ಯದಲ್ಲಿ 10 ಎಕರೆ ಜಾಗವನ್ನು ಪಡೆದು ಕಾಮಗಾರಿ ಆರಂಭಿಸಿ 2001ರಲ್ಲಿ 390 ಮನೆಗಳ ನಿರ್ಮಾಣ ಮಾಡಲಾಗಿತ್ತು. ಆಗಿನ ಕಾಲಕ್ಕೆ ಕೆಲ ಫಲಾನುಭವಿಗಳು ಐದು ಸಾವಿರದಂತೆ ಹಣ ಪಾವತಿಸಿ ಆ ಮನೆಗಳನ್ನು ಬುಕ್ಕಿಂಗ್ ಕೂಡ ಮಾಡಿಸಿದ್ದರು. ಆದರೆ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಆ ಮನೆಗಳು ಫಲಾನುಭವಿಗಳನ್ನು ತಲುಪಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಅವತ್ತಿನಿಂದ ಅಕ್ಷರಶಃ ಮನೆಗಳು ಪಾಳು ಬಿದ್ದಿವೆ.
2007 ರಿಂದ ನಿರಂತರವಾಗಿ 12 ವರ್ಷ ಯು.ಟಿ.ಖಾದರ್ ಇಲ್ಲಿನ ಶಾಸಕರಾಗಿದ್ದರೂ ಇಲ್ಲಿಯವರೆಗೂ ಆ ಮನೆಗಳಿಗೆ ಮುಕ್ತಿ ತೋರಿಸೋದಕ್ಕೆ ಅವರಿಂದಲೂ ಸಾಧ್ಯವಾಗಿಲ್ಲ. ಹೀಗಾಗಿ 390 ಮನೆಗಳಿರುವ ಹತ್ತು ಎಕರೆ ಜಾಗದಲ್ಲಿ ದಟ್ಟಕಾಡುಗಳು ಬೆಳೆದ ಪರಿಣಾಮ ಜನ ವಾಸಕ್ಕೆ ಅಯೋಗ್ಯ ಅನ್ನಿಸುವ ಪರಿಸ್ಥಿತಿ ಇದೆ.