ತುಮಕೂರು (ಅ.11):  ಬಿಜೆಪಿಯಿಂದ ರಾಜೇಶ್‌ಗೌಡರಿಗೆ ಟಿಕೆಟ್‌ ಬಹುತೇಕ ಅಂತಿಮವಾಗಿರುವ ಹಿನ್ನೆಲೆಯಲ್ಲಿ ತೀವ್ರವಾಗಿ ಅಸಮಾಧಾನಗೊಂಡು ಪಕ್ಷದ ಚಟುವಟಿಕೆಯಿಂದ ದೂರವಿದ್ದ ಎಸ್‌.ಆರ್‌. ಗೌಡ ಹಾಗೂ ಬಿ.ಕೆ. ಮಂಜುನಾಥ್‌ ಅವರು ರಾಜೇಶ್‌ಗೌಡರ ಜೊತೆ ವೇದಿಕೆ ಹಂಚಿಕೊಂಡು ಒಗ್ಗಟ್ಟು ಪ್ರದರ್ಶಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶಗೌಡರು ಸಂಧಾನ ನಡೆಸಿದ ಹಿನ್ನೆಲೆಯಲ್ಲಿ ರಾಜೇಶಗೌಡರ ಜೊತೆ ಬಿ.ಕೆ. ಮಂಜುನಾಥ್‌ ಹಾಗೂ ಎಸ್‌.ಆರ್‌. ಗೌಡ ಪರಸ್ಪರ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ್ದರು.

'ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ' ..

ಕಳೆದ ಒಂದು ವಾರದಿಂದ ಈ ಇಬ್ಬರು ನಾಯಕರು ಅಸಮಾಧಾನಗೊಂಡಿದ್ದರು. ಈಗ ಅಸಮಾಧಾನ ಮರೆತು ಎಲ್ಲರೂ ಒಗ್ಗಟ್ಟಾಗಿ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದರಿಂದ ಕಾರ್ಯಕರ್ತರಲ್ಲಿ ಹರ್ಷ ಮನೆ ಮಾಡಿದೆ.

ನವೆಂಬರ್ ಮೂರರಂದು ರಾಜ್ಯದ ಎರಡು ಕ್ಷೇತ್ರಗಳಿಗೆ ಉಪ ಚುನಾವನೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ತಮ್ಮದೇ ಆದ ಸಿದ್ಧತೆಯಲ್ಲಿ ತೊಡಗಿವೆ. ಗೆಲುವಿನ ಭರಸವೆಯಲ್ಲಿ ಮುಂದುವರಿಯುತ್ತಿದೆ.