ಟಿ. ನರಸೀಪುರ (ಮಾ.13):  ಕಾರ್ಯಕರ್ತರು ಮತ್ತು ಪಕ್ಷಕ್ಕೆ ದುಡಿಯುತ್ತಿರುವವರ ಚುನಾವಣೆಯಾಗಿರುವ ಜಿಪಂ ಹಾಗೂ ತಾಪಂ ಚುನಾವಣೆಯನ್ನು ಕಾರ್ಯಕರ್ತರು ಹಾಗೂ ಮುಖಂಡರ ಪರಿಶ್ರಮದೊಂದಿಗೆ ಬಿಜೆಪಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಸಿದ್ದತೆ ನಡೆಸಿದೆ ಎಂದು ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷ ಎನ್‌.ವಿ. ಫಣೀಶ್‌ ಹೇಳಿದರು.

ಮೈಸೂರು ಪೇಯಿಂಟ್ಸ್‌ ಮತ್ತು ವಾರ್ನಿಷ್‌ ಲಿ.ನ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಕಾರ್ಯಕರ್ತರ ಮನವಿಯ ಮೇರೆಗೆ ಮೊದಲ ಬಾರಿಗೆ ಪಟ್ಟಣಕ್ಕೆ ಭೇಟಿ ನೀಡಿ ಕಬಿನಿ ಅತಿಥಿಗೃಹದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

'ಬಿಎಸ್‌ವೈ ಮುಕ್ತ ಬಿಜೆಪಿ ಸಿದ್ಧತೆ ಜೋರಾಗಿದೆ' ...

ಜಿಪಂ ಮತ್ತು ತಾಪಂ ಚುನಾವಣೆಗಳು ಸಮೀಪದಲ್ಲಿವೆ. ಈ ಚುನಾವಣೆ ಕಾರ್ಯಕರ್ತರು ಮತ್ತು ಪಕ್ಷಕ್ಕೆ ದುಡಿದವರಿಗಾಗಿಯೇ ಎಂದು ತಿಳಿಯಲಾಗಿದ್ದು, ಅವರ ಪರಿಶ್ರಮಕ್ಕೆ ಪ್ರತಿಫಲ ದೊರಕಿಸಿಕೊಡುವುದಾಗಿದೆ. ಜಿಪಂ ಮತ್ತು ತಾಪಂ ಆಡಳಿತವನ್ನು ಬಿಜೆಪಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ರಾಜ್ಯಾದ್ಯಂತ ಸಿದ್ದತೆ ನಡೆಸಿದೆ ಎಂದರು.

ಕ್ಷೇತ್ರ ಬಿಜೆಪಿ ಅಧ್ಯಕ್ಷ ಕೆ.ಸಿ. ಲೋಕೇಶ್‌ ನಾಯಕ್‌, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಮಹದೇವಯ್ಯ, ಎಸ್ಸಿ ಮೋರ್ಚಾ ಅಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಕಿಟ್ಟಿ, ಯುವ ಮೋರ್ಚಾ ಅಧ್ಯಕ್ಷ ಶಿವಶಂಕರ್‌, ಜಿಲ್ಲಾ ಕಾರ್ಯದರ್ಶಿ ಬಸವರಾಜು, ತೋಟದಪ್ಪ ಬಸವರಾಜು, ಎನ್‌. ಲೋಕೇಶ್‌, ಪುರಸಭಾ ಸದಸ್ಯ ಎಸ್‌.ಕೆ. ಕಿರಣ್, ಮಣಿಕಂಠ ರಾಜು, ನಾಗರಾಜು, ವಾಸು, ನಂಜುಂಡಸ್ವಾಮಿ, ಓಬಿಸಿ ಅಧ್ಯಕ್ಷ ಮಹೇಶ್‌ ಇದ್ದರು.