Asianet Suvarna News Asianet Suvarna News

ನನ್ನ ಪೋನ್ ಕದ್ದಾಲಿಸಿದ್ರೂ ಸಮಸ್ಯೆ ಇಲ್ಲ: ಸಂಸದೆ ಶೋಭಾ ಕರಂದ್ಲಾಜೆ!

ಫೋನ್ ಕದ್ದಾಲಿಕೆ ಪ್ರಕರಣ, ಸಂಸದೆ ಶೋಭಾ ಪ್ರತಿಕ್ರಿಯೆ| ನನ್ನ ಪೋನ್  ಕದ್ದಾಲಿಸಿದ್ರೂ ಸಮಸ್ಯೆ ಇಲ್ಲ| ಸಂಸದೆಯಾಗಿ ಹ್ಯಾಪಿಯಾಗಿದ್ದೇನೆ:

BJP MP Shobha Karandlaje Speaks On Phone Tapping
Author
Bangalore, First Published Aug 20, 2019, 4:57 PM IST
  • Facebook
  • Twitter
  • Whatsapp

ಉಡುಪಿ(ಆ.20): ಫೋನ್ ಕದ್ದಾಲಿಕೆ ಯಾರೇ ಮಾಡಿದ್ರೂ ತಪ್ಪು. ತನಿಖೆಯಿಂದ ಎಲ್ಲಾ ಸತ್ಯಾಂಶ ಹೊರಬರಲಿದೆ. ತಪ್ಪು ಮಾಡಿಲ್ಲ ಅಂದ್ರೆ ಯಾರಿಗಾದ್ರು ಅಪರಾಧ ಭಾವನೆ ಯಾಕೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

ಫೋನ್ ಕದ್ದಾಲಿಕೆ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಏನೂ ಮಾಡಿಲ್ಲಾಂದ್ರೆ ಖುಷಿಯಾಗಿರಲಿ. ಸಿದ್ದರಾಮಯ್ಯ ಅವರಿಗೆ ಕದ್ದಾಲಿಕೆ ಬಗ್ಗೆ ತನಿಖೆ ಆಗಬೇಕೆಂಬ ಅಪೇಕ್ಷೆ ಇತ್ತು. ಯಾರು ಹೇಗೆ ತನಿಖೆ ಮಾಡುತ್ತಾರೆ ಎಂಬುದು ಶೀಘ್ರ ಗೊತ್ತಾಗಲಿದೆ. ಯಾರೂ ತಪ್ಪು ಮಾಡಿಲ್ಲ ಎಂದಾಗಿದ್ದರೆ ಇಡೀ ರಾಜ್ಯವೇ ಖುಷಿಪಡುತ್ತದೆ ಎಂದರು.

ನನ್ನ ಪೋನ್  ಕದ್ದಾಲಿಸಿದ್ರೂ ಸಮಸ್ಯೆ ಇಲ್ಲ:

ಸಿಎಂ ಪುತ್ರ ವಿಜಯೇಂದ್ರ ವರ್ಗಾವಣೆ ದಂಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೇನೂ ಗೊತ್ತೇ ಇಲ್ಲ. ನಾನು ನನ್ನದೇ ಕೆಲಸದಲ್ಲಿದ್ದೇನೆ. ನೆರೆ ಪ್ರವಾಸ, ಪಾರ್ಲಿಮೆಂಟ್ ಓಡಾಟದಲ್ಲಿದ್ದೆ. ಇದ್ಯಾವುದ ಬಗ್ಗೆಯೂ ನಾನು ತಲೆ ಕೆಡಿಸಿಕೊಂಡಿಲ್ಲ. ನನ್ನ ಫೋನ್ ಕದ್ದಾಲಿಕೆ ಆದ್ರೆ ಸಮಸ್ಯೆಯಿಲ್ಲ. ಸಮಾಜ ದ್ರೋಹ, ದೇಶ ದ್ರೋಹದ ಕೆಲಸ ಮಾಡಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಪಟ್ಟಿಯನ್ನು ಸಿಎಂ ಹೈಕಮಾಂಡಿಗೆ ಕೊಟ್ಟಿದ್ದಾರೆ. ಯಾರು ಸಚಿವರಾಗ್ತಾರೆ, ಆಗಲ್ಲ ಅನ್ನೋ ನಿರ್ಧಾರ ಸಿಎಂ- ಹೈಕಮಾಂಡ್ ಮಾಡುತ್ತೆ. ಪ್ರಮಾಣವಚನದೊಳಗೆ ಪಟ್ಟಿ ಬರಲಿದೆ ಎಂದಿದ್ದಾರೆ.

ಸಂಸದೆಯಾಗಿ ಹ್ಯಾಪಿಯಾಗಿದ್ದೇನೆ:

ನೆರೆ ಪರಿಹಾರ ಅಧ್ಯಯನ ತಂಡ ಯಾವಾಗ ಬೇಕಾದ್ರು ಬರಬಹುದು. ಗೃಹ ಸಚಿವರು, ಹಣಕಾಸು ಸಚಿವರು ಬಂದು ಹೋಗಿದ್ದಾರೆ ನಾನು ರಾಜ್ಯ ರಾಜಕಾರಣ ಮಿಸ್ ಮಾಡಿಕೊಳ್ಳುತ್ತಿಲ್ಲ.ನಾನು ಸಂಸದೆಯಾಗಿ ಹ್ಯಾಪಿಯಾಗಿದ್ದೇನೆ ಎಂದಿದ್ದಾರೆ.

Follow Us:
Download App:
  • android
  • ios