ಮೈಸೂರು (ಫೆ.23):  ಮೈಸೂರು ಮಹಾನಗರ ಪಾಲಿಕೆಯ ಮೇಯರ್‌, ಉಪ ಮೇಯರ್‌ ಚುನಾವಣೆಯಲ್ಲಿ ನಮ್ಮೊಂದಿಗೆ ಜೆಡಿಎಸ್‌ನವರು ಬಂದರೆ ಖುಷಿ. ಇಲ್ಲ ಅಂದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಸಿದ್ಧ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಸರ್ಕಾರಗಳು ಇವೆ. ಮೈಸೂರು ಮಹಾನಗರ ಪಾಲಿಕೆಗೆ ಏನು ಕೆಲಸ ಆಗಬೇಕೋ ಅದನ್ನ ಮಾಡಿಸಿಕೊಳ್ಳುತ್ತೇವೆ ಎಂದರು.

ಬಿಜೆಪಿಗರು ಬಂದು ನನ್ನ ಬಳಿ ಮಾತಾಡಿದ್ದಾರೆ ಎಂದ ಸಾರಾ : ಅನುಕಂಪ ತೋರಿ ಎಂದ ಸಚಿವ ...

ಈ ಹಿಂದೆ ಪಾಲಿಕೆ ಮತ್ತು ಜಿಪಂನಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿ ಅನುಭವ ಚೆನ್ನಾಗಿತ್ತು. ಕಳೆದೆರೆಡು ವರ್ಷದಿಂದ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿಯಲ್ಲಿ ಏನಾಗ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇದನ್ನ ಅರ್ಥಮಾಡಿಕೊಂಡು ಜೆಡಿಎಸ್‌ನವರು ಬಿಜೆಪಿಗೆ ಬರಲಿ ಎಂದು ಮೈತ್ರಿಗೆ ಆಹ್ವಾನಿಸಿದ ಅವರು, ಸಚಿವ ಎಸ್‌.ಟಿ. ಸೋಮಶೇಖರ್‌ ನೇತೃತ್ವದಲ್ಲಿ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಹೇಳಿದರು.