ಕಾಂಗ್ರೆಸ್ ಮುಖಂಡರೋರ್ವರ ವಿರುದ್ಧ ಪ್ರತಾಪ್ ಸಿಂಹ ಹರಿಹಾಯ್ದಿದ್ದಾರೆ. ಪರಸ್ಪರ ಆರೋಪ ಪ್ರತ್ಯಾರೊಪಗಳು ಹೆಚ್ಚಾಗಿವೆ. 

ಮೈಸೂರು (ಸೆ.03):  ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಅವರ ವಿರುದ್ಧ ಸಂಸದ ಪ್ರತಾಪಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಎಂ. ಲಕ್ಷ್ಮಣ್‌ ಆರೋಪ ಉಗುಳು ಎಂದು ಲೇವಡಿ ಮಾಡಿದ್ದಾರೆ. ಆರೋಪ ಮಾಡಿದರೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಇರಬೇಕು. ಇಲ್ಲದಿದ್ದರೆ ಉಗುಳು ಅಷ್ಟೇ, ಅಂತಹ ಉಗುಳಿಗೆ ನಾನು ಉತ್ತರ ಕೊಡುವುದಿಲ್ಲ. ಎಂದರು.

ಎಚ್‌ಡಿಕೆ ಆರೋಪ ಆಧಾರರಹಿತ ಡ್ರಗ್ಸ್‌ ಹಣದಿಂದಲೇ ಮೈತ್ರಿ ಸರ್ಕಾರ ಬಿದ್ದಿದೆ ಎಂಬ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಆರೋಪವೂ ಆಧಾರ ರಹಿತ ಎಂದು ಪ್ರತಾಪ್‌ ಸಿಂಹ ತಿರುಗೇಟು ನೀಡಿದರು.

ಬಿಟ್ಟು ಬಂದ ಪಕ್ಷದ ಪ್ರಭಾವ ಇನ್ನೂ ಇದೆ : ಬಿಜೆಪಿ ಮುಖಂಡನ ವಿರುದ್ಧ ಸಿಂಹ ಕಿಡಿ ...

ದೇಶದಲ್ಲಿ ಡ್ರಗ್ಸ್‌ ದಂಧೆ ಎಂಬುದು ಭಯೋತ್ಪಾದನೆಯ ಒಂದು ಭಾಗ. ಒಂದು ದೇಶವನ್ನು ಹಾಳು ಮಾಡಬೇಕಾದರೆ ಬಾಂಬ್‌ ಬೇಕಾಗಿಲ್ಲ. ಆ ದೇಶದ ಯುವಕರನ್ನು ಮಾದಕ ವ್ಯಸನಿಗಳನ್ನಾಗಿ ಮಾಡಿದರೆ ಸಾಕು. ಅವರ ಇಡೀ ಕುಟುಂಬ ಸರ್ವನಾಶವಾಗುತ್ತದೆ. ಈ ದಂಧೆ ಕೇವಲ ಸ್ಯಾಂಡಲ್‌ವುಡ್‌, ಬಾಲಿವುಡ್‌ಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ಕಡೆ ಡ್ರಗ್ಸ್‌ ಮತ್ತು ಗಾಂಜಾ ಗಿಸುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಘಟನೆಯನ್ನು ಒಂದು ಪಾಠವಾಗಿ ಭಾವಿಸಿ ಇದರ ಮೂಲವ್ನು ಕಿತ್ತೊಗೆಯಬೇಕು. ಯಾ ದೇಶದ ಯಾವ ಫ್ಲೇಡರ್‌ ಇದ್ದಾರೆ ಎಂಬುದನ್ನು ಪತ್ತೆಹಚ್ಚಿ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

'SDPI ಮೇಲೆ ನಿಷೇಧ ಹೇರಬೇಕು ಎಂದಾಗ ಸಿದ್ದರಾಮಯ್ಯನವರಿಗೆ ಏಕೆ ನೋವಾಗುತ್ತದೆ'?

 ಡ್ರಗ್ಸ್ ಬಗ್ಗೆ ಮಾಹಿತಿ ಇರುವವರು ಮಾಹಿತಿ ಕೊಡಿ. ಎಲ್ಲಾ ಕಡೆಯೂ ಏಕಕಾಲಕ್ಕೆ ದಾಳಿ ನಡೆಯಲಿ. ಈಗಾಗಲೇ ಗೃಹಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲೆ ಇಡೀ ಪ್ರಕರಣದ ಬಗ್ಗೆ ತನಿಖೆಯಾಗಿ ಸತ್ಯ ಹೊರಬರಲಿ ಎಂದು ಒತ್ತಾಯಿಸಿದರು.