Asianet Suvarna News Asianet Suvarna News

ನಾಡದ್ರೋಹಿ ಎಂಇಎಸ್‌ನಿಂದ ರೋಸಿ ಹೋದ ಬೆಳಗಾವಿ ಜನತೆ: ಈರಣ್ಣ ಕಡಾಡಿ

*  ಛತ್ರಪತಿ ಶಿವಾಜಿ ಮಹಾರಾಜರ ಆಲೋಚನೆಯೇ ಬಿಜೆಪಿಯ ಅಜೆಂಡಾ 
*  ನಿಜವಾದ ಭಾರತೀಯನಿಗೆ ಯಾವುದೇ ಜಾತಿಯೂ ಇಲ್ಲ 
*  ಬಿಜೆಪಿ ಅಧಿಕಾರ ಬಂದ್ಮೇಲೆ ದೇಶ, ರಾಜ್ಯದಲ್ಲಿ ಬದಲಾವಣೆ ಆಗಿದೆ 
 

BJP MP Iranna Kadadi Slams MES grg
Author
Bengaluru, First Published Aug 29, 2021, 3:23 PM IST

ಬೆಳಗಾವಿ(ಆ.29): ನಾಡದ್ರೋಹಿ ಎಂಇಎಸ್ ಭಾಷೆ, ಜಾತಿ ಆಧಾರದಲ್ಲಿ ಮತಯಾಚನೆ ವಿಚಾರದಿಂದ ಬೆಳಗಾವಿ ಜನ ರೋಸಿ ಹೋಗಿದ್ದಾರೆ. ನಾವು ಅಭಿವೃದ್ಧಿಪರ ಮತ ಕೇಳಬೇಕಾಗುತ್ತದೆ. ಭಾಷೆ, ಜಾತಿ ವಿಚಾರ ಬಿಟ್ಟು ಅಭಿವೃದ್ಧಿ ಪರ ಮತ ಮಾಡಲು ಮನವಿ ಮಾಡುತ್ತೇನೆ ಅಂತ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಕೇವಲ ಜಾತಿ ಭಾಷೆಯ ವಿಷಬೀಜ ಬಿತ್ತಿ ಅಧಿಕಾರ ಹಿಡಿಯುವ ತಂತ್ರ ಪ್ರಾರಂಭವಾಗಿದೆ. ನಗರದ ಮರಾಠಿ ಜನರಿಗೆ ವಿನಂತಿ ಮಾಡ್ತೇನೆ. ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ಎಂ ಪ್ಲಸ್ ಎಂ ಫಾರ್ಮುಲಾ ವಿಚಾರವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಹಿಂದ್ವಿ ಸ್ವರಾಜ್‌ ಸ್ಥಾಪನೆಗೆ ಹೋರಾಟ ಮಾಡಿದ್ದರು. ಛತ್ರಪತಿ ಶಿವಾಜಿ ವಂಶಸ್ಥರು ಎಂಐಎಂಗೆ ಅವಕಾಶ ಕೊಡಲ್ಲ ಎಂಬ ವಿಶ್ವಾಸವಿದೆ. ಇವತ್ತು ಬಿಜೆಪಿ ಅಧಿಕಾರ ಬಂದ್ಮೇಲೆ ದೇಶ, ರಾಜ್ಯದಲ್ಲಿ ಬದಲಾವಣೆ ಆಗಿದೆ. ಆ ರೀತಿ ಬದಲಾವಣೆ ಬೆಳಗಾವಿ ನಗರಕ್ಕೂ ತರುವ ಕಲ್ಪನೆ ಇದೆ ಅಂತ ತಿಳಿಸಿದ್ದಾರೆ. 

ಬೆಳಗಾವಿ ಜನ ಎಂಇಎಸ್‌ನಿಂದ ರೋಸಿ ಹೋಗಿದ್ದು ಅಭಿವೃದ್ಧಿ ಪರ ಮತ ಕೊಡುತ್ತಾರೆ. ಕೇವಲ ಜನರ ಭಾವನೆ ಕೆರಳಿಸಿ ಚುನಾವಣೆ ಮಾಡಕೋ ಆಗಲ್ಲ.  ಹೀಗಾಗಿ ಜನ ಬೇಸತ್ತು ಹೋಗಿದ್ದು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕಲಿಸುತ್ತಾರೆ ಅಂತ ಹೇಳಿದ್ದಾರೆ. 

ಬೆಳಗಾವಿ: ಕನ್ನಡ ನೆಲದಲ್ಲಿ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್‌ ಪುಂಡರು

ಭಾಷೆ, ಜಾತಿ ಆಧಾರ ಮೇಲೆ ಎಂಇಎಸ್ ಮತಯಾಚನೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಈರಣ್ಣ ಕಡಾಡಿ, ಇದರ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡುತ್ತೇನೆ. ಪೊಲೀಸ್ ವ್ಯವಸ್ಥೆ, ಚುನಾವಣಾ ಆಯೋಗ ಸ್ವಯಂಪ್ರೇರಿತವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

ಛತ್ರಪತಿ ಶಿವಾಜಿ ಮಹಾರಾಜರ ಆಲೋಚನೆಯೇ ಬಿಜೆಪಿಯ ಅಜೆಂಡಾ 

ಛತ್ರಪತಿ ಶಿವಾಜಿ ಮಹಾರಾಜರ ಆಲೋಚನೆಯೇ ಬಿಜೆಪಿಯ ಅಜೆಂಡಾ ಆಗಿದೆ. ರಾಷ್ಟ್ರ ಮೊದಲು ಆನಂತರದಲ್ಲಿ ಪಕ್ಷ ಮತ್ತು ರಾಜ್ಯ ಆಮೇಲೆ, ರಾಷ್ಟ್ರಕ್ಕಾಗಿ ನಾವು ಎಂತಹ ಪರಿಸ್ಥಿತಿಯಲ್ಲೂ ಕಟಿಬದ್ಧರಾಗಿ ನಿಲ್ಲುತ್ತೇವೆ. ಅದಕ್ಕೆ ನಮ್ಮ ಪ್ರೇರಣೆಯೇ ಛತ್ರಪತಿ ಶಿವಾಜಿ ಮಹಾರಾಜರು. ಕೆಲವೊಬ್ಬರು ಪುಂಡಾಟಿಕೆಯಿಂದ ಹೇಳುವ ಹೇಳಿಕೆಗಳಿಗೆ ಯಾವುದೇ ಬೆಲೆ ಇಲ್ಲ. ನಿಜವಾದ ಭಾರತೀಯನಿಗೆ ಯಾವುದೇ ಜಾತಿಯೂ ಇಲ್ಲ ಅಂತ ಕುಡಚಿ ಬಿಜೆಪಿ ಶಾಸಕ ಪಿ.ರಾಜೀವ್ ಹೇಳಿದ್ದಾರೆ. 

ಮರಾಠಿಗರು, ಲಿಂಗಾಯತರು, ಕುರುಬರು, ಜೈನರು, ದೇಶಿಯತೆ ಒಪ್ಪಿಕೊಂಡ ಮುಸ್ಲಿಂ ಬಾಂಧವರು ಬಿಜೆಪಿ ಧ್ವಜವನ್ನ ಮಹಾನಗರ ಪಾಲಿಕೆ ಮೇಲೆ ಹಾರಿಸಬೇಕು ಅಂದುಕೊಂಡಿದ್ದಾರೆ. ಐವತ್ತು ವರ್ಷಗಳಿಂದ ನಮ್ಮನ್ನ ಭ್ರಮೆಯಲ್ಲಿಟ್ಟಿದ್ರು ಅದನ್ನ ಕಿತ್ತೊಗೆಯಬೇಕೆಂದು ತೀರ್ಮಾನ ಮಾಡಿದ್ದಾರೆ ಅಂತ ತಿಳಿಸಿದ್ದಾರೆ. 
 

Follow Us:
Download App:
  • android
  • ios