Asianet Suvarna News Asianet Suvarna News

ಮೋದಿ ಆಡಳಿತದ ಕಾಲದಲ್ಲಿ ನಾವು ಇರುವುದೇ ಸೌಭಾಗ್ಯ: ಬೊಮ್ಮಾಯಿ

ಯಾವುದೇ ವ್ಯಕ್ತಿ ಒಂದು ತೀರ್ಮಾನ ಮಾಡಲು ಎರಡು ಬಾರಿ ಮಾಡುತ್ತಾರೆ. ಮೊದಲು ತೀರ್ಮಾನ ಮಾಡಬೇಕೆಂದು ಮಾಡುತ್ತಾರೆ. ಮತ್ತೊಂದು ವಾಸ್ತವವಾಗಿ ಮಾಡುತ್ತಾರೆ. ಮೋದಿ ಅವರು ಮಾನವೀಯಗುಣ ಹಾಗೂ ಸೂಕ್ಷ್ಮ ಮನಸಿನವರಾಗಿದ್ದಾರೆ ಎಂದು ಶ್ಲಾಘಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬೊಮ್ಮಾಯಿ 
 

BJP MP Basavaraj Bommai Talks Over PM Narendra Modi grg
Author
First Published Oct 9, 2024, 5:30 AM IST | Last Updated Oct 9, 2024, 5:30 AM IST

ಬೆಂಗಳೂರು(ಅ.09):  ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಪೂರ್ವ-ಪಶ್ಚಿಮದ ತತ್ವಜ್ಞಾನದ ಸಂಗಮವಾಗಿದೆ. ಮೋದಿ ಆಡಳಿತದ ಕಾಲದಲ್ಲಿ ನಾವೆಲ್ಲಾ ಇರುವುದು ನಮ್ಮ ಸೌಭಾಗ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬೊಮ್ಮಾಯಿ ಹೇಳಿದ್ದಾರೆ. 

ಬಸವರಾಜ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಠ ಏರ್ಪಡಿಸಿದ್ದ ಕೇಂದ್ರದ ಮಾನವ ಸಂಪನ್ಮೂಲ ಸಾಮರ್ಥ್ಯ ನಿರ್ಮಾಣ ಆಯೋಗದ ಸದಸ್ಯ ಆರ್.ಬಾಲಸುಬ್ರಹ್ಮಣ್ಯಂ ಅವರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಕುರಿತು ಬರೆದಿರುವ 'ಪವರ್ ವಿಥಿನ್' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ವ್ಯಕ್ತಿಯ ಮನದಾಳದಲ್ಲಿ ಅವರ ಬಗ್ಗೆ ವಿಶೇಷ ಭಾವನೆ ಇಟ್ಟುಕೊಳ್ಳಲೇಬೇಕು ಎಂದರು. 

ರಾಜೀನಾಮೆಗೆ ಸಿದ್ದರಾಮಯ್ಯ ಸಿದ್ಧತೆ: ಸಂಸದ ಬಸವರಾಜ ಬೊಮ್ಮಾಯಿ

ಯಾವುದೇ ವ್ಯಕ್ತಿ ಒಂದು ತೀರ್ಮಾನ ಮಾಡಲು ಎರಡು ಬಾರಿ ಮಾಡುತ್ತಾರೆ. ಮೊದಲು ತೀರ್ಮಾನ ಮಾಡಬೇಕೆಂದು ಮಾಡುತ್ತಾರೆ. ಮತ್ತೊಂದು ವಾಸ್ತವವಾಗಿ ಮಾಡುತ್ತಾರೆ. ಮೋದಿ ಅವರು ಮಾನವೀಯಗುಣ ಹಾಗೂ ಸೂಕ್ಷ್ಮ ಮನಸಿನವರಾಗಿದ್ದಾರೆ ಎಂದು ಶ್ಲಾಘಿಸಿದರು.

ಪ್ರಧಾನಿಯವರು ಈ ದೇಶ ಸೇವೆ ಮಾಡಲು ದೇವರೇ ನನ್ನನ್ನು ಕಳುಹಿಸಿದ್ದಾನೆ ಎಂದು ಹೇಳಿದ್ದನ್ನು ವಿರೋಧ ಪಕ್ಷದವರು ಲೇವಡಿ ಮಾಡಿದರು. ಆದರೆ, ಮೋದಿಯವರು ತಮ್ಮ ಜೀವನದ ಉದ್ದೇಶ ಅರ್ಥ ಮಾಡಿಕೊಂಡಿದ್ದಾರೆ. ಮೋದಿಯವರು ಬಹಳ ಗಂಭೀರವಾಗಿ ಇರುತ್ತಾರೆ ಎನ್ನುತ್ತಾರೆ. ಆದರೆ, ಅವರನ್ನು ಹತ್ತಿರದಿಂದ ನೋಡಿದವರಿಗೆ ಅವರು ಬಹಳ ತಮಾಷೆಯಾಗಿ ಇರುತ್ತಾರೆ. ಅವರ ಜೀವನ ಪ್ರಯಾಣ ಬಹಳ ಅದ್ಭುತವಾಗಿದೆ ಎಂದು ಹೇಳಿದರು. ಲೇಖಕ ಆರ್. ಬಾಲಸುಬ್ರಹ್ಮಣ್ಯಂ, ರಾಜ್ಯ ಬಿಜೆಪಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ದತ್ತಾತ್ರೇಯ, ಜಿ.ಎಸ್.ಪ್ರಶಾಂತ್ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios