ಕಾಂಗ್ರೆಸ್‌ನ ಯಾವುದೇ ಭಾಗ್ಯದ ಬಗ್ಗೆ ಬೇಸರವಿಲ್ಲ: ಸಂಸದ ಬಿ.ವೈ.ರಾಘವೇಂದ್ರ

ಕಾಂಗ್ರೆಸ್‌ನ ಯಾವುದೇ ಭಾಗ್ಯದ ಬಗ್ಗೆ ಬೇಸರವಿಲ್ಲ, ಜನರಿಗೆ ಅವೆಲ್ಲವೂ ತಲುಪಬೇಕು. ಆದರೆ, ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕೊಡುವಂತದ್ದು ಸರಿ ಅಲ್ಲ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಭದ್ರಾವತಿಯಲ್ಲಿ ಹೇಳಿದ್ದಾರೆ.

BJP MP B. Y. Raghavendra mocking about congress guarantees kannada news gow


ಶಿವಮೊಗ್ಗ (ಜೂ.16): ರಾಜ್ಯದ ಕಾಂಗ್ರೆಸ್‌ ಸರಕಾರ ಗ್ಯಾರಂಟಿ ನೆಪದಲ್ಲಿ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕಿತ್ತುಕೊಳ್ಳುವ ಕಾರ್ಯವನ್ನು ಮಾಡುತ್ತಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಭದ್ರಾವತಿಯಲ್ಲಿ ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ 9 ವರ್ಷ ತುಂಬಿದ ಸಂದರ್ಭದಲ್ಲಿ ಭದ್ರಾವತಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 

ಕಾಂಗ್ರೆಸ್‌ನ ಯಾವುದೇ ಭಾಗ್ಯದ ಬಗ್ಗೆ ಬೇಸರವಿಲ್ಲ, ಜನರಿಗೆ ಅವೆಲ್ಲವೂ ತಲುಪಬೇಕು. ಆದರೆ, ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕೊಡುವಂತದ್ದು ಸರಿ ಅಲ್ಲ. ವಿದ್ಯುತ್‌ ಯುನಿಟ್‌ ದರವನ್ನು ಹೆಚ್ಚಳ ಮಾಡಿರುವುದಲ್ಲದೇ, 200ರ ಬದಲು 201 ಯುನಿಟ್‌ ಬಳಕೆ ಮಾಡಿದರೂ ಪೂರ್ಣ ದರವನ್ನು ಕಟ್ಟಿಸಿಕೊಂಡು ಸಬ್ಸಿಡಿಯನ್ನು ಕಿತ್ತುಕೊಳ್ಳುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಆಪಾದಿಸಿದರು. ಈ ನಿಟ್ಟಿನಲ್ಲಿ ಕೆಇಬಿ ಕಚೇರಿಗಳಿಗೆ ಮುತ್ತಿಗೆ ಹಾಕುವ ಕೆಲಸವನ್ನು ಬಿಜೆಪಿ ಆರಂಭ ಮಾಡಿದೆ ಎಂದರು. 

ಪಕ್ಷದ ಕಾರ್ಯಕರ್ತರ ನೇತೃತ್ದಲ್ಲಿ ಸಂಪರ್ಕ್‌ ಸೆ ಸಮರ್ಥನ್‌ ಕಾರ್ಯಕ್ರಮದಡಿ ಕಾರ್ಯಕರ್ತರು, ಸಂಘಟನೆಯ ಹಿತೈಷಿಗಳನ್ನು, ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡುವಂತಹ ವಿಶೇಷ ಕಾರ್ಯಕ್ರಮ ಇಡೀ ದೇಶಾದ್ಯಂತ ಈಗಾಗಲೇ ಹಮ್ಮಿಕೊಳ್ಳಲಾಗಿದೆ. ಈ ಮುಖಾಂತರ ಕೇಂದ್ರ ಸರಕಾರದ ಸಾಧನೆಗಳನ್ನು ಚರ್ಚೆ ಮಾಡಿ ಜನಸಾಮಾನ್ಯರಿಗೆ ಮುಟ್ಟಿಸುವಂತಹ ಕಾರ್ಯವನ್ನು ಮಾಡಲಾಗುತ್ತಿದೆ. ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಪ್ರದೇಶಗಳಲ್ಲಿ ಭೇಟಿ ನೀಡಿ, ಅಪೂರ್ಣಗೊಂಡ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರೈಸುವ ನಿಟ್ಟಿನಲ್ಲಿ ಹಾಗೂ ಚುನಾಯಿತ ಪ್ರತಿನಿಧೀಗಳ ನೇತೃತ್ವದಲ್ಲಿ ವಿಕಾಸ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ 6 ಕಂಡೀಷನ್ ಹಾಕಿ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ

ಭದ್ರಾವತಿಯ ಬುಳ್ಳಾಪುರ ಗ್ರಾಮದಲ್ಲಿ 50.29 ಎಕರೆ ಪ್ರದೇಶದಲ್ಲಿ ರಾಪಿಡ್‌ ಆಕ್ಷನ್‌ ಫೋರ್ಸ್‌ ಸ್ಥಾಪನೆಗೆ  ಕೇಂದ್ರ ಗೃಹ ಮಂತ್ರಿಗಳಾದ ಸನ್ಮಾನ್ಯ ಶ್ರೀ ಅಮಿತ್‌ ಷಾ ಅವರು ಈಗಾಗಲೇ ಭೂಮಿ ಪೂಜೆ ನೆರವೇರಿಸಿದ್ದಾರೆ. ಈ ರಾಪಿಡ್‌ ಅಕ್ಷನ್‌ ಫೋರ್ಸ್‌ ಕರ್ನಾಟಕದ 31 ಜಿಲ್ಲೆಗಳನ್ನೊಳಗೊಂಡಿದ್ದಷ್ಟೇ ಅಲ್ಲದೇ, ಕೇರಳದ 4 ಜಿಲ್ಲೆಗಳು, ಗೋವಾದ 2 ಜಿಲ್ಲೆಗಳು, ಲಕ್ಷದ್ವೀಪದ 1 ಜಿಲ್ಲೆ ಹಾಗೂ ಪುದುಚೆರಿಯ 1 ಜಿಲ್ಲೆಗಳ ವ್ಯಾಪ್ತಿಯನ್ನು ಸಹ ಒಳಗೊಂಡಿರುತ್ತದೆ. ಕಮಾಂಡೆಂಟ್‌, ಡೆಪ್ಯುಟಿ ಕಮಾಂಡೆಂಟ್‌ ಸೇರಿದಂತೆ ಒಟ್ಟು 445 ಜನ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.

2009ಕ್ಕೂ ಮೊದಲು ಕೇವಲ 8-10 ಟ್ರೇನುಗಳು ಮಾತ್ರ ಓಡಾಟ ಇತ್ತು. ಇದೀಗ 28 ಟ್ರೇನುಗಳ ಟ್ರಿಪ್‌ ಓಡಾಟ ಆರಂಭವಾಗಿದೆ. ಎರಡು ರೈಲ್ವೆ ಓವರ್‌ ಬ್ರಿಡ್‌್ಜ ನಿರ್ಮಾಣವಾಗಿದ್ದು ಭದ್ರಾವತಿ ಪಟ್ಟಣದ ತರೀಕೆರೆ ರಸ್ತೆಯಲ್ಲಿ, ಶಿವಮೊಗ್ಗ-ಹೊನ್ನಾಳಿ ರಸ್ತೆಯಲ್ಲಿ ಸೇರಿ ಇನ್ನೂ ನಾಲ್ಕು ರೈಲ್ವೆ ಓವರ್‌ ಬ್ರಿಡ್‌್ಜ ನಿರ್ಮಾಣ ಮಾಡಲಾಗಿದೆ.

ರಾ.ಹೆ.206 ತುಮಕೂರಿನಿಂದ ಶಿವಮೊಗ್ಗವರೆಗಿನ 214.45 ಕಿ.ಮೀ ಉದ್ದದ 4 ಪಥದ ರಸ್ತೆಯ ನಿರ್ಮಾಣ ರೂ. 7162 ಕೋಟಿ, ರಾ.ಹೆ. 13 ಚಿತ್ರದುರ್ಗ ಶಿವಮೊಗ್ಗ ರಸ್ತೆಯ ಬಾಕಿ ಉಳಿದ ಉಮಗಾರಿಗಳು 5169 ಕೋಟಿ ರೂ.ಕಾಮಗಾರಿ ಪ್ರಾರಂಭಗೊಂಡು ಶೇ 10ರಷ್ಟು ಕೆಲಸ ಮುಗಿದಿದ್ದು ಹೊಳೆಹೊನ್ನೂರಿನ ಬೈಪಾಸ್‌ ರಸ್ತೆ ಮತ್ತು ಭದ್ರಾನದಿಗೆ ಸೇತುವೆ ಸೇರಿದಂತೆ ಕೈಮರದಿಂದ ಶಿವಮೊಗ್ಗವರೆಗಿನ ರಸ್ತೆ ಕೆಲಸ ಪ್ರಗತಿಯಲ್ಲಿವೆ. ರಾಷ್ಟ್ರೀಯ ಹೆದ್ದಾರಿ 206 ತುಮಕೂರು- ಶಿವಮೊಗ್ಗ ರಸ್ತೆ, ತುಮಕೂರಿನಿಂದ ಶಿವಮೊಗ್ಗ ವರೆಗಿನ ಹೆದ್ದಾರಿಯ 4 ಪಥದ ರಸ್ತೆ ನಿರ್ಮಾಣದ ಕೆಲಸ ಪ್ರಗತಿಯಲ್ಲಿದ್ದು, ಶಿವಮೊಗ್ಗಲೋಕಸಭಾ ಕ್ಷೇತ್ರದ ಶಿವಮೊಗ್ಗದಿಂದ ತಾಳಗುಪ್ಪ ಚೂರಿಕಟ್ಟೆ ಜಂಕ್ಷನ್‌ ವರೆಗೆ ಸುಮಾರು 80 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲು ಈ ಕೆಳಗಿನಂತೆ ಡಿ.ಪಿ.ಆರ್‌ ತಯಾರಿಸಲಾಗುತ್ತಿರುತ್ತದೆ.

ಭದ್ರಾವತಿ ವಿ.ಐ.ಎಸ್‌.ಎಲ್‌. ಕಾರ್ಖಾನೆಯನ್ನು ಬಂಡವಾಳ ಹೂಡಿಕೆ ಪಟ್ಟಿಯಿಂದ ಹಿಂಪಡೆದಿದ್ದನ್ನು ರದ್ದುಪಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕಿದ್ದರ ಪರಿಣಾಮ ಕೇಂದ್ರ ಸರ್ಕಾರ ವಾಪಸು ಪಡೆದಿದೆ.  ಕೆಲವು ಸಣ್ಣಪುಟ್ಟ ಯುನಿಟ್‌ಗಳನ್ನು ಫೋರ್ಜ್‌ ಯುನಿಟ್‌ಗಳನ್ನು ಪ್ರಾರಂಭಿಸಲಾಗಿದ್ದು, ಉತ್ತಮ ಆದಾಯ ಬರುವಂತಾಗಿದೆ ಎಂದರು.

ಫ್ರೀ ಬಸ್ಸಲ್ಲಿ ಪ್ರಿಯಕರನಿಗಾಗಿ ಹುಬ್ಬಳ್ಳಿಯಿಂದ ಕರಾವಳಿಗೆ ಓಡೋಡಿ ಬಂದ ವಿವಾಹಿತೆ!

ಸಂಸತ್‌ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಡಿ ಒಟ್ಟಾರೆ 37 ಕೋಟಿ ವೆಚ್ಚದಲ್ಲಿ ಅಂದಾಜು 1000ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮ. ( ಪ್ರಯಾಣಿಕರ ತಂಗುದಾಣ, ಹೈಮಾಸ್ಟ್  ಲೈಟ್ಸ್ ಸಮುದಾಯಭವನಗಳು, ರಸ್ತೆ, ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕಗಳು, ಸ್ಮಶಾನ ಅಭಿವೃದ್ಧಿ, ಪಾರ್ಕ್‌ ಅಭಿವೃದ್ಧಿ, ರೈತ ಸಹಕಾರಿ ಸಂಘಗಳ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳು, ಭದ್ರಾವತಿಯಲ್ಲಿ 2 ಡಿಸ್ಪೆನ್ಸರಿಗಳನ್ನು ಪ್ರಾರಂಭಿಸಲಾಗಿದೆ, ಮತ್ತಿತರೆ ಅಭಿವೃದ್ಧಿ ಕಾರ್ಯ ). ಹೀಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದರು. 

ಈಗ ರಾಜ್ಯದಲ್ಲಿ ಬಿಜೆಪಿಗೆ ಹಿನ್ನಡೆ ಆಗಿರುವುದು ತಾತ್ಕಾಲಿಕ ಮಾತ್ರ. ಈ ಸಂದರ್ಭ ಕಾಂಗ್ರೆಸ್‌ ಸರಕಾರ ಮಾಡುತ್ತಿರುವ ಘೋಷಣೆಗಳು  ಹಾಗೂ ತೆಗೆದುಕೊಳ್ಳುವಂತಹ ನಿಲುವುಗಳು ಎಲ್ಲ ವೂ ಅಚ್ಚರಿಯಾಗಿದೆ. ದೇಶದ ಹಿತ ದೃಷ್ಟಿಯಿಂದ ಮಹಾನ್‌ ನಾಯಕ ಸಾವರ್ಕರ್‌ ಅವರ ಇತಿಹಾಸ ಪುಟದಿಂದ ಮುಚ್ಚಿಡುವಂತಹ ಕೆಲಸವನ್ನು ಕಾಂಗ್ರೆಸ್‌ ಮಾಡಿತ್ತು. ಅದನ್ನು ಸೇರಿಸುವಂತಹ ಕೆಲಸವನ್ನು ಬಿಜೆಪಿ ಸರಕಾರ ಮಾಡಿದಾಗ , ಈಗ ಕಾಂಗ್ರೆಸ್‌ ಸರಕಾರ ತೆಗೆಯುವ ಕೆಲಸವನ್ನು ಮಾಡುತ್ತಿದೆ. ಇದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಥವಾ ಬಿಜೆಪಿಯ ಸಿದ್ಧಾಂತಗಳಿಲ್ಲ, ಇವರು ಬ್ರಿಟೀಷರ ವಿರುದ್ಧ ಗುಂಡಿಗೆ ಎದೆಗೊಟ್ಟು ದೇಶದ ರಕ್ಷಣೆಗೋಷ್ಕರ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮಹಾನ್‌ ನಾಯಕರ ಪಾಠವನ್ನು ತೆಗೆದು ಹಾಕುವ ಕೆಲಸ ನಿಜಕ್ಕೂ ಖಂಡನೀಯ, ಅಲ್ಲದೇ ಗೋ ಹತ್ಯೆಯನ್ನು ನಿಷೇಧ ಕಾಯಿದೆ ರದ್ದಗೊಳಿಸುವ ಕುರಿತು ಪಶು ಸಂಗೋಪನಾ ಸಚಿವರು ಹೇಳಿರುವುದು ದೌರ್ಭಾಗ್ಯ. ಕಾಂಗ್ರೆಸ್‌ ಹೀಗೆ ದ್ವೇಷದ ಕಾರಣವನ್ನು ಮಾಡಿದರೆ ಮತ್ತೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂತರೆ ಅನುಮಾನ ಇಲ್ಲ  ಎಂದರು. 

ರಾಜ್ಯದ ಎಲ್ಲ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ಬಸ್‌ ಸಂಚಾರವನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು. ಭದ್ರಾವತಿ ಕ್ಷೇತ್ರ ಬಿಜೆಪಿ ಉಸ್ತುವಾರಿ ಅಶೋಕ್‌ ಮೂರ್ತಿ, ಜಿಲ್ಲಾ ಬಿಜೆಪಿ ಮುಖಂಡರಾದ ಡಾ.ಧನಂಜಯ ಸರ್ಜಿ, ಮಂಗೋಟೆ ರುದ್ರೇಶ್‌, ಧರ್ಮಪ್ರಸಾದ್‌, ಪ್ರಧಾನ ಕಾರ್ಯದರ್ಶೀ ಶ್ರೀನಾಥ್‌, ಕೂಡ್ಲಿಗೆರೆ ಹಾಲೇಶ್‌ ಮತ್ತಿತರರು ಹಾಜರಿದ್ದರು.

Latest Videos
Follow Us:
Download App:
  • android
  • ios