Asianet Suvarna News Asianet Suvarna News

ಟ್ರ್ಯಾಕ್ಟರ್‌ ಪಲ್ಟಿ: ಗಾಯಗೊಂಡ ವಿದ್ಯಾರ್ಥಿಗಳಿಗೆ ಬಿಜೆಪಿ ಎಂಎಲ್‌ಸಿ ಸಂಕನೂರು ಧೈರ್ಯ

ಟ್ರ್ಯಾಕ್ಟರ್‌ನಲ್ಲಿ ಪಿಕ್ನಿಕ್‌ಗೆ ಹೋಗಿ ಮರಳುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 52ಕ್ಕೂ ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಅದರಲ್ಲಿ ಕಾವ್ಯಾ ಬ್ಯಾಡಗಿ ಮೃತಪಟ್ಟಿರುವ ಸಂಗತಿ ಆಘಾತವನ್ನು ಉಂಟು ಮಾಡಿದೆ ಎಂದ ಎಸ್‌.ವಿ. ಸಂಕನೂರ 

BJP MLC Sankanur Met Who injured Students in Accident in Hubballi grg
Author
First Published Jan 9, 2023, 2:00 AM IST

ಹುಬ್ಬಳ್ಳಿ(ಜ.09):  ಟ್ರ್ಯಾಕ್ಟರ್‌ ಪಲ್ಟಿಯಾಗಿ ಗಾಯಗೊಂಡು ಇಲ್ಲಿನ ಕಿಮ್ಸ್‌ಗೆ ದಾಖಲಾಗಿದ್ದ ಮುಂಡಗೋಡ ತಾಲೂಕಿನ ಮಳಗಿ ಗ್ರಾಮದ ಮೂವರು ವಿದ್ಯಾರ್ಥಿಗಳ ಆರೋಗ್ಯವನ್ನು ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ವಿಚಾರಿಸಿ, ಪಾಲಕರಿಗೆ ಧೈರ್ಯ ಹೇಳಿದರು.

ಬಳಿಕ ಮಾತನಾಡಿದ ಅವರು, ಟ್ರ್ಯಾಕ್ಟರ್‌ನಲ್ಲಿ ಪಿಕ್ನಿಕ್‌ಗೆ ಹೋಗಿ ಮರಳುವಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 52ಕ್ಕೂ ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಅದರಲ್ಲಿ ಕಾವ್ಯಾ ಬ್ಯಾಡಗಿ ಮೃತಪಟ್ಟಿರುವ ಸಂಗತಿ ಆಘಾತವನ್ನು ಉಂಟು ಮಾಡಿದೆ ಎಂದರು.

DHARWAD: ನಿಮಗೆ‌ ಸರಿಯಾಗಿ ರೇಶನ್‌ ಸಿಗ್ತಿಲ್ಲವೆ, ನೇರವಾಗಿ ಈ‌ ಕೆಳಗಿನ ಪೋನ್‌ ನಂಬರ್‌ಗೆ‌ ಕರೆ ಮಾಡಿ ದೂರು ಸಲ್ಲಿಸಿ

ಗಂಭೀರವಾಗಿ ಗಾಯಗೊಂಡಿರುವ ಮೂವರು ವಿದ್ಯಾರ್ಥಿನಿಯರ ಜೀವಕ್ಕೆ ಯಾವುದೇ ಅಪಾಯವಿಲ್ಲವೆಂದು ವೈದ್ಯರು ಭರವಸೆ ನೀಡಿದ್ದಾರೆ. 4 ರಿಂದ 5 ದಿನಗಳಲ್ಲಿ ಗುಣಮುಖರಾಗಲಿದ್ದಾರೆಂದು ಮಾಹಿತಿ ನೀಡಿದ್ದಾರೆ. ಈ ಕುರಿತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕೂಡ ವಿದ್ಯಾರ್ಥಿಗಳಿಗೆ ಸರಿಯಾದ ಚಿಕಿತ್ಸೆ ನೀಡುವ ಮೂಲಕ ಕಾಳಜಿ ವಹಿಸಲು ವೈದ್ಯರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ ಎಂದು ಸಂಕನೂರ ಹೇಳಿದರು.

ಈ ವೇಳೆ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಸಿ., ಕಾರ್ಯನಿರ್ವಾಹಕ ಪ್ರಾಂಶುಪಾಲ ಡಾ. ಈಶ್ವರ ಹೊಸಮನಿ, ನರರೋಗ ತಜ್ಞ ಡಾ. ಅಮೃತ ಹಾಗೂ ಸಿಬ್ಬಂದಿ ಇದ್ದರು. ರಾಜೇಶ್ವರಿ ವೀರಾಪೂರ, ಯಶೋದಾ ಹೆಬ್ಬಾಳಪ್ಪ, ಅಶ್ವಿನಿ ಫಕೀರಪ್ಪರನ್ನು ಕಿಮ್ಸ್‌ಗೆ ದಾಖಲಿಸಿರುವ ವಿದ್ಯಾರ್ಥಿಗಳು.

Follow Us:
Download App:
  • android
  • ios