Asianet Suvarna News Asianet Suvarna News

ಹಿಜಾಬ್ ಅವಕಾಶ ನೀಡುವ ಸರ್ಕಾರ, ಕಾಲುಂಗುರ, ತಾಳಿ ತೆಗೆಸಿದ್ಯಾಕೆ?: ಹೇಮಲತಾ ನಾಯಕ

ಕಲಬುರಗಿಯಲ್ಲಿ ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ಅಭ್ಯರ್ಥಿಗಳು ಧರಿಸಿದ್ದ ಕಾಲುಂಗುರ ಮತ್ತು ಮಾಂಗಲ್ಯ ತೆಗೆಸಿದ್ದಾರೆ. ಇದು ಅಕ್ಷಮ್ಯ, ಅಂಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಬೇಕು ಎಂದು ಆಗ್ರಹಿಸಿದ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ 

BJP MLC Hemalatha Naik Slams Karnataka Congress Government grg
Author
First Published Nov 11, 2023, 6:45 AM IST

ಕೊಪ್ಪಳ(ನ.11): ಕೆಪಿಎಸ್ಸಿ ಪರೀಕ್ಷೆ ವೇಳೆ ಹಿಜಾಬ್‌ಗೆ ಅವಕಾಶ ನೀಡಿರುವ ಅಧಿಕಾರಿಗಳು ಮಾಂಗಲ್ಯ ಮತ್ತು ಕಾಲುಂಗುರ ತೆಗೆಸುವ ಮೂಲಕ ಮಹಿಳೆಯರಿಗೆ ಅಪಮಾನ ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕಲಬುರಗಿಯಲ್ಲಿ ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ಅಭ್ಯರ್ಥಿಗಳು ಧರಿಸಿದ್ದ ಕಾಲುಂಗುರ ಮತ್ತು ಮಾಂಗಲ್ಯ ತೆಗೆಸಿದ್ದಾರೆ. ಇದು ಅಕ್ಷಮ್ಯ, ಅಂಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್, ಬಿಜೆಪಿಯಿಂದ ಅನೇಕ ಶಾಸಕರು ಕಾಂಗ್ರೆಸ್ಸಿಗೆ: ಸಚಿವ ತಿಮ್ಮಾಪುರ

ಪತಿ ತೀರಿಕೊಂಡಾಗ ಮಹಿಳೆ ಮಾಂಗಲ್ಯ ತೆಗೆಯುತ್ತಾಳೆ. ಇನ್ನು ಆಪರೇಶನ್‌ ಥಿಯೇಟರ್‌ಗೆ ಹೋಗುವ ಮುನ್ನ ಮಾತ್ರ ತೆಗೆಯುತ್ತಾಳೆ. ಅದರ ಹೊರತಾಗಿ ಮಹಿಳೆಯರು ಇವುಗಳನ್ನು ತೆಗೆಯುವುದಿಲ್ಲ. ಸರ್ಕಾರದ ಕುಮ್ಮಕ್ಕು ಇರುವುದರಿಂದಲೇ ಪರೀಕ್ಷಾ ಅಧಿಕಾರಿಗಳು ಮಹಿಳೆಯರಿಗೆ ಇಂಥ ನೋವು ನೀಡಿದ್ದಾರೆ. ಆದರೆ ಇದೇ ಪರೀಕ್ಷಾ ಕೊಠಡಿಗೆ ಹಿಜಾಬ್ ಹಾಕಿಕೊಂಡು ಹೋಗುವುದಕ್ಕೆ ಅವಕಾಶ ನೀಡಿದ್ದಾರೆಂದರೆ ಏನರ್ಥ? ಎಂದು ಕಿಡಿಕಾರಿದರು.

Follow Us:
Download App:
  • android
  • ios