ಯಶವಂತಪುರ ವಿಧಾನಸಭಾ ಕ್ಷೇತ್ರದ ರಾಮೋಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಬ್ಬದ ರೀತಿಯಲ್ಲಿ ಗೃಹಜ್ಯೋತಿ ಕಾರ್ಯಕ್ರಮ ನಡೆಸಿದ್ದು, ಇದು ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ಕೇವಲ ಕಾರ್ಯಕ್ರಮ ಆಯೋಜನೆ ಮಾತ್ರವಲ್ಲದೇ, ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಊಟದ ವ್ಯವಸ್ಥೆ ಕೂಡ ಮಾಡಿಸಿದ್ದ ಶಾಸಕ ಎಸ್‌.ಟಿ.ಸೋಮಶೇಖರ್‌ 

ಬೆಂಗಳೂರು(ಆ.31): ಕಾಂಗ್ರೆಸ್‌ ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಉದ್ಘಾಟನಾ ಕಾರ್ಯಕ್ರಮ ಪ್ರಯುಕ್ತ ಪ್ರತಿಪಕ್ಷ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ತಮ್ಮ ಕ್ಷೇತ್ರದಲ್ಲಿ ಅದ್ಧೂರಿ ಕಾರ್ಯಕ್ರಮ ಆಯೋಜಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ರಾಮೋಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಬ್ಬದ ರೀತಿಯಲ್ಲಿ ಗೃಹಜ್ಯೋತಿ ಕಾರ್ಯಕ್ರಮ ನಡೆಸಿದ್ದು, ಇದು ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗೆ ಮತ್ತಷ್ಟುಪುಷ್ಠಿ ನೀಡಿದಂತಾಗಿದೆ. ಕೇವಲ ಕಾರ್ಯಕ್ರಮ ಆಯೋಜನೆ ಮಾತ್ರವಲ್ಲದೇ, ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಊಟದ ವ್ಯವಸ್ಥೆ ಕೂಡ ಮಾಡಿದ್ದರು.

News Hour: ರಕ್ಷಾಬಂಧನ ಹಬ್ಬದ ದಿನವೇ ಮನೆಗೆ ಬಂದ ಗೃಹಲಕ್ಷ್ಮೀ!

ಅಷ್ಟೇ ಅಲ್ಲ. ಕ್ಷೇತ್ರದ ವ್ಯಾಪ್ತಿಯ 17 ಗ್ರಾಮ ಪಂಚಾಯ್ತಿ ಮತ್ತು ಐದು ಬಿಬಿಎಂಪಿ ವಾರ್ಡ್‌ಗಳಲ್ಲಿಯೂ ಕಾರ್ಯಕ್ರಮ ಆಯೋಜಿಸಿ ಸರ್ಕಾರದ ಯೋಜನೆ ಜಾರಿಗೆ ಕಾಳಜಿ ತೋರಿದರು. ಬಹಳ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಕಾಂಗ್ರೆಸ್‌ಗೆ ಹತ್ತಿರವಾಗಿರುವ ಸಂದೇಶವನ್ನು ರವಾನಿಸಿದರು.

ಗೆದ್ದ ಮೇಲೆ ಎಲ್ಲಾ ಒಂದೇ: ಶಾಸಕ

ಈ ವೇಳೆ ಮಾತನಾಡಿದ ಸೋಮಶೇಖರ್‌, ಗೃಹಲಕ್ಷ್ಮಿ ಯೋಜನೆ ಜಾರಿಗೆ ನನ್ನದೂ ಕೂಡ ಒಂದು ಅಳಿಲು ಸೇವೆ. ನನ್ನ ಕ್ಷೇತ್ರದಲ್ಲಿ ಯೋಜನೆ ಬಗ್ಗೆ ಮಾಹಿತಿ ನೀಡಲು ಏನೆಲ್ಲಾ ಕ್ರಮ ವಹಿಸಬಹುದೋ ಅದನ್ನು ಮಾಡುತ್ತಿದ್ದೇನೆ ಅಷ್ಟೇ. ಯೋಜನೆಗಳ ವಿಚಾರದಲ್ಲಿ ನನಗೆ ಜೆಡಿಎಸ್‌-ಕಾಂಗ್ರೆಸ್‌-ಬಿಜೆಪಿ ಎಂಬ ಭೇದಭಾವವಿಲ್ಲ. ಚುನಾವಣೆ ವೇಳೆ ನನ್ನ ಪಕ್ಷ, ಅವರ ಪಕ್ಷ ಎಂಬುದು ಇರುತ್ತದೆ. ಚುನಾವಣೆ ಮುಗಿದ ಮೇಲೆ ಪಕ್ಷ ಭೇದ ಇಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಮಹಿಳೆಯರೇ ಕರ್ನಾಟಕದ ಶಕ್ತಿ, 4 ಗ್ಯಾರೆಂಟಿ ಮಹಿಳಾ ಸಬಲೀಕರಣಕ್ಕೆ ಮೀಸಲು, ರಾಹುಲ್ ಗಾಂಧಿ!

ಗೃಹಲಕ್ಷ್ಮಿ ಯೋಜನೆಯು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕ್ಷೇತ್ರದಲ್ಲಿ 24 ಸಾವಿರ ಬಿಪಿಎಲ್‌ ಕಾರ್ಡ್‌ದಾರರು ಮಾತ್ರ ನೋಂದಣಿ ಮಾಡಿದ್ದಾರೆ. ಎಲ್ಲರೂ ನೋಂದಣಿ ಮಾಡಿಕೊಳ್ಳಬೇಕು. ಇದರಿಂದ ಪ್ರತಿ ತಿಂಗಳು ಎರಡು ಸಾವಿರ ರು. ಖಾತೆಗೆ ಬರುತ್ತದೆ. ಎಪಿಎಲ್‌ ಕಾರ್ಡ್‌ದಾರರು ಐದು ಕೇಜಿ ಅಕ್ಕೆ ತೆಗೆದುಕೊಳ್ಳುವವರಿಗೆ ಮಾತ್ರ ಸಿಗುತ್ತದೆ. ಕಾಂಗ್ರೆಸ್‌ ಸರ್ಕಾರದ ಕಾರ್ಯಕ್ರಮವನ್ನು ಕಾಂಗ್ರೆಸ್‌ ಶಾಸಕರೇ ಮಾಡಬೇಕು ಎಂದೇನಿಲ್ಲ. ಗೃಹಜ್ಯೋತಿ ಯೊಜನೆಯೂ ಸಾಕಷ್ಟುಜನರಿಗೆ ತಲುಪುತ್ತಿರಲಿಲ್ಲ. ಕೇವಲ 40 ಸಾವಿರ ಜನರಿಗೆ ಅನುಕೂಲವಾಗುತ್ತಿತ್ತು. ಈಗ 1.9 ಲಕ್ಷ ಜನರಿಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.

ನಮ್ಮ ಪಕ್ಷದಲ್ಲಿ 94 ಸಾವಿರ ಕಾರ್ಡ್‌ದಾರರು ಇದ್ದು, ಅವರೆಲ್ಲಾ ನೋಂದಣಿಯಾಗಬೇಕು. ಇಲ್ಲವೆಂದರೆ ಜನರು ನನ್ನನ್ನು ಕೇಳುತ್ತಾರೆ. ಹಬ್ಬದ ರೀತಿಯಲ್ಲಿ ಈ ಕಾರ್ಯಕ್ರಮ ಮಾಡಿದ್ದೇವೆ. ಸರ್ಕಾರ ಯೋಜನೆಯನ್ನು ಎಲ್ಲಾ ಗೃಹಿಣಿಯರಿಗೂ ತಲುಪಿಸುತ್ತೇನೆ ಎಂದು ಶಾಸಕ ಎಸ್‌.ಟಿ.ಸೋಮಶೇಖರ್‌ ತಿಳಿಸಿದ್ದಾರೆ.