Asianet Suvarna News Asianet Suvarna News

ಸಚಿವ ಸ್ಥಾನ ತಪ್ಪಿಸಿದವರು ನನ್ನ ಲವರ್‌ : BJP ಶಾಸಕ ರಾಮದಾಸ್

  • ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ನನಗೂ ಸಚಿವನಾಗುವ ಆಸೆ ಇತ್ತು
  • ನನಗೆ ಸಚಿವ ಸ್ಥಾನ ತಪ್ಪಿಸಿದವರು ನನ್ನ ಲವರ್‌
  • ಮೈಸೂರಿನ ಕೆ.ಆರ್‌.ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್‌.ಎ.ರಾಮದಾಸ್‌ 
BJP MLA SA ramadas Talks about missing minister Post in Basavaraja bommai Cabinet snr
Author
Bengaluru, First Published Aug 11, 2021, 7:09 AM IST
  • Facebook
  • Twitter
  • Whatsapp

ಮೈಸೂರು (ಆ.11): ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ನನಗೂ ಸಚಿವನಾಗುವ ಆಸೆ ಇತ್ತು, ಅದು ಮಿಸ್‌ ಆಯ್ತು. ನನಗೆ ಸಚಿವ ಸ್ಥಾನ ತಪ್ಪಿಸಿದವರು ನನ್ನ ಲವರ್‌. ಅವರದ್ದು ನನ್ನದು ಪ್ರೇಮ, ಅವರ ಹೆಸರು ನನಗೆ ಮಾತ್ರ ಗೊತ್ತಿರಬೇಕು. ಅವರಿಗೆ ಈಗಾಗಲೇ ನಾನು ಅಭಿನಂದನೆ ಸಲ್ಲಿಸಿದ್ದೇನೆ ಎಂದು ಮೈಸೂರಿನ ಕೆ.ಆರ್‌.ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್‌.ಎ.ರಾಮದಾಸ್‌ ತಿಳಿಸಿದರು. 

ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ನಿರೀಕ್ಷೆಯೂ ಇಲ್ಲ ಎಂದರು.

ಸಂಪುಟದಲ್ಲಿ ಸಿಗದ ಸ್ಥಾನ: ಸಿಎಂ ಸ್ವಾಗತಕ್ಕೂ ಬಾರದೇ ಶಾಸಕ ರಾಮದಾಸ್ ಮುನಿಸು

 ಮಂತ್ರಿಯಾಗಿದ್ದರೆ ರಾಜ್ಯಾದ್ಯಂತ ಓಡಾಡಬೇಕಿತ್ತು. ಈಗ ನನ್ನ ಕ್ಷೇತ್ರವೇ ಎಲ್ಲಾ ಆಗಿದೆ. ಅದಕ್ಕೆ ಈಗ ನಾನು ನನ್ನ ಕ್ಷೇತ್ರವನ್ನು ದೇಶಕ್ಕೆ ಮಾದರಿ ಕ್ಷೇತ್ರವನ್ನಾಗಿಸುವತ್ತ ಮುಂದಾಗಿದ್ದೇನೆ ಎಂದರು.

ಸಿಎಂ ಬೊಮ್ಮಾಯಿ ಮೈಸೂರಿಗೆ ಭೇಟಿ ನೀಡಿದ್ದ ವೇಳೆಯೂ ಕಾರ್ಯಕ್ರಮಗಳಿಗೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದೀಗ ಹೇಳಿಕೆ ಸಂಚಲನ ಉಂಟು ಮಾಡಿದೆ. 

Follow Us:
Download App:
  • android
  • ios