'ಬಿಜೆಪಿ, ಸಂಘ ಪರಿವಾರದ ಸಿದ್ದಾಂತ ಸಿದ್ದರಾಮಯ್ಯ ಒಪ್ಪಿಕೊಳ್ಳಲಿ'
ಮಾಜಿ ಸಿಎಂ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಮೊದಲು ಬಿಜೆಪಿ, ಸಂಘಪರಿವಾರದ ಸಿದ್ದಾಂತ ಒಪ್ಪಿಕೊಳ್ಳಲಿ ಎಂದು ಮುಖಂಡರೋರ್ವರು ಹೇಳಿದ್ದಾರೆ.
ದಾವಣಗೆರೆ (ಜ.19): ಸಿಎಂ ಬದಲಾವಣೆ ಆರೆಸ್ಸೆಸ್ ಮೂಲಗಳು ಹೇಳಿವೆಯೆಂಬ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನ ಪಡೆದಿದ್ದು ಹೇಗೆಂದು ಒಮ್ಮೆ ಆಲೋಚಿಸಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಸಿದ್ದರಾಮಯ್ಯನವರೇ ಮೊದಲು ಬಿಜೆಪಿ, ಸಂಘ ಪರಿವಾರದ ತತ್ವ ಸಿದ್ಧಾಂತ ಒಪ್ಪಿಕೊಳ್ಳಿ. ಆ ನಂತರ ಯಡಿಯೂರಪ್ಪ ನಾಯಕತ್ವದ ಬಗ್ಗೆ ಮಾತನಾಡಿ ಎಂದು ತಿರುಗೇಟು ನೀಡಿದರು.
'ಸಿದ್ದರಾಮಯ್ಯ ಯಾವಾಗ ಜ್ಯೋತಿಷಿಯಾದ್ರೋ ಗೊತ್ತಿಲ್ಲ, ಭವಿಷ್ಯ ಮಾತ್ರ ಸುಳ್ಳಾಗುತ್ತಿವೆ' .
ವಯಸ್ಸು, ಅನುಭವದಲ್ಲಿ ಹಿರಿಯರಾದ ಸಿದ್ದರಾಮಯ್ಯ ಎಚ್ಚರಿಕೆಯಿಂದ ಮಾತನಾಡಲಿ ಎಂದು ಅವರು ಕಿವಿಮಾತು ಹೇಳಿದರು.
ಇಂದು ಸಭೆ : ನಾನು ಯಾವತ್ತೂ ಅರಿವೆ ಹಾವು ಬಿಡೋದಿಲ್ಲ. ಕೆಲ ಶಾಸಕರು ನನ್ನ ಜೊತೆ ನೋವು ತೋಡಿಕೊಂಡಿದ್ದು, ಮಂಗಳವಾರ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದೇವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಲ್ಲಿ ನಾಲ್ಕು ಗೋಡೆಗಳ ಮಧ್ಯೆ ಸಾಕಷ್ಟುಶಾಸಕರ ಜೊತೆ ಚರ್ಚಿಸುತ್ತೇವೆ ಎಂದರು. ರೆಸಾರ್ಟ್, ಪಂಚತಾರಾ ಹೊಟೆಲ್‌ನಲ್ಲಿ ಸಭೆ ಮಾಡಲ್ಲ. ನಮ್ಮ ಶಾಸಕರ ಮನೆ ಅಥವಾ ಶಾಸಕರ ಭವನದಲ್ಲಿ ಸಭೆ ನಡೆಸುತ್ತೇವೆ ಎಂದು ಅವರು ಹೇಳಿದರು.