ಹಾಸನ [ಡಿ.07]: ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಶಾಸಕ ಪ್ರೀತಂ ಗೌಡ ಗುಡುಗಿದ್ದಾರೆ. ಕ್ಷೇತ್ರ ಕಳೆದುಕೊಂಡಾದ ಅಲುಗಾಡುವುದು ಸಹಜ. ಕ.ಆರ್.ಪೇಟೆಯಲ್ಲಿ ಭೂಕಂಪವಾದರೆ ಹಾಸನ ಅಲುಗಾಡುತ್ತದೆ. ಸೋಲಿನ ಭೀತಿಯಿಂದ ರೇವಣ್ಣ ಹೀಗೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ. 

"

ಹಾಸನದಲ್ಲಿ ಮಾತನಾಡಿದ ಪ್ರೀತಂ ಗೌಡ ಇದು ಪ್ರಜಾಪ್ರಭುತ್ವ ದೇಶ. ನಾನು ದೇಶದ ಯಾವ ಮೂಲೆಯಲ್ಲಾದರು ಇರುತ್ತೇನೆ. ಇದನ್ನು ಕೇಳೋಕೆ ಅವರ್ಯಾರು ಎಂದರು. ಹಾಸನದ ಶಾಸಕರಿಗೆ ಕೆ.ಆರ್.ಪೇಟೆ ಗಡಿ ಭಾಗದಲ್ಲಿ ಏನು ಕೆಲಸ ಎಂದಿದ್ದ ರೇವಣ್ಣಗೆ ತಿರುಗೇಟು ನೀಡಿದರು. 

ನಾನು ಕೆ.ಆರ್ ಪೇಟೆಯಲ್ಲಾದರೂ ಇರುತ್ತೇಮೆ. ಹೊಳೇನರಸೀಪುರದಲ್ಲಾದರೂ ಇರುತ್ತೇನೆ. ಇದನ್ನು ಕೇಳೋಕೆ ಇವರೇನು ಪಾಳೆಗಾರರ. ನಾನೂ ಗೌಡನೇ. ನಾನು ಹೇಮಾವತಿ ನೀರನ್ನೇ ಕುಡಿದಿದ್ದೇನೆ.  ಇಂತಹ ಗೊಡ್ಡು ಬೆದರಿಕೆ ಬೆದರಲ್ಲ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನನ್ನ ವಿರುದ್ಧ ಷಡ್ಯಂತ್ರ ಮಾಡಿ ಕೇಸ್ ಹಾಕಿದ್ದಾರೆ. ಇವರೆಲ್ಲಾ ವಿವೇಕಾನಂದರು. ನಾವೆಲ್ಲಾ ಗಬ್ಬರ್ ಸಿಂಗ್ ಎನ್ನುವ ರೀತಿಯಲ್ಲಿ ಮಾತನಾಡುವುದು ಬೇಡ ಎಂದರು. 

ರಾಜ್ಯದಲ್ಲಿ ನಡೆದ 15 ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ 14 ಸ್ಥಾನ ಗೆಲ್ಲುವುದು ಖಚಿತ. ಕ.ಆರ್.ಪೇಟೆಯಲ್ಲಿ ಈ ಬಾರಿ ಮುಟ್ಟಿ ನೋಡಿಕೊಳ್ಳುವಂತಹ ಫಲಿತಾಂಶ ಬರಲಿದೆ. ಚುನಾವಣೆ ಬಳಿಕ ಸರ್ಕಾರ ಮತ್ತಷ್ಟು ಸುಭದ್ರವಾಗಲಿದೆ ಎಂದು ಪ್ರೀತಂ ಗೌಡ ಹೇಳಿದರು.