ಈ ಬಗ್ಗೆ ನಾನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆ ಮಾತನಾಡುತ್ತೇನೆ| ಈ ಹಿಂದೆ ಡ್ರಗ್ಸ್‌ ವಿಚಾರದಲ್ಲಿ ಕೆಲವರು ಮಾಹಿತಿ ನೀಡಿದ್ದಕ್ಕೆ ಯತ್ನಾಳ್‌ ಕರೆಸಿ ವಿಚಾರಣೆ ನಡೆಸಲಾಗಿತ್ತು: ಮಾಡಾಳ್‌ ವಿರುಪಾಕ್ಷಪ್ಪ| 

ಬೆಂಗಳೂರು(ಮಾ.17): ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಿ.ಡಿ. ವಿಚಾರವಾಗಿ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಕರೆದು ವಿಚಾರಣೆ ನಡೆಸಬೇಕು ಎಂದು ಆಡಳಿತಾರೂಢ ಬಿಜೆಪಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 23 ಸಿ.ಡಿ ಇವೆ ಎಂಬ ಹೇಳಿಕೆಯನ್ನು ಯತ್ನಾಳ್‌ ನೀಡಿದ್ದಾರೆ. ಈ ಹಿಂದೆ ಡ್ರಗ್ಸ್‌ ವಿಚಾರದಲ್ಲಿ ಕೆಲವರು ಮಾಹಿತಿ ನೀಡಿದ್ದಕ್ಕೆ ಅವರನ್ನು ಕರೆಸಿ ವಿಚಾರಣೆ ನಡೆಸಲಾಗಿತ್ತು ಎಂದು ಹೇಳಿದ್ದಾರೆ. 

ಬಿಜೆಪಿಯಲ್ಲಿ ಯತ್ನಾಳ್‌ ಉಚ್ಚಾಟನೆಯ ಕೂಗು ಜೋರು..!

ಅದೇ ರೀತಿ ಸಿಡಿ ಬಗ್ಗೆ ಹೇಳಿಕೆ ನೀಡುತ್ತಿರುವ ಯತ್ನಾಳ್‌ ಅವರನ್ನೂ ಕರೆದು ವಿಚಾರಣೆ ನಡೆಸಬೇಕು. ಈ ಬಗ್ಗೆ ನಾನು ಸಹ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜತೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.