ಕರ್ನಾಟಕದಲ್ಲಿ  ನೈಟ್ ಕರ್ಫ್ಯೂ   ಜಾರಿ/ ಬಿಜೆಪಿ ಶಾಸಕರಿಂದಲೇ ಅಪಸ್ವರ/ ಗೊಂದಲದ ತೀರ್ಮಾನ ಬೇಕಾಗಿತ್ತಾ?/ ನಿರ್ಧಾರ ಇನ್ನೊಮ್ಮೆ ಪರಿಶೀಲನೆ ಮಾಡಲು ಮನವಿ

ಬೆಂಗಳೂರು(ಡಿ. 24) ರಾಜ್ಯ ಸರ್ಕಾರದ ನೈಟ್ ಕರ್ಫ್ಯೂ ನಿರ್ಧಾರಕ್ಕೆ ಬಿಜೆಪಿ ಶಾಸಕರೇ ಅಪಸ್ವರ ಎತ್ತಿದ್ದಾರೆ. ಒಂದು ಕಡೆ ಎಂಎಲ್‌ಸಿ ವಿಶ್ವನಾಥ್ ತಕರಾರಿನ ಮಾತು ಆಡಿದ್ದರೆ ಇನ್ನೊಂದು ಕಡೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಅಪಸ್ವರ ಎತ್ತಿದ್ದಾರೆ.

ಶಾಲೆ ಆರಂಭ ಮತ್ತೆ ಅನುಮಾನ

ರಾತ್ರಿ ಕರ್ಫ್ಯೂ ಜಾರಿಮಾಡುವುದುರ ವೈಜ್ಞಾನಿಕ ಹಿನ್ನೆಲೆ ಏನು ಎಂಬುದು ಅರ್ಥವಾಗುತ್ತಿಲ್ಲ. ರಾತ್ರಿ ಯಾರೂ ಹೊರಗೆ ಅಡ್ಡಾಡುವುದಿಲ್ಲ ಮನೆ ಒಳಗೆ ಇರುತ್ತಾರೆ.. ಹಗಲಿನಲ್ಲಿಯೂ ಜನ ಓಡಾಡುತ್ತಾರೆ..ರಾತ್ರಿ ಮೂರು ಗಜ ಅಂತರದಲ್ಲಿಯೇ ಮಲಗುತ್ತಾರೆ.. ಹಾಗಾಗಿ ಸಿಎಂ ಇನ್ನೊಮ್ಮೆ ನಿರ್ಧಾರ ಪರಿಶೀಲನೆ ಮಾಡಬೇಕು ಎಂದಿದ್ದಾರೆ.