ಮೋದಿ ಆಡಳಿತದಲ್ಲಿ ಅಖಂಡ ಭಾರತದ ಕಡೆಗೆ ದೇಶ ಸಾಗಿದೆ: ಯತ್ನಾಳ
ಪಾಕಿಸ್ತಾನದ ಜನರು ನಮಗೆ ನರೇಂದ್ರ ಮೋದಿಯಂಥ ಪ್ರಧಾನಿ ಬೇಕು ಎಂಬುವುದನ್ನು ಹೇಳುತ್ತಿದ್ದಾರೆ. ಆದರೆ, ಇಲ್ಲಿನ ಅಯೋಗ್ಯರು ಪ್ರಧಾನಿ ಮೋದಿ ಅವರ ವಿರುದ್ಧ ನಿಂದಿಸುತ್ತಿದ್ದಾರೆ. ನಮ್ಮ ದೇಶ ಉಳಿಯಲು ಹಾಗೂ ಧರ್ಮ ಉಳಿಯಲು ನಾವು ಲೋಕಸಭೆ ಚುನಾವಣೆ ಗೆಲುವು ಸಾಧಿಸಲು ಪ್ರತಿಯೊಬ್ಬ ಕಾರ್ಯಕರ್ತರು ಮುಂದಾಗಬೇಕು. ಮೋದಿಯವರು ಭ್ರಷ್ಟಾಚಾರ ಮಾಡಿದ್ದಾರೆಯೇ, ಕುಟುಂಬ ರಾಜಕಾರಣ ಮಾಡಿದ್ದಾರೆ ಎಂದು ಪ್ರಶ್ನಿಸಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ
ರಾಯಚೂರು(ಸೆ.09): ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅಖಂಡ ಭಾರತದ ಕಡೆಗೆ ದೇಶ ಸಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ನಂದೀಶ್ವರ ದೇವಸ್ಥಾನದ ಆವರಣದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ನಮ್ಮ ಮಣ್ಣು ನಮ್ಮ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಅಖಂಡ ಭಾರತ ನಿರ್ಮಾಣಕ್ಕೆ ಮಹತ್ವದ ಕಾರ್ಯವನ್ನು ಕೈಗೊಂಡಿದ್ದಾರೆ. ಆ ನಿಟ್ಟಿನಲ್ಲಿ ದೇಶದಿಂದ ಪ್ರತ್ಯೇಕ ಎನಿಸಿಕೊಳ್ಳುತ್ತಿದ್ದ ಕಾಶ್ಮೀರವನ್ನು 370 ಕಾಯ್ದೆ ತೆಗೆದುಹಾಕುವ ಮೂಲಕ ಒಂದಾಗಿಸಿದ್ದಾರೆ. ಕಾಶ್ಮೀರಕ್ಕೆ ಪ್ರತ್ಯೇಕವಾದ ಸಂವಿಧಾನವಿತ್ತು. ಬಾಬಾ ಸಾಹೇಬ್ ಅವರು ಕಾಶ್ಮೀರಕ್ಕೆ ಸಂವಿಧಾನ 370 ನೀಡಲು ಆಕ್ಷೇಪಿಸಿದ್ದರು. ಆದರೆ, ದುರಂತವೆಂದರೆ ಪಂಡಿತ ಜವಾಹರಲಾಲ್ ನೆಹರು, ಶೇಖ್ ಅಬ್ದುಲ್ ಅವರ ಒತ್ತಡದ ಮೇಲೆ ನೀಡಲಾಯಿತು. ಅಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಗ್ರಾಪಂ, ಅಧ್ಯಕ್ಷರು, ಶಾಸಕ, ಲೋಕಸಭಾ ಸದಸ್ಯರಾಗಲು ಆಗಲು ಸಾಧ್ಯವಾಗಿಲ್ಲ. ಅಂಥ ಕರಾಳ ಕಾಯ್ದೆಯನ್ನು ಪ್ರಧಾನಿ ಮೋದಿ ತೆಗೆದು ಹಾಕಿದರು ಎಂದು ತಿಳಿಸಿದರು.
ವೈದ್ಯನ ಮೇಲೆ ಗುಂಡಿನ ದಾಳಿ ಪ್ರಕರಣ; ಕ್ರಿಪ್ಟೋ ಕರೆನ್ಸಿ, ಮುಂಬೈ ಗ್ಯಾಂಗ್ ಕೃತ್ಯ?
ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ಸ್ವಾತಂತ್ರ ಸೇನಾನಿ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಮೂರ್ತಿ ನಿರ್ಮಾಣ ಮಾಡಿ ಕರ್ತವ್ಯಪಥ ಎಂದು ನಾಮಕರಣ ಮಾಡಿದ್ದು, ಅಲ್ಲಿ ನಿರ್ಮಾಣವಾಗುವ ಉದ್ಯಾನವನದಲ್ಲಿ ಈ ಮಣ್ಣನ್ನು ಹಾಕಲಾಗುತ್ತದೆ. ಆ ನಿಟ್ಟಿನಲ್ಲಿ ದೇಶದ ಮೂಲೆ ಮೂಲೆಯಿಂದ ಮಣ್ಣು ಸಂಗ್ರಹಿಸಲಾಗುತ್ತಿದೆ. ಈ ಹಿಂದೆ ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ದೇಶದ ಮೂಲೆ ಮೂಲೆಯಿಂದ ಇಟ್ಟಿಗೆ ಸಂಗ್ರಹಿಸಲಾಗಿತ್ತು. ಅದೇ ಮಾದರಿಯಲ್ಲಿ ಈಗ ದೇಶ ಪವಿತ್ರ ಮಣ್ಣನ್ನು ಸಂಗ್ರಹಿಸುವಂಥ ರಾಷ್ಟ್ರೀಯ ಕಾರ್ಯಕ್ರಮ ಇದಾಗಿದ್ದು, ಪ್ರತಿ ಜಿಲ್ಲೆಯಿಂದ ಸಂಗ್ರಹಿಸಿದ ಮಣ್ಣನ್ನು ದೆಹಲಿಗೆ ಕಳುಹಿಸಲಾಗುವುದು ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ಕಾನೂನು ಬದ್ಧವಾಗಿ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ವರ್ಷ ಶ್ರೀರಾಮ ಮಂದಿರ ಲೋಕಾರ್ಪಣೆ ಸಮಾರಂಭದಲ್ಲಿ ಪ್ರತಿ ಬೂತ್‌ಮಟ್ಟದಿಂದ ಕಾರ್ಯಕರ್ತರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡುವಂತೆ ಪಕ್ಷದ ಹಿರಿಯ ಮುಖಂಡರ ಗಮನಕ್ಕೆ ತರಲಾಗುವುದು ಎಂದರು.
ಪಾಕಿಸ್ತಾನದ ಜನರು ನಮಗೆ ನರೇಂದ್ರ ಮೋದಿಯಂಥ ಪ್ರಧಾನಿ ಬೇಕು ಎಂಬುವುದನ್ನು ಹೇಳುತ್ತಿದ್ದಾರೆ. ಆದರೆ, ಇಲ್ಲಿನ ಅಯೋಗ್ಯರು ಪ್ರಧಾನಿ ಮೋದಿ ಅವರ ವಿರುದ್ಧ ನಿಂದಿಸುತ್ತಿದ್ದಾರೆ. ನಮ್ಮ ದೇಶ ಉಳಿಯಲು ಹಾಗೂ ಧರ್ಮ ಉಳಿಯಲು ನಾವು ಲೋಕಸಭೆ ಚುನಾವಣೆ ಗೆಲುವು ಸಾಧಿಸಲು ಪ್ರತಿಯೊಬ್ಬ ಕಾರ್ಯಕರ್ತರು ಮುಂದಾಗಬೇಕು. ಮೋದಿಯವರು ಭ್ರಷ್ಟಾಚಾರ ಮಾಡಿದ್ದಾರೆಯೇ, ಕುಟುಂಬ ರಾಜಕಾರಣ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ರಾಘವೇಂದ್ರ ಸ್ವಾಮಿಗಳ ಸೇವೆಯನ್ನು ಮಾಡಿದರೆ ನೆಮ್ಮದಿ ಲಭ್ಯ: ಜಗ್ಗೇಶ್
ನೇತಾಜಿ ಸುಭಾಶ್ಚಂದ್ರ ಬೋಸ್, ಅಟಲ್ ಬಿಹಾರಿ ವಾಜಪೇಯಿ ಅವರ ನಂತರ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು 9 ವರ್ಷಗಳು ಕಾಲ ದೇಶದಲ್ಲಿ ಉತ್ತಮವಾದ ಆಡಳಿತ ನೀಡುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸದರು, ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.
ವಿಧಾನಸಭೆ ಫಲಿತಾಂಶದಿಂದ ಪ್ರಧಾನಿ ಬೇಸರ
ರಾಜ್ಯದ ವಿಧಾನಸಭಾ ಚುನಾವಣೆಯ ಫಲಿತಾಂಶ, ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷರ ನೇಮಕದ ವಿಳಂಬದ ನೋವನ್ನು ಪ್ರಧಾನಿ ಮೋದಿ ಅನುಭವಿಸುತ್ತಿದ್ದಾರೆ. ಆ ಎಲ್ಲವನ್ನು ಬದಿಗಿಟ್ಟು ಎಲ್ಲರೂ ಸಂಘಟಿತರಾಗಿ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆದ್ದು ರಾಜ್ಯದಿಂದ ಮೋದಿಗೆ ಹಾಕಿರುವ ನೋವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹೇಳಿದರು.