Asianet Suvarna News Asianet Suvarna News

ಪಂಚಮಸಾಲಿಗೆ ಮೀಸಲಾತಿ ಸಿಎಂ ಕೊಟ್ಟೇ ಕೊಡುತ್ತಾರೆ: ಯತ್ನಾಳ

ನೂರಕ್ಕೆ ನೂರು ಸಕಾರಾತ್ಮಕ ನಿರ್ಣಯ ಬೊಮ್ಮಾಯಿ ಕೊಟ್ಟೇ ಕೊಡುತ್ತಾರೆ. ಅಷ್ಟು ವಿಶ್ವಾಸ ಇದ್ದಾಗ ಹೀರೋ ಆಗಲು ಪ್ರಾಣ ಕೊಡುತ್ತೇನೆ ಎಂದು ದೊಡ್ಡ ಡೈಲಾಗ್‌ ಹೇಳುವುದಿಲ್ಲ ಎಂದ ಯತ್ನಾಳ 
 

BJP MLA Basanagouda Patil Yatnal Talks Over Pachamasali 2A Reservation grg
Author
First Published Dec 21, 2022, 7:30 PM IST

ಬೆಳಗಾವಿ(ಡಿ.21):  ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವ ಕುರಿತು ಡಿ. 22 ರೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನಿಲುವು ಪ್ರಕಟಿಸುತ್ತಾರೆ ಎಂಬ ವಿಶ್ವಾಸವಿದೆ. ಅಷ್ಟುವಿಶ್ವಾಸ ಇದ್ದೂ ಆಗದಿದ್ದರೆ ರಾಜೀನಾನೆ ನೀಡುತ್ತೇನೆ. ಪ್ರಾಣ ಕೊಡುತ್ತೇನೆ, ಬಲಿದಾನ ಕೊಡುತ್ತೇನೆ ಎಂದು ದೊಡ್ಡ ಡೈಲಾಗ್‌ ಹೊಡೆಯಲ್ಲ. ರಾಜಕೀಯ ಲಾಭಕ್ಕೆ ದೊಡ್ಡ ಡೈಲಾಗ್‌ ಹೊಡೆಯುವವನು ನಾನಲ್ಲ. ನನಗೆ ನೂರಕ್ಕೆ ನೂರರಷ್ಟು ವಿಶ್ವಾಸವಿದೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರಕ್ಕೆ ನೂರು ಸಕಾರಾತ್ಮಕ ನಿರ್ಣಯ ಬೊಮ್ಮಾಯಿ ಕೊಟ್ಟೇ ಕೊಡುತ್ತಾರೆ. ಅಷ್ಟು ವಿಶ್ವಾಸ ಇದ್ದಾಗ ಹೀರೋ ಆಗಲು ಪ್ರಾಣ ಕೊಡುತ್ತೇನೆ ಎಂದು ದೊಡ್ಡ ಡೈಲಾಗ್‌ ಹೇಳುವುದಿಲ್ಲ ಎಂದರು.

ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗುವ ಸಲಹೆ ನೀಡಿ: ಸಿಎಂ ಬೊಮ್ಮಾಯಿ

ನಮ್ಮ ಸಮಾಜಕ್ಕೆ ಮೀಸಲತಿಗೆ ಸಿಎಂ ಬೊಮ್ಮಾಯಿ ಗಡುವು ಕೊಟ್ಟಿದ್ದಾರೋ ಇಲ್ಲವೋ ನಾವು ಗಡುವು ಕೊಟ್ಟಿದ್ದೇವೋ? ನಾವು ನಮ್ಮದು ಹೇಳಿದ್ದೇವೆ. ಅವರು ಅವರದ್ದು ಹೇಳಿದ್ದಾರೆ. ಡಿ. 22 ರಂದು ನಮ್ಮ ಸಮಾವೇಶದಲ್ಲಿ ಬೊಮ್ಮಾಯಿ ಏನು ಹೇಳುಾ್ತರೆ. ನಾನು ಏನು ಹೇಳುತ್ತೇನೆ ನೋಡಿ. ಸಮಾವೇಶ ಸಂಭ್ರಮಾಚರಣೆ ಆಗುತ್ತದೆ. ಹೊಸ ರಾಜಕೀಯ ವಿಷಯವೂ ಆಗುತ್ತದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋದ ವರದಿ ಪಡೆಯುವವರೆಗೂ ಮುಖ್ಯಮಂತ್ರಿಗೆ ಮಾತನಾಡಲು ಬರುವುದಿಲ್ಲ. ಅದರ ಬಗಗೆ ಮಾತನಾಡಿದರೆ, ಆಯೋಗದ ಮೇಲೆ ಒತ್ತಡ ಹಾಕಿದಂತಾಗುತ್ತದೆ. ಮತ್ತೆ ಅದಕ್ಕೊಂದು ಬಣ್ಣ ಕೊಡುತ್ತಾರೆ ಎಂದು ದರ ಬಗ್ಗೆ ಸಿಎಂ ಏನೂ ಹೇಳಿಲ್ಲ. ಹೀಗಾಗಿ ಜವಾಬ್ದಾರಿ ಸ್ಥಾನದಲ್ಲಿದ್ದ ಸಿಎಂ ಹಾಗೆ ಹೇಳಿದ್ದಾರೆ. ಸಿಎಂ ಹೇಳಿಕೆಗೆ ನಾನು ಖಂಡನೆಯೂ ಮಾಡಲ್ಲ. ಟೀಕೆಯನ್ನೂ ಮಾಡುವುದಿಲ್ಲ ಎಂದರು.

ವೀರ ಸಾವರ್ಕರ ಹಾಗೂ ಟಿಪ್ಪು ಸುಲ್ತಾನ್‌ನ್ನು ಹೋಲಿಸಬೇಡಿ ಎಂದು ಸಿದ್ದರಾಮಯ್ಯಗೆ ಹೇಳಿದ್ದೇನೆ. ಸಾವರ್ಕರ 20 ವರ್ಷ ಕಾಲಾಪಾನಿ ಕಠಿಣ ಶಿಕ್ಷೆ ಅನುಭವಿಸಿದ್ದಾರೆ. ಅಂತಹ ಕಠಿಣ ಶಿಕ್ಷೆ ವಿಶ್ವದ ಯಾವುದೇ ವ್ಯಕ್ತಿ ಅನುಭವಿಸಿಲ್ಲ. ಟಿಪ್ಪು ಸುಲ್ತಾನ್‌ ಲಕ್ಷಾಂತರ ಹಿಂದುಗಳ ಕಗ್ಗೊಲೆ ಮಾಡಿದವ. ಮೂರ್ನಾಲ್ಕು ಸಾವಿರ ಹಿಂದುದೇಗುಲಗಳನ್ನುಧ್ವಂಸ ಮಾಡಿದವ. ಮತಾಂತರ ಮಾಡಿದವರ. ಇಂತಹವನ ವೈಭವೀಕರಣ ಮಾಡುವುದು, ಸಾವರ್ಕರ ಬಗ್ಗೆ ಟೀಕೆ ಮಾಡುತ್ತಾರೆ. ಹಾಗಾದರೆ ತಾಕತ್‌ ಇದ್ದರೆ ವಿಧಾನಸಭೆಯಲ್ಲಿ ಹಾಕಿದ ಸಾವರ್ಕರ ಫೋಟೋ ತೆಗೆಯಬೇಕೆಂದು ಪ್ರತಿಭಟನೆ ಮಾಡಬೇಕಿತ್ತು. ಅದನ್ನು ಬಿಟ್ಟರು. ಈಗ ವೀರ ಸಾವರ್ಕರ ಬಗ್ಗೆ ಸಾಫ್ಟ್‌ ಆದರು ಎಂದರು.

ಟಿಪ್ಪು ಸುಲ್ತಾನ್‌, ಮೊಘಲರ ಬಗ್ಗೆ ಮಾತನಾಡಿದರೆ ಅಧಿಕೃತ ವಿರೋಧ ಪಕ್ಷ ಆಗುವುದಿಲ್ಲ. ನಾಲ್ಕು ಸೀಟೂ ಬರಲ್ಲ ಎಂಬುದು ಕಾಂಗ್ರೆಸ್ಸಿಗರಿಗೆ ಗೊತ್ತಾಗಿದೆ. ಹಾಗಾಗಿ ಸಿದ್ದರಾಮಯ್ಯ ಒಳ್ಳೆಯ ನಿರ್ಣಯ ಕೈಗೊಂಡಿದ್ದಾರೆ. ರಾಹುಲ್‌ ಗಾಂಧಿಗೂ ಅದೇ ಸದ್ಬುದ್ಧಿ ಕಲಿಸಬೇಕು. ಡಿ.ಕೆ.ಶಿವಕುಮಾರ ಅವರು ಸಾವರ್ಕರ ಕರ್ನಾಟಕದವರಲ್ಲ ಎಂದಿದ್ದಾರೆ. ಹಾಗಾದರೆ ಸೋನಿಯಾ ಗಾಂಧಿ ಏನು ಹಿಂದೂಸ್ತಾನ್‌ದವರಾ? ಅವರದ್ದೇನು ಇಲ್ಲಿ ಕೆಲಸವಿದೆ. ಅಲ್ಲೆಲ್ಲೋ ಹೋಟೆಲ್‌ನಲ್ಲಿದ್ದವರನ್ನು ಇಲ್ಲಿ ಕರೆದುಕೊಂಡು ಬಂದರು. ಈಗ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಮೇಡಮ್‌ ಎಂದು ಕಾಲು ಮುಗಿಯುತ್ತಾರೆ ಎಂದು ಟೀಕಿಸಿದರು.

ಹೆಬ್ಬಾಳಕರ ವೋಟ್‌ ಬ್ಯಾಂಕ್‌ ರಾಜಕಾರಣ

ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಅವರನ್ನು ಒಪ್ಪಿಸುತ್ತೇನೆಂದು ಶಾಸಕಿ ಲಕ್ಷ್ಮೇ ಹೆಬ್ಬಾಳಕರ ಹೇಳಿದ್ದಾರೆ. ಹೆಬ್ಬಾಳಕರ ಅವರನ್ನು ಒಪ್ಪುಸುತ್ತಾರೆ ಎಂಬುದು ನಮಗೆ ಗೊತ್ತಿದೆ. ಯಾರಿಗೆ ಗೊತ್ತಿಲ್ಲ. ಅವರು ಒಪ್ಪಿಸುವ ಮೊದಲು ನಾವು ಕೆಲಸವನ್ನೇ ಮಾಡಿ ಬಿಟ್ಟಿದ್ದೇವೆ. ಅವರು ಒಪ್ಪಿಸುವುದನ್ನು ತೆಗೆದುಕೊಂಡು ಏನು ಮಾಡುವುದಿದೆ ಎಂದು ಪ್ರಶ್ನಿಸಿದ ಅವರು, ಸುಮ್ಮನೇ ಲಕ್ಷ್ಮೀ ಹೆಬ್ಬಾಳಕರ ಅವರು ವೋಚ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದಾರೆ. ಪಾಪ ಅವರದ್ದು ರಾಜಕೀಯ ಭವಿಷ್ಯ ನೋಡುತ್ತಾರೆ. ಮಾಡಿಕೊಳ್ಳಲಿ ಅದರಲ್ಲೇನೂ ತಪ್ಪಿದೆ? ನಿನ್ನೆ ವೀರಾವೇಶದ ಭಾಷಣ ಮಾಡಿದರು, ಒಂದರ ಮೇಲೆ ಒಂದು ಡೈಲಾಗ್‌ ಹೊಡೆದರು. ಪುಣ್ಯಕ್ಕೆ ಅವರು ಪ್ರಾಣ ಕೊಡುತ್ತೇನೆಂದು ಹೇಳಿಲ್ಲ ಎಂದರು.

ಅದು ಪೇಮೆಂಟ್‌ ಗಿರಾಕಿ

ಅದು ಪೇಮೆಂಟ್‌ ಗಿರಾಕಿ. ಅದು ಅದನ್ನು ಅಷ್ಟೇ ಮಾತನಾಡುತ್ತದೆ. ಆ ವ್ಯಕ್ತಿ ಬಗ್ಗೆ ಮಾತನಾಡಿದರೆ ನಾವೇ ಸಣ್ಣವರಾಗುತ್ತೇವೆ. ಅದು ಮುಗಿದ ಹೋದ ಕಥೆ ಎಂದು ಬಸನಗೌಡ ಪಾಟೀಲ ಯತ್ನಾಳ ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ವಿರುದ್ಧ ಕಿಡಿಕಾರಿದರು.

ಯಾವುದೇ ಶ್ರೀಗಳ ಬಗ್ಗೆ ಹಗುರ ಮಾತು ಬೇಡ: ಯತ್ನಾಳ್ ವಿರುದ್ಧ ಸಚಿವ ನಿರಾಣಿ ಪರೋಕ್ಷ ವಾಗ್ದಾಳಿ

ಪೇಮೆಂಟ್‌ ಕೋಟಾ ಮಿನಿಸ್ಟರ್‌ ಅದು, ನಾಟ್‌ ಎಲಿಜಿಬಲ್‌, ಅರ್ಹತೆ ಪರ್ಹತೆ ಏನೂ ಇಲ್ಲ, ಓನ್ಲಿ ಪೇಮೆಂಟ್‌ ಯಾರೂ ಬಂದರೂ ಅವರು ಕೆಳಗೆ ಕೂರಬೇಕು, ಮೇಲಂತೂ ಕೂರುವುದಿಲ್ಲ. ಅವರಿಗೆ ಕಳಕಳಿ ಇದ್ದರೆ ಕೆಳಗೆ ಕೂರಬೇಕು. ಅವರಿಗೆ ಕಳಕಳಿ ಇರಲಿ, ಮೀಸಲಾತಿ ಆಗಬಾರದು ಎಂದು ಹೋರಾಟ ಮಾಡಿದವರು ಅವರು. ಗಡಿಬಿಡಿ ಮಾಡಿ ಕೊಡಬೇಡಿ ಅವಶ್ಯ ಇಲ್ಲ ಅಂದವರು ಎಂದು ಹೇಳಿದರು.

ಅಥಣಿಯಲ್ಲಿ ವಚನಾನಂದ ಸ್ವಾಮೀಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಹುಚ್ಚು ಹಿಡಿದಿದೆ. ಇದು ಆಗಬಿಟ್ಟರೆ ಅವರು ಝಿರೋ ಆಗುತ್ತಾರೆ. ಆ ಮಂತ್ರಿಯೂ ಝಿರೋ ಆಗುತ್ತಾನೆ. ಈ ಕಂತ್ರಿನೋ ಝೀರೋ ಆಗುತ್ತಾನೆ ಎಂದು ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ಮತ್ತು ವಚನಾನಂದ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದರು.

Follow Us:
Download App:
  • android
  • ios