ವಿಜಯಪುರದಲ್ಲಿದೆ ಗಟ್ಟಿ ಸರ್ಕಾರ: ಶಾಸಕ ಯತ್ನಾಳ

ಚುನಾವಣೆ ಸಂದರ್ಭದಲ್ಲಿ ಸೀರೆ, ನೋಟ್‌ಬುಕ್‌, ಅಲಾರಾಂ, ಕುಕ್ಕರ್‌ ಹಂಚಿ, ಐದು ವರ್ಷಗಳವರೆಗೆ ಅಭಿವೃದ್ಧಿ ಮಾಡದೆ ವಂಚಿಸುತ್ತಾರೆ. ಆದರೆ, ನಾನು ನಯಾ ಪೈಸೆ ನೀಡಲ್ಲ. ಬಡವರು, ನಿರ್ಗತಿಕರಿಗೆ ಪ್ರತಿ ವರ್ಷ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ. ಶಾಶ್ವತವಾಗಿ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿರುವೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ 

BJP MLA Basanagouda Patil Yatnal Talks Over Government in Vijayapura grg

ವಿಜಯಪುರ(ಮಾ.15):  ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಇದ್ದಂಗೆ, ವಿಜಯಪುರದಲ್ಲೂ ಗಟ್ಟಿ ಸರ್ಕಾರ ಇದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ವಾರ್ಡ್‌ ನಂ.2ರ ದರ್ಗಾ ಬಳಿಯ ಅಂಭಾಭವಾನಿ ಗುಡಿ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಈ ಹಿಂದೆ ಒಬ್ಬ ಡಿಸಿ ಇದ್ದ. ಆತ ಜಿಲ್ಲೆಯ ನೂರಾರು ಎಕರೆ ಆಸ್ತಿಯನ್ನು ವಕ್ಫ್‌ ಬೋರ್ಡ್‌ಗೆ ಮಾಡಿ ಹೋಗಿದ್ದ. ನಾನು ಶಾಸಕನಾದ ಮೇಲೆ 77 ಎಕರೆ ಆಸ್ತಿಯನ್ನು ಮರಳಿ ಕಂದಾಯ ಇಲಾಖೆಗೆ ಪಡೆದುಕೊಳ್ಳಲಾಯಿತು. ಉಳಿದ ಆಸ್ತಿ ಸಹ ಬರಲಿದೆ. ಮನಗೂಳಿ ಅಗಸಿ ಬಳಿ ಸಮುದಾಯ ಭವನ ನಿರ್ಮಿಸಲು ಸಹ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ತಾವು ಜಗ್ಗಲ್ಲ ಎಂದರು.

KARNATAKA ELECTION 2023: ಚುನಾವಣೆಗೆ ಸಜ್ಜಾದ ವಿಜಯಪುರ ಜಿಲ್ಲಾಡಳಿತ..!

ಚುನಾವಣೆ ಸಂದರ್ಭದಲ್ಲಿ ಸೀರೆ, ನೋಟ್‌ಬುಕ್‌, ಅಲಾರಾಂ, ಕುಕ್ಕರ್‌ ಹಂಚಿ, ಐದು ವರ್ಷಗಳವರೆಗೆ ಅಭಿವೃದ್ಧಿ ಮಾಡದೆ ವಂಚಿಸುತ್ತಾರೆ. ಆದರೆ, ನಾನು ನಯಾ ಪೈಸೆ ನೀಡಲ್ಲ. ಬಡವರು, ನಿರ್ಗತಿಕರಿಗೆ ಪ್ರತಿ ವರ್ಷ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ. ಶಾಶ್ವತವಾಗಿ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿರುವೆ ಎಂದು ಹೇಳಿದರು.

ಸಿಸಿ ರಸ್ತೆ ಕಾಣದ ವಿಜಯಪುರ ನಗರದಲ್ಲಿ ಇಂದು, ಎಲ್ಲಿ ನೋಡಿದರಲ್ಲಿ ಗುಣಮಟ್ಟದ ಸಿಸಿ ರಸ್ತೆ ಕಾಣುತ್ತವೆ. ಪ್ರತಿ ಕಾಲೊನಿಯ ಆಂತರಿಕ ರಸ್ತೆಗಳು ಅಭಿವೃದ್ಧಿಗೊಂಡಿವೆ. ರೌಡಿಸಂ ಸಂಪೂರ್ಣ ಅಂತ್ಯಗೊಂಡಿದೆ. ಮಹಿಳೆಯರು, ಮಕ್ಕಳು ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ಡಿಎನ್‌ಎ ಆಧರಿತ ನಾಯಕತ್ವ: ಸಿ.ಟಿ.ರವಿ

ಐದು ವರ್ಷದ ಅವಧಿಯಲ್ಲಿ ಪ್ರತಿ ಸಮುದಾಯಕ್ಕೆ ನ್ಯಾಯಯುತವಾಗಿ ಸಮುದಾಯ ಭವನ, ದೇವಸ್ಥಾನಗಳಿಗೆ ಅನುದಾನ ನೀಡಿರುವೆ. ಮಹಾಪುರುಷ ವೃತ್ತಗಳು, ಮಾರ್ಗಗಳ ನಾಮಕರಣ ಮಾಡಿರುವೆ. ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿರುವೆ ಎಂದರು.

ಈ ಬಾರಿ ರಾಜ್ಯದಲ್ಲಿ 124 ಸ್ಥಾನಗಳೊಂದಿಗೆ ಬಹುಮತ ಪಡೆದು ಸದೃಢ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆಗ, ದೇಶದ್ರೋಹಿಗಳನ್ನು ಸಂಪೂರ್ಣ ಬಗ್ಗು ಬಡಿಯಲಾಗುವುದು ಎಂದು ಹೇಳಿದರು. ಈ ವೇಳೆ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಕಾಲೋನಿ ನಿವಾಸಿಗಳು ಇದ್ದರು.

Latest Videos
Follow Us:
Download App:
  • android
  • ios