Belagavi Violence: ನನಗೆ ಗೃಹ ಖಾತೆ ಕೊಡಿ, ಒಬ್ಬರೆ ಮಗಾ ಸದ್ದು ಮಾಡಿದರೆ ನೋಡಿ: ಯತ್ನಾಳ್
* ಎಂಇಎಸ್, ಶಿವಸೇನೆ ಕಾರ್ಯಕರ್ತರ ಕಠಿಣ ಕ್ರಮ ಜರುಗಿಸಬೇಕು
* ಕೆಲ ಹುಳುಗಳು ಸಂಘಟನೆ ಮಾಡಿಕೊಂಡು ಕೆಟ್ಟ ಕೆಲಸ ಮಾಡುತ್ತಿವೆ
* ಎಂಇಎಸ್ ಪುಂಡರಿಗೆ ತಕ್ಕ ಪಾಠ: ಸಚಿವ ಸಿ.ಸಿ. ಪಾಟೀಲ
ವಿಜಯಪುರ(ಡಿ.19): ಬೆಳಗಾವಿಯಲ್ಲಿ ಶಿವಸೇನೆ(Shiv Sena), ಎಂಇಎಸ್(MES) ಕಾರ್ಯಕರ್ತರು ಪುಂಡಾಟಿಕೆ ನಡೆಸಿದ್ದನ್ನು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್(Basanagouda Patil Yatnal) ಅವರು ತೀವ್ರವಾಗಿ ಖಂಡಿಸಿದ್ದಾರೆ. ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಶಿವಾಜಿ ಮೂರ್ತಿ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ಬಸವಣ್ಣನ ಮೂರ್ತಿಗಳಿಗೆ ಅಪಮಾನ ಮಾಡಲಾಗುತ್ತಿದೆ. ಇದರ ಹಿಂದೆ ದೊಡ್ಡ ಗುಂಪು ಇದೆ. ಅವರು ಯಾರೇ ಇದ್ದರೂ ಕ್ರಮವಾಗಬೇಕು. ಬೆಳಗಾವಿಯಲ್ಲಿ(Belagavi) ಪುಂಡಾಟಿಕೆ ನಡೆಸಿದ ಎಂಇಎಸ್, ಶಿವಸೇನೆ ಕಾರ್ಯಕರ್ತರ ಕಠಿಣ ಕ್ರಮ ಜರುಗಿಸಬೇಕು ಎಂದು ಹೇಳಿದರು.
ರಾಷ್ಟ್ರ ಪುರುಷರ ಮೂರ್ತಿಗಳ ಮೇಲೆ ದಾಳಿ(Attack) ಮಾಡುವವರ ಮೇಲೆ ತಕ್ಷಣವೇ ಕ್ರಮ ಜರುಗಿಸಬೇಕು. ರಾಷ್ಟ್ರ ಪುರುಷರ ಮೂರ್ತಿಗೆ ಅಪಮಾನ ಮಾಡುವವರನ್ನು ಎಂದಿಗೂ ಕ್ಷಮಿಸಬಾರದು ಎಂದರು. ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಯಾವುದೇ ರೀತಿಯ ವಿಳಂಬ ಮಾಡದೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಗೃಹ ಸಚಿವರಿಗೆ(Home Minister) ಆಗ್ರಹಿಸಿದರು. ಕೆಲವರು ಸಂಘಟನೆಗಳನ್ನು ಕಟ್ಟಿಕೊಂಡು ಉದ್ಯೋಗ ಮಾಡಿಕೊಂಡಿದ್ದಾರೆ. ಕೆಲ ಹುಳುಗಳು ಸಂಘಟನೆ ಮಾಡಿಕೊಂಡು ಕೆಟ್ಟ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.
Belagavi Violence ಮಹಾರಾಷ್ಟ್ರದ ಕನ್ನಡಿಗರಿಗೆ ರಕ್ಷಣೆ, ಪುಂಡರಿಗೆ ತಕ್ಕ ಪಾಠ, ಬೆಳಗಾವಿ ಘಟನೆಗೆ ಬೊಮ್ಮಾಯಿ ಕಿಡಿ
ಕೊಲ್ಹಾಪುರದಲ್ಲಿ(Kollapur) ಕನ್ನಡ ಧ್ವಜ(Kannada Flag) ಸುಟ್ಟವರ ಮೇಲೆ ಕ್ರಮಕ್ಕೆ ವಿಧಾನಸಭೆಯಲ್ಲಿ(Assembly) ನಿರ್ಣಯ ತೆಗೆದುಕೊಂಡಿದ್ದೇವೆ. ಇವೆಲ್ಲ ದೇಶ ವಿರೋಧಿ ಚಟುವಟಿಕೆಗಳು ಆಗಿವೆ. ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸಿದ ಎಂಇಎಸ್, ಶಿವಸೇನೆ ಕಾರ್ಯಕರ್ತರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಈ ಸಂಬಂಧ ಸೋಮವಾರ ವಿಧಾನಸಭೆಯಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ನನಗೆ ಗೃಹ ಖಾತೆ ಕೊಟ್ಟು ನೋಡಿ
ನನಗೆ ಗೃಹ ಖಾತೆ ಕೊಡಿ, ಒಬ್ಬರೆ ಮಗಾ ಸದ್ದು ಮಾಡಿದರೆ ನೋಡಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಗುಡುಗಿದರು.
ವಿಜಯಪುರದ(Vijayapura) ಖಾಸಗಿ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಮಾತನಾಡಿದ ಅವರು, ನನಗೆ ಗೃಹ ಸಚಿವ ಸ್ಥಾನ ನೀಡಿ ಎಂದು ಪರೋಕ್ಷವಾಗಿ ಅವರು ಮುಖ್ಯಮಂತ್ರಿಗಳಿಗೆ(Chief Minister of Karnataka) ಬೇಡಿಕೆ ಇಟ್ಟರು. ಈಗಿನ ಗೃಹ ಸಚಿವರು ಒಳ್ಳೆಯವರಿದ್ದಾರೆ. ಆದರೆ ಸಂಭಾವಿತರಿದ್ದಾರೆ. ಈಗಿನ ಗೃಹ ಸಚಿವರಿಗೆ ಅರಣ್ಯ ಅಥವಾ ಕಂದಾಯ ಖಾತೆಯನ್ನು ನೀಡಿ. ನನಗೆ ಗೃಹ ಖಾತೆ ಕೊಟ್ಟು ನೋಡಿ ಮಂಗಳೂರಿನಲ್ಲಿ(Mangaluru Riot) ಗಲಾಟೆ ಮಾಡಿದವರಿಗೆ ಪಾಠ ಕಲಿಸುತ್ತೇನೆ. ಪೊಲೀಸರ(Police) ಮೇಲೆ ದಾಳಿ ನಡೆಸಿದರೆ ಸುಮ್ಮನಿರಬೇಕಾ? ಎಂದು ಪ್ರಶ್ನಿಸಿದರು.
ಎಂಇಎಸ್ ಪುಂಡರಿಗೆ ತಕ್ಕ ಪಾಠ: ಸಚಿವ ಸಿ.ಸಿ. ಪಾಟೀಲ
ಗದಗ: ಪುಂಡಾಟಿಕೆ ನಡೆಸುತ್ತಿರುವ ಎಂಇಎಸ್ ಕಾರ್ಯಕರ್ತರಿಗೆ ನಮ್ಮ ಸರ್ಕಾರ(BJP Government) ತಕ್ಕ ಪಾಠ ಕಲಿಸಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ(CC Patil) ಹೇಳಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಕರ್ನಾಟಕದ ಹೆಮ್ಮೆಯ ವ್ಯಕ್ತಿಗಳಾಗಿದ್ದು, ಅವರ ಮೂರ್ತಿಯನ್ನು ಭಗ್ನಗೊಳಿಸಿ ಮತ್ತು ಕನ್ನಡ ಧ್ವಜವನ್ನು ಸುಟ್ಟು ಅಪಮಾನ ಮಾಡಿದ್ದಾರೆ. ಈ ರೀತಿ ಪುಂಡಾಟಿಕೆಯನ್ನು ಬಿಟ್ಟು ಸಾಮರಸ್ಯದಿಂದ ಬದುಕುವುದನ್ನು ಮರಾಠಿಗರು ಕಲಿಯಬೇಕು ಎಂದು ಹೇಳಿದರು.
Belagavi: ಬಾಯ್ಬಿಡದ ಸಾಹಿತಿ, ನಟರ ವಿರುದ್ಧ ಆಕ್ರೋಶ
ಮಹಾರಾಷ್ಟ್ರದಲ್ಲಿ(Maharashtra) ರಾಜ್ಯದ ವಾಹನಗಳ ಮೇಲೆ ಕಲ್ಲು ತೂರಾಟ ಹಿನ್ನೆಲೆ ಪ್ರತಿಕ್ರಿಯಿಸಿದ ಸಚಿವರು, ಮಹಾರಾಷ್ಟ್ರದಲ್ಲಿ ರಾಜ್ಯದ ಕಾರುಗಳಿಗೆ ಕಲ್ಲು ತೂರಾಟ ಮಾಡಿದ್ದು ತಪ್ಪು. ಮಹಾರಾಷ್ಟ್ರದ ಕಾರುಗಳೂ ಕರ್ನಾಟಕದಲ್ಲಿ ಸಂಚರಿಸುತ್ತವೆ. ಆದರೆ ಶಾಂತಿಪ್ರಿಯರಾದ ಕನ್ನಡಿಗರು(Kannadigas) ಇಂತಹ ಕೆಲಸ ಮಾಡುವುದಿಲ್ಲ. ಆದರೆ ಆ್ಯಕ್ಷನ್ ಆ್ಯಂಡ್ ರಿಯಾಕ್ಷನ್ ಇರುತ್ತದೆ. ಅದನ್ನು ಮಹಾರಾಷ್ಟ್ರದ ಜನ ಅರಿಯಬೇಕು. ವಿಕೋಪಕ್ಕೆ ಹೋದರೆ ನಾವೂ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಮಹಾರಾಷ್ಟ್ರ ಸರ್ಕಾರ(Government of Maharashtra) ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದ್ದು, ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಶಿವಸೇನೆ ಈ ಕೃತ್ಯ ಮಾಡುತ್ತಿದೆ. ಬೆಳಗಾವಿ ಕರ್ನಾಟಕದ(Karnataka) ಅವಿಭಾಜ್ಯ ಅಂಗವಾಗಿದ್ದು, ಅದನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಬೆಳಗಾವಿ ಅಧಿವೇಶನ(Belagavi Assembly Session) ಯಶಸ್ವಿಯಾದರೆ ಕರ್ನಾಟಕ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ ಎನ್ನುವ ಉದ್ದೇಶಕ್ಕೆ ಎಂಇಎಸ್‌ನವರು ಉದ್ದೇಶ ಪೂರ್ವಕವಾಗಿ ಈ ರೀತಿ ಕೃತ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.