ಬೆಳಗಾವಿ[ನ.29]: ಮಾಜಿ ಸ್ಪೀಕರ್ ರಮೇಶ ಕುಮಾರ್ ಮಾನಸಿಕ ಅಸ್ವಸ್ಥನ ರೀತಿ ಮಾತನಾಡಿದ್ದಾರೆ. ಎರಡು ನಾಲಿಗೆ, ನಡೆ ಇರೋ ವ್ಯಕ್ತಿಯನ್ನು ಜನ ನಂಬೊಕೆ ಸಾಧ್ಯವಿಲ್ಲ ಎಂದು ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಅವರು ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಜಿಲ್ಲೆಯ ಗೋಕಾಕ್ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅನರ್ಹರು ಸೋಲಬೇಕು‌, ಸಂವಿಧಾನದ ಗೆಲ್ಲಬೇಕು ಎಂದು ಹೇಳಿಕೆ ನೀಡಿದ ರಮೇಶ ಕುಮಾರ್ ಹೇಳಿಕೆ ಬಾಲಿಷವಾದ ಹೇಳಿಕೆಯಾಗಿದೆ.  ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ರಾಜೀನಾಮೆ ಅಂಗೀಕಾರ ಮಾಡಬೇಕೆಂದು ಹೇಳಿದೆ. ರಾಜ್ಯದಲ್ಲಿ ಸ್ಥಿರ ಸರ್ಕಾರಕ್ಕಾಗಿ ಉಪಚುನಾವಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅನರ್ಹರು ತಾಯಿ ಗಂಡರು ಎಂಬ ರಮೇಶ ಕುಮಾರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ನಡಹಳ್ಳಿ ಅವರು, ಕೆಟ್ಟ ಬದಲ ಬಳಕೆ ಅವರ ಯೋಗ್ಯತೆ ತೋರಿಸುತ್ತದೆ. ಅವರು ಜನ ಪ್ರತಿನಿಧಿ ಆಗೋಕೆ ನಾಲಾಯಕ್ ಆಗಿದ್ದಾರೆ.  ಸ್ಪೀಕರ್ ಆಗಿದ್ದಾಗ ಯಾರ ಪರ ಚಮಚಾಗಿರಿ ಮಾಡಿದ್ದಾರೆ ಎಂಬುದು ಗೊತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಯಾರು ಚಮಚಾ ಎಂಬುದು ಗೊತ್ತಿದೆ ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.