ಬಕೆಟ್ ಹಿಡಿದ್ರೆ ಮಂತ್ರಿ ಸ್ಥಾನ : ಅವರ ಯೋಗ್ಯತೆ ಗೊತ್ತಿದೆ ಎಂದ ಬಿಜೆಪಿ ಮುಖಂಡ

ಬಕೆಟ್ ಹಿಡಿದವರಿಗೆ ಮಾತ್ರ ಮಂತ್ರಿ ಸ್ಥಾನ ಸಿಗಲಿದೆ. ಆ ವ್ಯಕ್ತಿ ಯೋಗ್ಯತೆ ನನಗೂ ಗೊತ್ತಿದೆ ಎಂದು ಅಪ್ಪಚ್ಚು ರಂಜನ್ ಅಸಮಾಧಾನಹೊರಹಾಕಿದ್ದಾರೆ. 

BJP MLA Appachchu ranjan slams CP yogeshwar snr

 ಕೊಡಗು (ಜ.16):  ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಅಸಮಾಧಾನಗಳು ವ್ಯಕ್ತವಾಗುತ್ತಲೇ ಇದೆ. ಇದೀಗ ಅಸಮಾಧಾನಗೊಂಡವರ ಸಾಲಿಗೆ ಮತ್ತೋರ್ವ ಮುಖಂಡರು ಸೇರ್ಪಡೆಯಾಗಿದ್ದಾರೆ. 

ಸರ್ಕಾರದ ವಿರುದ್ಧ ಇದೀಗ ಕೊಡಗಿನ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ಹೊರಹಾಕಿದ್ದು ಆಕ್ರೋಶ  ವ್ಯಕ್ತಪಡಿಸಿದ್ದಾರೆ. 
 
ಬಕೆಟ್ ಹಿಡಿದವರಿಗೆ ಸಚಿವ ಸ್ಥಾನ ಕೊಡಲಾಗ್ತಿದೆ. ನಾವು ಪ್ರಾಮಾಣಿಕವಾಗಿದ್ದಕ್ಕೆ ನಮಗೆ ಸ್ಥಾನ ಸಿಗಲಿಲ್ಲ. ಪಕ್ಷದ ವಿಚಾರ ಬೀದಿಗೆ ಬರಬಾರದು ಅಂತ ಸುಮ್ಮನಿದ್ದೆವು.  ಸಂಘ ಪರಿವಾರ ಹೇಳಿದ ಹಾಗೆ ಕೇಳ್ಕೊಂಡು ಕುಳಿತಿದ್ದೆ ಎಂದು ಅಪ್ಪಚ್ಚು ರಂಜನ್ ಹೇಳಿದ್ದಾರೆ. 

ಸಿ.ಪಿ ಯೋಗೇಶ್ವರ್ ವಿರುದ್ಧ ಅಪ್ಪಚ್ಚು ರಂಜನ್ ಕಿಡಿ ಕಾರಿದ್ದು ಅವರು ಏನೆಲ್ಲಾ ಮಾಡಿದ್ದಾರೆ ಎಂದು ಗೊತ್ತಿದೆ.  ನಾನು ಹುಣಸೂರು  ಉಪ ಚುನಾವಣಾ ಉಸ್ತುವಾರಿ ಆಗಿದ್ದೆ. ಯೋಗೇಶ್ವರ್ ಬಗ್ಗೆ ವಿಶ್ವನಾಥ್ ಹೇಳಿರುವುದರಲ್ಲಿ ಸತ್ಯ ಇದೆ ಎಂದು ಅಪ್ಪಚ್ಚು ರಂಜನ್ ಹೇಳಿದ್ದಾರೆ.  

ಚುನಾವಣೆಗೆ ಎರಡು ದಿನ ಮುಂಚೆ ಏನು ಮಾಡಿದ್ದಾರೆ ಎಂದು ನನಗೆ ಗೊತ್ತಿದೆ. ವಿಶ್ವನಾಥ್ ಸೋಲುವುದಕ್ಕೆ ಯೋಗೇಶ್ವರ್ ನೇರ ಕಾರಣ ಎಂದು  ಸಿ.ಪಿ. ಯೋಗೇಶ್ವರ್ ವಿರುದ್ಧ ಅಪ್ಪಚ್ಚು ರಂಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಿಜೆಪಿಯಲ್ಲಿ ಸಿದ್ಧವಾಗುತ್ತಿದೆ ಮಾಸ್ಟರ್ ಪ್ಲಾನ್ : ಭರ್ಜರಿ ಗೆಲುವಿವಾಗಿ ತಂತ್ರಗಾರಿಕೆ .

ಅಂಥವರಿಗೆ ಸಚಿವ ಸ್ಥಾನ ಕೊಡುವುದು ದುರಂತದ ಸಂಗತಿ. ಬಿಜೆಪಿಯ ಬೆಳವಣಿಗೆಗೆ ದುಡಿದವರನ್ನ ಕಡೆಗಣಿಸಲಾಗಿದೆ. ಮುಂದಿನ ಹತ್ತು ದಿನದೊಳಗೆ ಕೇಂದ್ರ ನಾಯಕರ ಭೇಟಿ ಮಾಡಿ  ಎಲ್ಲಾ ವಿಚಾರವನ್ನು ನಾಯಕರಿಗೆ ವಿವರಿಸುತ್ತೇವೆ ಎಂದು ಮಡಿಕೇರಿಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಹೇಳಿಕೆ ನೀಡಿದ್ದಾರೆ. 

ಜಮೀರ್ ಅಹಮದ್ ಕ್ಷೇತ್ರಕ್ಕೆ ವಿಶೇಷ ಅನುದಾನ ನೀಡಿರುವ ವಿಚಾರವಾಗಿಯೂ ಮಾತನಾಡಿರುವ ಅಪ್ಪಚ್ಚು ರಂಜನ್ ಸರ್ಕಾರದ ನಡೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿದೆ. ಪ್ರಕೃತಿ ವಿಕೋಪಕ್ಕೆ ಒಳಗಾದ ಜಿಲ್ಲೆಗಳಿಗೆ ಆದ್ಯತೆಯಲ್ಲಿ ಅನುದಾನ ಕೊಡಬೇಕಿತ್ತು ಎಂದು ಅಪ್ಪಚ್ಚು ರಂಜನ್ ಹೇಳಿದರು. 

Latest Videos
Follow Us:
Download App:
  • android
  • ios