ತುಮಕೂರು [ಸೆ.20]:  ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಸೋತು ಕುಳಿತು ಅಭ್ಯಾಸವಿಲ್ಲ. ಹೀಗಾಗಿ ಆರು ತಿಂಗಳಿನಲ್ಲಿ ಸರ್ಕಾರ ಬೀಳುತ್ತದೆ ಎನ್ನುತ್ತಾರೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವ್ಯಂಗ್ಯವಾಡಿದ್ದಾರೆ. 

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗೌಡರಿಗೆ ಅದೊಂದು ಚಟ. ಮತ್ತೆ ಇನ್ನೊಂದು ಎಲೆಕ್ಷನ್‌ ಮಾಡಿಸುವ ಆಸೆ ಅವರಿಗಿದೆ ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ವೇಳೆ ಹಾಸನ ಉಸ್ತುವಾರಿ ಸ್ಥಾನಕ್ಕೆ ಸಂಬಂಧಿಸಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಹಾಸನ ಕರ್ನಾಟಕ ರಾಜ್ಯದ ಒಳಗೇ ಇದೆ. ಹಾಸನವನ್ನು ಯಾರಿಗೂ ಬರೆದುಕೊಟ್ಟಿಲ್ಲ, ಅಷ್ಟಕ್ಕೂ ಅದೇನು ರೇವಣ್ಣನ ಸಾಮ್ರಾಜ್ಯವೇ ಅಥವಾ ತುಮಕೂರು ನನ್ನ ಸಾಮ್ರಾಜ್ಯವೇ ಎಂದು ಪ್ರಶ್ನಿಸಿದರು. ಹಾಸನ ನಿಭಾಯಿಸುವ ಶಕ್ತಿ ನನಗಿದೆ ಎಂದೇ ತುಮಕೂರಿನ ಜೊತೆಗೆ ಆ ಜಿಲ್ಲೆಯ ಉಸ್ತುವಾರಿ ಕೊಟ್ಟಿದ್ದಾರೆ ಎಂದರು.