ಮಂಡ್ಯ(ಸೆ.30): ಜಿಲ್ಲಾ ಮಂತ್ರಿ ಆರ್‌ .ಅಶೋಕ್‌ ಅವರು ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭ ಅವರಿಗೆ ತೀವ್ರ ಇರುಸು ಮುರುಸು ಉಂಟಾಗಿದೆ. ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ಪಟ್ಟಣದಲ್ಲಿ ಆರ್. ಅಶೋಕ್ ಅವರಿಗೆ ತಮ್ಮ ಪಕ್ಷದವರಿಂದಲೇ ಮುಜುಗರ ಅನುಭವಿಸಬೇಕಾದ ಸಂದರ್ಭ ಎದುರಾಗಿದೆ.

ಶ್ರೀರಂಗಪಟ್ಟಣದಲ್ಲಿ ಬಿಜೆಪಿಯ ಎರಡು ಗುಂಪು ಪ್ರತ್ಯೇಕವಾಗಿ ಜಿಲ್ಲಾ ಮಂತ್ರಿ ಆರ್‌ .ಅಶೋಕ್‌ ಅವರನ್ನು ಅಭಿನಂದಿಸಿತು. ಈ ವೇಳೆ ಜಿಲ್ಲಾ ಮಂತ್ರಿಗಳಿಗೆ ಇರುಸು ಮುರುಸು ಉಂಟಾಯಿತು. ತಾಲೂಕಿನ ಬಾಬುರಾಯನಕೊಪ್ಪಲು ಹಾಗೂ ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮುಖಂಡರು, ಬಿಜೆಪಿ ಕಾರ್ಯಕರ್ತರು ಎರಡು ಕಡೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಸ್ವಾಗತಿಸಿದರು. ಕ್ಷೇತ್ರದಲ್ಲಿ ತಮ್ಮ ಪಕ್ಷದ ಎರಡು ರಾಜಕೀಯ ಬಣ ಅಭಿನಂದಿಸುವ ಮೂಲಕ ಸಚಿವರೆದುರು ಆಂತರಿಕ ಕಲಹ ಸ್ಫೋಟಗೊಂಡಂತಾಗಿದೆ.

ಸಂಭ್ರಮದ ದಸರಾಗೆ ಸಾಹಿತಿ ಭೈರಪ್ಪ ಚಾಲನೆ

ಕಾನೂನು ಪ್ರಕಾರ ಸವಲತ್ತು:

ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿಯ ಕುವೆಂಪು ವೃತ್ತದ ಬಳಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವ ಆರ್‌ .ಅಶೋಕ್‌ , ಶ್ರೀರಂಗಪಟ್ಟಣ ದಸರಾ ಆಚರಣೆ ಸಂಬಂಧ ಸ್ಥಳೀಯ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎಂಬುದು ಸುಳ್ಳು. ಕಾನೂನು ಪ್ರಕಾರ ಶಾಸಕರಿಗೆ ಏನೆಲ್ಲ ಸವಲತ್ತುಗಳು ಸಿಗಬೇಕು ಅವುಗಳನ್ನು ಶಾಸಕರಿಗೆ ನೀಡಲಾಗಿದೆ ಎಂದರು. ಕಾನೂನಾತ್ಮಕವಾಗಿ ಶ್ರೀರಂಗಪಟ್ಟಣ ದಸರಾ ಆಚರಣೆ ನಡೆಯುತ್ತಿದೆ. ಇದರಲ್ಲಿ ಯಾರ ಹಸ್ತಕ್ಷೇಪ ಇಲ್ಲ ಎಂದು ಮೈಸೂರಿನತ್ತ ಜಿಲ್ಲಾ ಮಂತ್ರಿಗಳು ಪ್ರಯಾಣ ಬೆಳೆಸಿದರು.

ಮಂಡ್ಯ: KRS ಸೌಂದರ್ಯವನ್ನು ಆಗಸದಿಂದ ಕಣ್ತುಂಬಿಕೊಳ್ಳಿ